ಕಾವಿತೊಟ್ಟು ಜನರ ವಂಚಿಸುತ್ತಿದ್ದ ಇಬ್ಬರಿಗೆ ಧರ್ಮದೇಟು

By Anusha Kb  |  First Published Apr 1, 2022, 1:32 AM IST
  • ಇಬ್ಬರು ನಕಲಿ ಸ್ವಾಮೀಜಿಗಳಿಗೆ ಗ್ರಾಮಸ್ಥರಿಂದ ಧರ್ಮದೇಟು
  • ಕವಿ ತೊಟ್ಟು ಗ್ರಾಮಸ್ಥರಿಗೆ ವಂಚಿಸುತ್ತಿದ್ದ ನಕಲಿಗಳು
  • ಹಾವೇರಿಯ ಸವಣೂರಿನ ಕಾರಡಗಿ ಗ್ರಾಮದಲ್ಲಿ ಘಟನೆ

ಹಾವೇರಿ(ಮಾ.31): ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರು ನಕಲಿ ಸ್ವಾಮೀಜಿಗಳಿಗೆ (Fake swamiji) ಧರ್ಮದೇಟು ಕೊಟ್ಟಿರುವ ಘಟನೆ ಸವಣೂರು ತಾಲೂಕಿನ ಕಾರಡಗಿ (Kaaradagi)ಗ್ರಾಮದ ಬಳಿ ಇರುವ ಜೇಕಿನಕಟ್ಟಿರಸ್ತೆಯಲ್ಲಿ ಗುರುವಾರ ಸಂಭವಿಸಿದೆ. ವಿಜಯನಗರ (Vijayanagara) ಜಿಲ್ಲೆಯ ಮೂಲದವರಾಗಿರುವ ಇವರು ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ನಂತರ ಗ್ರಾಮದ ಹೊರವಲಯಕ್ಕೆ ಬಂದು ಕಾವಿ ಕಳಚಿ ಬೇರೆ ಬಟ್ಟೆ (cloth) ತೊಟ್ಟು ಓಡಾಡುತ್ತಿದ್ದರು ಎಂಬ ಆರೋಪದ ಮೇಲೆ ಇಬ್ಬರನ್ನು ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿದ ಗ್ರಾಮಸ್ಥರು ನಂತರ ಬಿಟ್ಟು ಕಳುಹಿಸಿದ್ದಾರೆ.

ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಗೆ ಇಲ್ಲಸಲ್ಲದ್ದು ಹೇಳುತ್ತಿದ್ದರು. ಮಾದಾಪುರ (Madapura), ಕಾರಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾವಿ ತೊಟ್ಟು ಮನೆಮನೆಗೆ ಹೋಗಿ ಜನರಿಂದ ಹಣ (Money) ಸಂಗ್ರಹಿಸ್ತಿದ್ದರು ಎಂಬ ಆರೋಪವಿದೆ. ಕಾವಿ ತೊಟ್ಟು ಹಿಂದೂ ಧರ್ಮಕ್ಕೆ (Hindu Religion) ಅವಮಾನ ಮಾಡುತ್ತಿದ್ದೀರಿ ಎಂದು ಜನರು ಧರ್ಮದೇಟು ನೀಡಿದ್ದಾರೆ. ಧರ್ಮದೇಟು ನೀಡಿ ಕಾವಿ ಕಳಚಿ ಬೇರೆ ಬಟ್ಟೆ ಹಾಕಿಸಿ ಗ್ರಾಮಸ್ಥರು ಕಳಿಸಿದ್ದಾರೆ. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ ಇಬ್ಬರು ನಕಲಿ ಸ್ವಾಮೀಜಿಗಳಿಗೆ ಧರ್ಮದೇಟು ನೀಡಿ ಕಳಿಸಿದ್ದ ವಿಡಿಯೋ ವೈರಲ್‌ ಆಗಿದೆ. ಸವಣೂರು (Savanur) ಪೊಲೀಸ್‌ ಠಾಣೆ (Police station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Latest Videos

undefined

ಹುಡುಗಿಗೆ ವರನ ವೇಷ ಹಾಕಿ ಹರಕೆ ಸಲ್ಲಿಕೆ, ಹೀಗೆ ಮಾಡಿದ್ರೆ ಆರೋಗ್ಯ ಭಾಗ್ಯ!

ವರ್ಷದ ಹಿಂದೆ ಬೆಂಗಳೂರಿನಲ್ಲಿ ಪೂಜೆ ಮಾಡುವ ನೆಪದಲ್ಲಿ, ಹೋಮ ಹವನ ಮಾಡಿಸಿ ಮನೆಗಳ್ಳತನ ಮಾಡುತ್ತಿದ್ದ ನಕಲಿ ಸ್ವಾಮೀಜಿಗಳನ್ನು ಬೆಂಗಳೂರಿನ (Banglore) ಸಂಪಿಗೆಹಳ್ಳಿ (Sampige Halli) ಪೊಲೀಸರು ಬಂಧಿಸಿದ್ದರು. ಬಂಧಿತರನ್ನ ನಾಗರಾಜ್ (Nagaraj) ಹಾಗೂ ಲಕ್ಷ್ಮಣ್ (Laxman)ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಮೊದಲು ಸ್ವಾಮೀಜಿಗಳ ರೀತಿ ಎಂಟ್ರಿ ಕೊಡುತ್ತಿದ್ದರು. ಬಳಿಕ ಮನೆಯ ವಿಚಾರಗಳನ್ನು ಅರಿತು ಮರುದಿನ ಕಳ್ಳತನ (theft) ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.  ಈ ಖದೀಮರ ಗ್ಯಾಂಗ್‌ ದೊಡ್ಡ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. 

ಸ್ವಾಮೀಜಿಗಳ ವೇಷದಲ್ಲಿ ಮನೆಗೆ ತೆರಳುತಿದ್ದ ಈ ಗ್ಯಾಂಗ್‌, ನಿಮ್ಮ ಮನೆಯಲ್ಲಿ ದೋಷ ಇದೆ ಎಂದು ಹೇಳಿ, ದೋಷ ನಿವಾರಣೆಗೆ ಮಹಾ ಪೂಜೆ ಮಾಡಬೇಕು ಎಂದು ನಂಬಿಸುತ್ತಿದ್ದರು. ಇವರ ಮಾತು ಕೇಳಿದ ಮನೆ ಮಾಲೀಕರು ಪೂಜೆಗೆ (Pooja)  ಒಪ್ಪುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ಸ್ವಾಮೀಜಗಳು ಮನೆಯಲ್ಲಿದ್ದ ಚಿನ್ನವನ್ನು ಒಂದೆಡೆ ಇಡುವಂತೆ ಹೇಳುತ್ತಿದ್ದರು. ಇವರ ಮಾತಿಗೆ ಒಪ್ಪಿದ ಮನೆಯ ಮಾಲೀಕರು ಚಿನ್ನವನ್ನೆಲ್ಲಾ (gold) ಒಂದು ಕಡೆ ಇಡುತ್ತಿದ್ದರು. 

ಕೇಜ್ರಿ ಸರ್ಕಾರದ ಸವಲತ್ತು ಬಳಸಿಕೊಳ್ಳಲು ಮುಂದಾದ ಯುವಕ : ಹುಡುಗಿ ವೇಷ ಧರಿಸಿ ಸಿಕ್ಕಿಬಿದ್ದ

ಈ ವೇಳೆ ಇವರ ಮನೆಯಲ್ಲಿ ಎಷ್ಟು ಚಿನ್ನ, ಒಡವೆ ಇದೆ ಎಂದು ಲೆಕ್ಕ ಹಾಕುತ್ತಿದ್ದರು. ಇದೇ ವೇಳೆ ಮನೆಯ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದರು. ಬಳಿಕ ರಾತ್ರಿ ವೇಳೆ ಮನೆಗೆ ಎಂಟ್ರಿ ಕೊಟ್ಟು ಕಳ್ಳತನ ಮಾಡುತ್ತಿದ್ದರು. ಸದ್ಯ ಬಂಧಿತರಿಂದ 180 ಗ್ರಾಂ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉದರ ನಿಮಿತಂ ಬಹುಕೃತ ವೇಷಂ ಎಂಬ ಗಾದೆ ಮಾತಿನಿಂತೆ ಮೈ ಬಗ್ಗಿಸಿ ದುಡಿಯಲಾಗದ ಹಲವು ಕಿಡಿಗೇಡಿಗಳು ಹೀಗೆ ಸ್ವಾಮೀಜಿಗಳ ಸಾಧು ಸಂತರ ವೇಷ ಧರಿಸಿ ಕಳ್ಳದಂಧೆಯಲ್ಲಿ ತೊಡಗುತ್ತಿದ್ದಾರೆ. ಇಂತ ಕಳ್ಳ ಕಾಕಾರಿಂದ ಸಮುದಾಯಕ್ಕೂ ಅವಮಾನವಾಗುತ್ತಿದೆ.

 

click me!