ಕೂದಲ ಆರೋಗ್ಯಕ್ಕೆ ಭೃಂಗರಾಜನೆಂಬ ಆಪ್ತ...

Published : Mar 14, 2019, 03:52 PM IST
ಕೂದಲ ಆರೋಗ್ಯಕ್ಕೆ ಭೃಂಗರಾಜನೆಂಬ ಆಪ್ತ...

ಸಾರಾಂಶ

ಕೂದಲಿನ ಆರೋಗ್ಯಕ್ಕೆ ಕೆಲವು ಸೊಪ್ಪಿನಿಂದ ಮನೆಯಲ್ಲಿಯೇ ತಯಾರಿಸಿದ ಎಣ್ಣೆ ಅತ್ಯುತ್ತಮ ಫಲಿತಾಂಶ ನೀಡಬಲ್ಲದು. ಅದರಲ್ಲಿ ಭೃಂಗರಾಜ ಎಣ್ಣೆಯಂತೂ ದಿ ಬೆಸ್ಟ್...ಇದನ್ನು ತಯಾರಿಸುವುದು ಹೇಗೆ? 

ಕೂದಲು ತುಂಬಾ ಉದುರುತ್ತಿದ್ದರೆ, ತುಂಡಾಗುತ್ತಿದ್ದರೆ ಈ ಬಗ್ಗೆ ತುಂಬಾ ಯೋಚನೆ ಮಾಡಬೇಡಿ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕೂದಲು ಉದುರುವುದಕ್ಕೆ ಹಲವಾರು ಆಯುರ್ವೇದಿಕ್ ಔಷಧಿ, ಎಣ್ಣೆ ಬಂದಿವೆ. ಅವುಗಳಲ್ಲಿ ಭೃಂಗರಾಜ ಇದೆ ಎಂದು ಹೇಳಲಾಗುತ್ತದೆ. ಇಂಥ ಎಣ್ಣೆ ಕೊಳ್ಳೋ ಬದಲು, ಮನೆಯಲ್ಲಿಯೇ ಇದನ್ನು ತಯಾರಿಸಿ...

ಈ ಎಣ್ಣೆಯಿಂದ ಕೂದಲು ಉದುರುವುದು, ಬಿಳಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ತೆಲೆಹೊಟ್ಟು, ಕೆರೆತ ಸಮಸ್ಯೆಯೂ ದೂರವಾಗುತ್ತವೆ. ಇದನ್ನು ತಯಾರಿಸೋದು ಹೇಗೆ?

  • ಮೊದಲಿಗೆ ಭೃಂಗರಾಜದ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸ ತೆಗೆದಿಟ್ಟುಕೊಳ್ಳಿ. 
  • ಈ ರಸವನ್ನು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯಲ್ಲಿ ಹಾಕಿ ಮಿಕ್ಸ್ ಮಾಡಿ. 
  • ಈಗ ಎರಡನ್ನು ಸಣ್ಣ ಬೆಂಕಿಯಲ್ಲಿ ಬಿಸಿ ಮಾಡಿ. 
  • ರಸ ಚೆನ್ನಾಗಿ ಎಣ್ಣೆಯಲ್ಲಿ ಮಿಕ್ಸ್ ಆಗಿ, ಕೇವಲ ಎಣ್ಣೆ ಮಾತ್ರ ಉಳಿದ ಮೇಲೆ ಅದನ್ನು ಸ್ಟೌನಿಂದ ಇಳಿಸಿ. 
  • ಕೂದಲು ಉದುರುವ ಸಮಸ್ಯೆ ಇದ್ದರೆ ಈ ಎಣ್ಣೆಗೆ ನೆಲ್ಲಿಕಾಯಿ ರಸವನ್ನೂ ಬೆರೆಸಿ. ಇದರಿಂದ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cockroache Viral: ಜಿರಳೆ ನೋಡಿದ್ರೆ ಹುಡುಗಿಯರು ಏಕೆ ಭಯಪಡುತ್ತಾರೆ? ಇದರ ಹಿಂದಿದೆ ಶಾಕಿಂಗ್ ವೈಜ್ಞಾನಿಕ ಕಾರಣ!
ಸಿಕ್ಸ್ ಪ್ಯಾಕ್ ಕ್ರೇಜ್‌ನಲ್ಲಿ ಪ್ರೋಟೀನ್ ಪೌಡರ್ ಮೊರೆ ಹೋಗ್ತಿದ್ದೀರಾ?: ಸುಮ್ನೆ ಕಿಡ್ನಿ, ಲಿವರ್ ಹಾಳು ಮಾಡ್ಕೋಬೇಡಿ!