Skin Tanning: ಬಿಸಿಲಿಗೆ ಕಪ್ಪಾದ ಚರ್ಮಕ್ಕೆ ಗುಡ್ ಬೈ ಹೇಳಿ! ದುಬಾರಿ ಕ್ರೀಮ್ ಬೇಡ, ಈ 5 ಮನೆಮದ್ದು ಸಾಕು

Published : Mar 23, 2026, 05:49 PM IST
Skin Tanning

ಸಾರಾಂಶ

ಬೇಸಿಗೆ ಶುರುವಾಯ್ತು ಅಂದ್ರೆ ಸಾಕು, ಸ್ಕಿನ್ ಕಪ್ಪಾಗೋ ಚಿಂತೆ ಶುರು. ಸುಡು ಬಿಸಿಲು ಚರ್ಮವನ್ನು ಟ್ಯಾನ್ ಮಾಡುತ್ತೆ. ಮೊದಲೇ ಸ್ವಲ್ಪ ಕೇರ್ ಮಾಡಿದ್ರೆ, ಸ್ಕಿನ್ ಡ್ಯಾಮೇಜ್ ಆಗೋದನ್ನು ತಪ್ಪಿಸಬಹುದು. ಇವು ಚರ್ಮಕ್ಕೆ ತಂಪು ನೀಡಿ, ಹೊಳಪು ಕೊಡುತ್ತವೆ.

ಬೇಸಿಗೆಯಲ್ಲಿ ಸ್ಕಿನ್ ಟ್ಯಾನ್ ಕಾಮನ್. ಅಲೋವೆರಾ ಜೆಲ್, ಸೌತೆಕಾಯಿ-ರೋಸ್ ವಾಟರ್, ಟೊಮೆಟೊ ಜ್ಯೂಸ್, ಎಳನೀರಿನಂತಹ ಸಿಂಪಲ್ ಮನೆಮದ್ದು ಬಳಸಿ ಟ್ಯಾನಿಂಗ್ ಕಡಿಮೆ ಮಾಡಬಹುದು. ಇವು ಚರ್ಮಕ್ಕೆ ತಂಪು ನೀಡಿ, ಹೊಳಪು ಕೊಡುತ್ತವೆ.

ಬೇಸಿಗೆ ಶುರುವಾಯ್ತು ಅಂದ್ರೆ ಸಾಕು, ಸ್ಕಿನ್ ಕಪ್ಪಾಗೋ ಚಿಂತೆ ಶುರು. ಸುಡು ಬಿಸಿಲು ಚರ್ಮವನ್ನು ಟ್ಯಾನ್ ಮಾಡುತ್ತೆ. ಮೊದಲೇ ಸ್ವಲ್ಪ ಕೇರ್ ಮಾಡಿದ್ರೆ, ಸ್ಕಿನ್ ಡ್ಯಾಮೇಜ್ ಆಗೋದನ್ನು ತಪ್ಪಿಸಬಹುದು. ದುಬಾರಿ ಪ್ರಾಡಕ್ಟ್‌ಗಳ ಬದಲು, ಟ್ಯಾನಿಂಗ್ ತಡೆಯೋಕೆ ಈ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ. ಅಂತಹ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿಯೋಣ.

ಸ್ಕಿನ್ ಟ್ಯಾನಿಂಗ್ ತಡೆಯುತ್ತೆ ಮೊಸರು ಮತ್ತು ಕಡಲೆಹಿಟ್ಟಿನ ಪ್ಯಾಕ್

ಮೊಸರಲ್ಲಿರುವ ಲ್ಯಾಕ್ಟಿಕ್ ಆಸಿಡ್, ಕಪ್ಪಾದ ಚರ್ಮದ ಬಣ್ಣವನ್ನು ತಿಳಿಗೊಳಿಸಲು ಸಹಾಯ ಮಾಡುತ್ತೆ. ಸ್ಕಿನ್ ಟ್ಯಾನಿಂಗ್ ಜೊತೆಗೆ ಹೊಳಪು ಬೇಕಂದ್ರೆ ಕಡಲೆಹಿಟ್ಟು ಬಳಸಿ. ಇದು ಚರ್ಮವನ್ನು ಕ್ಲೀನ್ ಮಾಡುತ್ತೆ, ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಎರಡನ್ನೂ ಮಿಕ್ಸ್ ಮಾಡಿ ಪೇಸ್ಟ್ ಮಾಡ್ಕೊಂಡು, ಮುಖ, ಕೈ-ಕಾಲಿಗೆ ಹಚ್ಚಿ 15 ನಿಮಿಷ ಬಿಡಿ.

ಅಲೋವೆರಾ ಜೆಲ್‌ನಿಂದ ಟ್ಯಾನ್ ಆದ ಚರ್ಮಕ್ಕೆ ರಿಲೀಫ್

ಅಲೋವೆರಾ ಜೆಲ್ ಟ್ಯಾನ್ ಆದ ಚರ್ಮಕ್ಕೆ ತಂಪು ನೀಡುತ್ತೆ ಮತ್ತು ಬಿಸಿಲಿನಿಂದಾದ ಡ್ಯಾಮೇಜ್ ಸರಿಪಡಿಸುತ್ತೆ. ರಾತ್ರಿ ಮಲಗುವ ಮುನ್ನ ಫ್ರೆಶ್ ಅಲೋವೆರಾ ಜೆಲ್ ಹಚ್ಚಿದರೆ, ಟ್ಯಾನಿಂಗ್ ನಿಧಾನವಾಗಿ ಕಡಿಮೆಯಾಗುತ್ತೆ. ಇದು ತುಂಬಾನೇ ಪಾಪ್ಯುಲರ್ ಆ್ಯಂಟಿ-ಟ್ಯಾನಿಂಗ್ ಮನೆಮದ್ದು.

ಸೌತೆಕಾಯಿ ಮತ್ತು ರೋಸ್ ವಾಟರ್‌ನಿಂದ ಸ್ಕಿನ್ ಟ್ಯಾನಿಂಗ್ ತೆಗೆಯಿರಿ

ಬೇಸಿಗೆಯಲ್ಲಿ ಸೌತೆಕಾಯಿ ಹೇರಳವಾಗಿ ಸಿಗುತ್ತೆ. ಇದು ದೇಹದಲ್ಲಿ ನೀರಿನಂಶ ಕಾಪಾಡುತ್ತೆ. ಹಾಗೆಯೇ, ಚರ್ಮಕ್ಕೆ ಹಚ್ಚಿದರೆ ತಂಪು ನೀಡುತ್ತೆ. ಸೌತೆಕಾಯಿ ರಸಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿ ಮುಖ, ಕೈ-ಕಾಲಿಗೆ ಹಚ್ಚಿ. ಇದು ಟ್ಯಾನಿಂಗ್ ಕಡಿಮೆ ಮಾಡುವುದರ ಜೊತೆಗೆ ಫ್ರೆಶ್ ಫೀಲ್ ಕೊಡುತ್ತೆ.

ಚರ್ಮಕ್ಕೆ ಟೊಮೆಟೊ ರಸ ಹಚ್ಚಿ

ಟೊಮೆಟೊದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ, ಸ್ಕಿನ್ ಟ್ಯಾನಿಂಗ್ ಅನ್ನು ನಿಧಾನವಾಗಿ ಕಡಿಮೆ ಮಾಡುತ್ತೆ. ಟೊಮೆಟೊ ರಸವನ್ನು ಹತ್ತಿ (ಕಾಟನ್) ಸಹಾಯದಿಂದ ಚರ್ಮಕ್ಕೆ ಹಚ್ಚಿ. 10 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ಸ್ಕಿನ್ ಫಳಫಳ ಹೊಳೆಯುತ್ತೆ.

ಚರ್ಮಕ್ಕೆ ಎಳನೀರು ಬಳಸಿ

ಎಳನೀರನ್ನು ಕುಡಿಯೋದು ಮಾತ್ರವಲ್ಲ, ಚರ್ಮಕ್ಕೆ ಹಚ್ಚಿದರೂ ತುಂಬಾ ಪ್ರಯೋಜನವಿದೆ. ಪ್ರತಿದಿನ ಹತ್ತಿ ಬಳಸಿ ಎಳನೀರನ್ನು ಚರ್ಮಕ್ಕೆ ಹಚ್ಚಿ, ಟ್ಯಾನಿಂಗ್ ಕಡಿಮೆ ಮಾಡಿಕೊಳ್ಳಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಮಗೆ ಪ್ರತಿದಿನ ಇದೆಲ್ಲಾ ಆಗ್ತಿದೆ ಅಂದ್ರೆ… ನೀವು 100% ಆರೋಗ್ಯದಿಂದಿದ್ದೀರಿ
Kangana Ranaut Diet: ಅಸಿಡಿಟಿ, ಗ್ಯಾಸ್ಟ್ರಿಕ್‌ಗೆ ಕಂಗನಾ ಡಯಟ್ ರಾಮಬಾಣ! ನೀವೂ ಟ್ರೈ ಮಾಡಿ ನೋಡಿ