ನವೀನ್‌ ಮೃತದೇಹ ತವರಿಗೆ: ಪ್ರಧಾನಿಗೆ ರಾಜೀವ್ ಚಂದ್ರಶೇಖರ್‌ ಧನ್ಯವಾದ

By Suvarna News  |  First Published Mar 21, 2022, 2:27 PM IST
  • ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಬಲಿಯಾದ ನವೀನ್‌
  • ಹಾವೇರಿಯ ರಾಣೆಬೆನ್ನೂರಿನ ಚಳಗೇರಿ ಮೂಲದ ನವೀನ್
  • ಉಕ್ರೇನ್‌ನಲ್ಲಿ ಮೆಡಿಕಲ್ ವ್ಯಾಸಾಂಗ ಮಾಡುತ್ತಿದ್ದ

ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಬಲಿಯಾದ ಕರ್ನಾಟಕದ ಯುವಕ ನವೀನ್ ಅವರ ಮೃತದೇಹವನ್ನು ತವರಿಗೆ ತರುವಲ್ಲಿ ಶ್ರಮಪಟ್ಟ ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಧನ್ಯವಾದ ಸಲ್ಲಿಸಿದ್ದಾರೆ. 

ಭಾರಿ ಅಪಾಯಗಳು ಮತ್ತು ಸವಾಲುಗಳ ನಡುವೆ ನವೀನ್ ಅವರ ಪಾರ್ಥಿವ ಶರೀರವನ್ನು ತವರಿಗೆ  ತರಲು ಶ್ರಮಿಸಿದ್ದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ  ನರೇಂದ್ರ ಮೋದಿ ಅವರಿಗೆ ಕರ್ನಾಟಕ ಸರ್ಕಾರ ಮತ್ತು ನವೀನ್ ಅವರ ಪೋಷಕರು ಹಾಗೂ ಜನತೆಯ  ಪರವಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಟ್ವಿಟ್ಟರ್‌ನಲ್ಲಿ ರಾಜೀವ್‌ ಚಂದ್ರಶೇಖರ್ ಅವರು ಪೋಸ್ಟ್ ಮಾಡಿದ್ದಾರೆ. 

ಭಾರಿ ಅಪಾಯಗಳು ಮತ್ತು ಸವಾಲುಗಳ ನಡುವೆ ನವೀನ್ ಅವರ ಪಾರ್ಥಿವ ಶರೀರವನ್ನು ತವರಿಗೆ ತರಲು ಶ್ರಮಿಸಿದ್ದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ಅವರಿಗೆ ಕರ್ನಾಟಕ ಸರ್ಕಾರ ಮತ್ತು ನವೀನ್ ಅವರ ಪೋಷಕರು ಹಾಗೂ ಜನತೆಯ ಪರವಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು 🙏🏻🙏🏻🙏🏻 pic.twitter.com/aIhiqb0XgA

— Rajeev Chandrasekhar 🇮🇳 (@Rajeev_GoI)

Latest Videos

undefined

ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಬಲಿಯಾದ ಮೆಡಿಕಲ್‌ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಪಾರ್ಥಿವ ಶರೀರ ಇಂದು ಸ್ವಗ್ರಾಮ ರಾಣಿಬೆನ್ನೂರು ತಾಲೂಕು ಚಳಗೇರಿಗೆ ತಲುಪಿದೆ. ನವೀನ್‌ ಪಾರ್ಥಿವ ಶರೀರವನ್ನು  ವೀರಶೈವ ಲಿಂಗಾಯದ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. 

ಕರ್ನಾಟಕ ಸಿಎಂ ಬೊಮ್ಮಾಯಿ ಕೂಡ ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಿಮ್ಮ ಪರಿಶ್ರಮದಿಂದಲೇ ನವೀನ್‌ ಮೃತದೇಹ ಭಾರತಕ್ಕೆ ಬಂದಿದೆ. ಇದಕ್ಕೆ ನಿಮ್ಮ ಕಾಳಜಿಯೇ ಕಾರಣ. ನಿಮ್ಮ ಈ ಕಾಳಜಿಗೆ ನಾನು ನವೀನ್‌ ಕುಟುಂಬದ ಪರವಾಗಿ ಮತ್ತು ಕರ್ನಾಟಕದ ಜನತೆ ಪರವಾಗಿ ಪ್ರಧಾನಿ ಮೋದಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇವೆ. ಅಲ್ಲದೆ, ದೇಶದ ಸಾವಿರಾರು ವಿದ್ಯಾರ್ಥಿಗಳನ್ನು ವಾಪಸ್‌ ಕರೆತಂದಿದ್ದಕ್ಕಾಗಿ ಕೂಡ ನಾನು ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿಎಂ ಕೃತಜ್ಞತೆ ಸಲ್ಲಿಸಿದ್ದರು. 

Haveri: ಮೆಡಿಕಲ್ ಕಾಲೇಜಿನಲ್ಲಿ ದೇಹದಾನದ ಪ್ರಕ್ರಿಯೆ ಹೇಗಿರುತ್ತದೆ.? ವೈದ್ಯರಿಂದ ವಿವರಣೆ
 

ಉಕ್ರೇನ್ ನಲ್ಲಿ ಮೃತಪಟ್ಟಿದ್ದ ರಾಣೆಬೆನ್ನೂರಿನ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಂಗಳೂರಿನಲ್ಲಿ ಬರಮಾಡಿಕೊಂಡು ಗೌರವ ನಮನಗಳನ್ನು ಸಲ್ಲಿಸಿದೆನು.

ನವೀನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಶ್ರಮಿಸಿದ ಪ್ರಧಾನಮಂತ್ರಿ ಜೀ ಹಾಗೂ ಜೀ ಅವರಿಗೆ ಧನ್ಯವಾದಗಳು. pic.twitter.com/SFWzlsJYNt

— Basavaraj S Bommai (@BSBommai)

ಇತ್ತ ನವೀನ್ ಮೃತದೇಹವನ್ನು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಮೆಡಿಕಲ್‌ ಕಾಲೇಜಿಗೆ ದಾನ ನೀಡಲು ನಿರ್ಧರಿಸಲಾಗಿದೆ. ನನ್ನ ಮಗನಿಗೆ ಚಿಕ್ಕಂದಿನಿಂದಲೂ ವೈದ್ಯನಾಗಿ ಜನರ ಸೇವೆ ಮಾಡಬೇಕು ಎಂಬ ಕನಸಿತ್ತು. ಅದು ಈಡೇರಲಿಲ್ಲ. ಅವನ ದೇಹ ಮಣ್ಣಲ್ಲಿ ಮಣ್ಣಾಗೋ ಬದಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ಈ ಮೂಲಕ ನನ್ನ ಮಗನ ಆಸೆ ಈಡೇರಲಿ ಎಂದು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದೆವು ಎಂದು ನವೀನ್ ತಾಯಿ ಹೇಳಿದ್ದಾರೆ. 

Haveri: ನವೀನ್ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ, ಪೋಷಕರಿಗೆ ಸಾಂತ್ವನ   

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ 21 ದಿನಗಳ ನಂತರ ತಾಯ್ನಾಡಿಗೆ ತಲುಪಿತು. ಸೋಮವಾರ ಮುಂಜಾನೆ 3 ಗಂಟೆ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ನವೀನ್‌ ಮೃತದೇಹವನ್ನು, ಕಾರ್ಗೋ ವಿಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಯ ಕುಟುಂಬಕ್ಕೆ ಹಸ್ತಾಂತರಿಸಿದ್ದರು.

click me!