Why shouldn't you dry clothes outside: ಭಾರತದಲ್ಲಿ ಎಲ್ಲಿ ಜಾಗ ಸಿಕ್ಕಿದರೂ ಸಾಕು, ಬಟ್ಟೆ ಒಣಗಿಸುತ್ತಾರೆ. ಟ್ರೇನ್‌ನಲ್ಲಿ, ಬಸ್‌ನಲ್ಲಿ ಕೂಡ ಹೀಗೆ ಬಟ್ಟೆ ಒಣಗಿಸೋದುಂಟು. ಆದರೆ ಅಮೆರಿಕದಲ್ಲಿ ಮನೆ ಮುಂದೆ ಏನಾದರೂ ಬಟ್ಟೆ ಒಣಗಿಸಿದರೆ ಮಾತ್ರ ದಂಡ ತೆರಬೇಕು. ಇದಕ್ಕೆ ಕೆಲವು ಕಾರಣಗಳು ಇವೆ.
Why shouldn't you dry clothes outside: ಅಮೆರಿಕದಲ್ಲಿ ಮನೆಗಳು ತುಂಬ ಸುಂದರವಾಗಿ ಕಾಣುತ್ತವೆ. ಅಲ್ಲಿ ಒಂದಿಷ್ಟು ಸಂಸ್ಕೃತಿ, ನಿಯಮ ಇದೆ. ಇದನ್ನು ಅರಿತು ಅಲ್ಲಿ ಬಟ್ಟೆ ಒಣಗಿಸೋದಿಲ್ಲ. HOA (Homeowners Association) ಎಂಬ ನಿಯಮ ಇದೆ. ಅಮೆರಿಕದ ವಸತಿ ಏರಿಯಾದಲ್ಲಿ (Communities) 'ಹೋಮ್ ಓನರ್ಸ್ ಅಸೋಸಿಯೇಷನ್' (HOA) ಎಂಬ ಸಮಿತಿ ಇರುತ್ತದೆ. ಇದು ಅಲ್ಲಿ ಶಿಸ್ತು, ಸೌಂದರ್ಯ ಕಾಪಾಡುತ್ತದೆ. ಹೊರಗಡೆ ಬಟ್ಟೆ ಒಣಗಿಸಿದರೆ ಮನೆ ಚೆನ್ನಾಗಿ ಕಾಣೋದಿಲ್ಲ, ಅಲ್ಲಿನ ಭೂಮಿ ಮೌಲ್ಯ ಕೂಡ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಬಟ್ಟೆ ಒಣಗಿಸೋಕೆ ಬಿಡೋದಿಲ್ಲ.
26
ಡ್ರೈಯರ್ (Dryer) ಬಳಕೆ ಮಾಡ್ತಾರೆ
ಅಮೆರಿಕದಲ್ಲಿರುವ ಮನೆಗಳಲ್ಲಿ ವಾಷಿಂಗ್ ಮೆಷಿನ್ ಜೊತೆಗೆ ಡ್ರೈಯರ್ ಇರುತ್ತದೆ. ಡ್ರೈಯರ್ ಅಂದರೆ 'ಬಟ್ಟೆ ಒಣಗಿಸುವ ಯಂತ್ರ'. ಬಟ್ಟೆ ತೊಳೆದ ಕೂಡಲೇ ಡ್ರೈಯರ್‌ಗೆ ಹಾಕಿದರೆ ಕೆಲವೇ ನಿಮಿಷಗಳಲ್ಲಿ ಆ ಬಟ್ಟೆ ಸಂಪೂರ್ಣವಾಗಿ ಒಣಗುತ್ತದೆ. ಇದರಿಂದ ಸಮಯ ಉಳಿಯುತ್ತದೆ. ಆಮೇಲೆ ಹಗ್ಗದ ಮೇಲೆ ಹಾಕುವ ಅವಶ್ಯಕತೆ ಕೂಡ ಇರೋದಿಲ್ಲ.
36
ಹವಾಮಾನದ ಏರುಪೇರು
ಅಮೆರಿಕದ ಎಲ್ಲ ರಾಜ್ಯಗಳಲ್ಲೂ ವರ್ಷ ಪೂರ್ತಿ ಬಿಸಿಲು ಇರೋದಿಲ್ಲ. ಚಳಿಗಾಲದಲ್ಲಿ ಸಿಕ್ಕಾಪಟ್ಟೆ ಚಳಿ, ಹಿಮಪಾತ ಇರುತ್ತದೆ. ಆಮೇಲೆ ಸಿಕ್ಕಾಪಟ್ಟೆ ಮಳೆ ಬರುತ್ತದೆ. ಇದಕ್ಕಾಗಿ ಮನೆಯಲ್ಲಿದ್ದವರು ಡ್ರೈಯರ್ ಮೇಲೆ ಡಿಪೆಂಡ್ ಆಗಿದ್ದಾರೆ.
ಅಮೆರಿಕದಲ್ಲಿದ್ದವರು ತಮ್ಮ ವೈಯಕ್ತಿಕ ವಿಷಯಗಳಿಗೆ ಹೆಚ್ಚು ಗಮನ ಕೊಡ್ತಾರೆ. ಒಳ ಉಡುಪುಗಳು ಅಥವಾ ಬೇರೆ ಬಟ್ಟೆಗಳು ರಸ್ತೆಯಲ್ಲಿ ಹೋಗುವವರಿಗೆ ಕಾಣಿಸೋದು ಅವರಿಗೆ ಇಷ್ಟ ಆಗೋದಿಲ್ಲ. ಬಡವರು ಮಾತ್ರ ಡ್ರೈಯರ್ ಇಲ್ಲದೆ ಮನೆ ಮುಂದೆ ಬಟ್ಟೆ ಒಣಗಿಸುತ್ತಾರೆ ಎಂಬ ಕಲ್ಪನೆ ಅಲ್ಲಿತ್ತು.
56
ಧೂಳು ಮತ್ತು ಅಲರ್ಜಿ
ಹೊರಗಡೆ ಬಟ್ಟೆ ಒಣಗಿಸಿದಾಗ ಅಲ್ಲಿನ ಧೂಳು, ಪರಾಗರೇಣುಗಳು (Pollen) ಬಟ್ಟೆಗೆ ಅಂಟಿಕೊಳ್ಳುತ್ತವೆ. ಇದರಿಂದ ಅನೇಕರಿಗೆ ಅಲರ್ಜಿ ಆಗುತ್ತದೆ. ಹೀಗಾಗಿ ಮನೆಯೊಳಗಡೆ ಬಟ್ಟೆ ಒಣಗಿಸಿಕೊಳ್ತಾರೆ.
66
ಇದಕ್ಕೂ ವಿರೋಧ
ಡ್ರೈಯರ್ ಬಳಸುವುದರಿಂದ ವಿದ್ಯುತ್ ವ್ಯತ್ಯಯ ಆಗುತ್ತದೆ, ಪರಿಸರ ಮಾಲಿನ್ಯವಾಗುತ್ತದೆ ಎಂದು ಕೆಲವರು 'Right to Dry' (ಬಟ್ಟೆ ಒಣಗಿಸುವ ಹಕ್ಕು) ಎಂಬ ಚಳುವಳಿ ಆರಂಭಿಸಿದ್ದಾರೆ. ಹೀಗಾಗಿ ಕೆಲವು ಕಡೆ ಬಟ್ಟೆ ಒಣಗಿಸಲು ಅವಕಾಶ ಕೊಡಲಾಗ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ