ಭಾರತದಲ್ಲಿ ನಾವು ಟಾಯ್ಲೆಟ್‌ನಲ್ಲಿ ನೀರು ಬಳಸುತ್ತೇವೆ. ಆದರೆ ಅಮೆರಿಕ, ಯುರೋಪ್‌ನಂತಹ ದೇಶಗಳಲ್ಲಿ ಟಿಶ್ಯೂ ಪೇಪರ್ ಬಳಸುತ್ತಾರೆ. ನೀರಿನ ಕೊರತೆ ಇಲ್ಲದಿದ್ದರೂ ಅವರು ಯಾಕೆ ಹೀಗೆ ಮಾಡುತ್ತಾರೆ? ಇದರ ಹಿಂದಿನ ಕಾರಣಗಳೇನು ಎಂದು ತಿಳಿಯೋಣ ಬನ್ನಿ.
ಭಾರತ ಹಾಗೂ ಹಲವು ಏಷ್ಯಾ ದೇಶಗಳಲ್ಲಿ ಟಾಯ್ಲೆಟ್‌ಗೆ ಹೋದಾಗ ನೀರು ಬಳಸುವುದು ವಾಡಿಕೆ. ಆದರೆ ಅಮೆರಿಕ, ಯುರೋಪ್‌ನಂತಹ ಪಾಶ್ಚಿಮಾತ್ಯ ದೇಶಗಳಲ್ಲಿ ಟಾಯ್ಲೆಟ್ ಪೇಪರ್ ಅಥವಾ ಟಿಶ್ಯೂಗಳನ್ನು ಮಾತ್ರ ಬಳಸುತ್ತಾರೆ. ಇದಕ್ಕೆ ಕೆಲವು ಬಲವಾದ ಭೌಗೋಳಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಕಾರಣಗಳಿವೆ. ಅವು ಯಾವುವು ನೋಡೋಣ.
26
ವಿದೇಶದಲ್ಲಿನ ವಾತಾವರಣ ಟಾಯ್ಲೆಟ್ ಪೇಪರ್ ಬಳಕೆಗೆ ಮುಖ್ಯ ಕಾರಣ
ಪಾಶ್ಚಿಮಾತ್ಯ ದೇಶಗಳಲ್ಲಿ ವರ್ಷದ ಬಹುಕಾಲ ಚಳಿ ಇರುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗಳಿಗೆ ಇಳಿಯುತ್ತದೆ. ಆಗ ಪೈಪ್‌ಗಳಲ್ಲಿನ ನೀರು ಹೆಪ್ಪುಗಟ್ಟುತ್ತದೆ ಅಥವಾ ವಿಪರೀತ ತಣ್ಣಗಿರುತ್ತದೆ. ಆ ತಣ್ಣೀರನ್ನು ಟಾಯ್ಲೆಟ್‌ನಲ್ಲಿ ಬಳಸುವುದು ಕಷ್ಟ. ಪ್ರತಿ ಟಾಯ್ಲೆಟ್‌ಗೆ ಹೀಟರ್ ಅಳವಡಿಸುವುದು ದುಬಾರಿ. ಹೀಗಾಗಿ, ಅವರು ಡ್ರೈ ಟಿಶ್ಯೂ ಬಳಕೆಗೆ ಹೊಂದಿಕೊಂಡಿದ್ದಾರೆ.
36
ಟಾಯ್ಲೆಟ್ ಪೇಪರ್‌ಗಳು ನೀರಿನಲ್ಲಿ ಬೇಗ ಕರಗುವಂತೆ ವಿನ್ಯಾಸ
ವಿದೇಶಗಳಲ್ಲಿನ ಡ್ರೈನೇಜ್ ಪೈಪ್‌ಗಳ ವಿನ್ಯಾಸವೇ ಬೇರೆ. ಅಲ್ಲಿನ ಟಾಯ್ಲೆಟ್ ಪೇಪರ್‌ಗಳು ನೀರಿನಲ್ಲಿ ಬೇಗ ಕರಗುವಂತೆ (Bio-degradable) ತಯಾರಾಗಿರುತ್ತವೆ. ಫ್ಲಶ್ ಮಾಡಿದ ತಕ್ಷಣ ಅವು ಪೈಪ್‌ಗಳಲ್ಲಿ ಕರಗಿ ಹೋಗುತ್ತವೆ. ಒಂದು ವೇಳೆ ನೀರನ್ನು ಹೆಚ್ಚು ಬಳಸಿದರೆ, ಬಾತ್‌ರೂಮ್ ಒದ್ದೆಯಾಗಿ ಬ್ಯಾಕ್ಟೀರಿಯಾ ಮತ್ತು ಬೂಸ್ಟ್ (Mold) ಬೆಳೆಯುವ ಅಪಾಯವಿರುತ್ತದೆ. ಹೀಗಾಗಿ ಅವರು ಬಾತ್‌ರೂಮ್ ಅನ್ನು ಒಣಗಿದ ಸ್ಥಿತಿಯಲ್ಲಿಡಲು ಇಷ್ಟಪಡುತ್ತಾರೆ.
ನಮಗೆ ಚಿಕ್ಕಂದಿನಿಂದ ನೀರು ಬಳಸೋದು ಅಭ್ಯಾಸವಾದಂತೆ, ವಿದೇಶಗಳಲ್ಲಿನ ಜನರಿಗೆ ಟಾಯ್ಲೆಟ್ ಪೇಪರ್ ಬಳಸುವುದನ್ನೇ ಕಲಿಸಲಾಗುತ್ತದೆ. ಅವರ ಸಂಸ್ಕೃತಿಯಲ್ಲಿ, ನೀರಿಗಿಂತ ಪೇಪರ್ ಬಳಕೆಯೇ ಹೆಚ್ಚು ಸ್ವಚ್ಛ ಎಂದು ಅವರು ಭಾವಿಸುತ್ತಾರೆ. ಪ್ರಯಾಣದ ಸಮಯದಲ್ಲಿ ನೀರು ಸಿಗದಿದ್ದರೂ ಟಿಶ್ಯೂ ಸುಲಭವಾಗಿ ಸಿಗುತ್ತದೆ.
56
ಟಾಯ್ಲೆಟ್ ಪೇಪರ್‌ಗೆ ಪರ್ಯಾಯ ಹುಡುಕುತ್ತಿರುವ ಪಾಶ್ಚಿಮಾತ್ಯರು
ಇತ್ತೀಚೆಗೆ, ಟಾಯ್ಲೆಟ್ ಪೇಪರ್ ಬಳಕೆಯಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿವೆ. ಅಷ್ಟೇ ಅಲ್ಲ, ಪೇಪರ್ ತಯಾರಿಕೆಗಾಗಿ ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ಈ ಕಾರಣಗಳಿಂದಾಗಿ, ಜನರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
66
ವಿದೇಶದಲ್ಲಿ ಬದಲಾವಣೆಯ ಗಾಳಿ
ವಿದೇಶಗಳಲ್ಲೂ 'ಬಿಡೆಟ್' (Bidet - ನೀರು ಸ್ಪ್ರೇ ಮಾಡುವ ಸಾಧನ) ಬಳಕೆ ನಿಧಾನವಾಗಿ ಹೆಚ್ಚುತ್ತಿದೆ. ಆದರೂ, ಹವಾಮಾನಕ್ಕೆ ತಕ್ಕಂತೆ ರೂಢಿಸಿಕೊಂಡ ಈ ಅಭ್ಯಾಸ ಅವರ ಜೀವನಶೈಲಿಯ ಭಾಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ