Nuclear Fallout Protection: ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಬಂಕರ್‌ಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಇದಾಗಿದೆ. ಹಾಗಾದರೆ, ಜಗತ್ತಿನಲ್ಲಿ ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಯಾವುದು?.
ಸ್ವಿಟ್ಜರ್ಲೆಂಡ್ ಅಂದಾಕ್ಷಣ ನೆನಪಾಗುವುದು ಸುಂದರ ಪರ್ವತಗಳು, ಶಾಂತಿಯುತ ನಗರಗಳು. ಆದರೆ ಇಲ್ಲಿನ ಮನೆ, ಶಾಲೆ, ಆಸ್ಪತ್ರೆಗಳ ಕೆಳಗೆ ಬೃಹತ್ ಅಣುಬಾಂಬ್ ನಿರೋಧಕ ಬಂಕರ್‌ಗಳಿವೆ. ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಇದಾಗಿದೆ. ಇದು ದಶಕಗಳ ಕಾಲದ ಭದ್ರತಾ ಯೋಜನೆ ಮತ್ತು ಯುದ್ಧದ ಭಯದಿಂದ ನಿರ್ಮಾಣವಾದ ವ್ಯವಸ್ಥೆ.
25
ಹೊಸ ಮನೆ ಕಟ್ಟುವಾಗಲೇ ಬಂಕರ್ ನಿರ್ಮಾಣ
1950-60ರ ದಶಕದಲ್ಲಿ ನ್ಯಾಟೋ ಮತ್ತು ವಾರ್ಸಾ ಒಕ್ಕೂಟದ ನಡುವೆ ಶೀತಲ ಸಮರ ತಾರಕಕ್ಕೇರಿತ್ತು. ಯುರೋಪ್‌ನ ಮಧ್ಯದಲ್ಲಿದ್ದ ಸ್ವಿಟ್ಜರ್ಲೆಂಡ್‌ಗೆ ಯುದ್ಧದ ಬಿಸಿ ತಟ್ಟುವ ಭಯವಿತ್ತು. ಹೀಗಾಗಿ, 1963ರಲ್ಲಿ ಸರ್ಕಾರ ಒಂದು ಕಾನೂನು ಜಾರಿಗೆ ತಂದಿತು. ಇದರ ಪ್ರಕಾರ, ಪ್ರತಿಯೊಬ್ಬ ಪ್ರಜೆಗೂ ಅಣುಬಾಂಬ್ ದಾಳಿಯಿಂದ ರಕ್ಷಣೆ ನೀಡುವ ಆಶ್ರಯತಾಣ ಕಡ್ಡಾಯವಾಯಿತು. ಹೊಸ ಮನೆ ಕಟ್ಟುವಾಗ ಬಂಕರ್ ನಿರ್ಮಿಸುವುದು ಅಥವಾ ಸಮೀಪದ ಸಾರ್ವಜನಿಕ ಬಂಕರ್‌ಗೆ ಹಣ ನೀಡುವುದು ಕಡ್ಡಾಯವಾಯಿತು.
35
ದಾಳಿಯಾದರೂ ಜನರನ್ನು ರಕ್ಷಿಸುವಂತ ವಿನ್ಯಾಸ
ಸ್ವಿಟ್ಜರ್ಲೆಂಡ್‌ನಲ್ಲಿ ಸುಮಾರು 90 ಲಕ್ಷ ಜನರಿಗೆ ಆಶ್ರಯ ನೀಡಬಲ್ಲಷ್ಟು ಬಂಕರ್‌ಗಳಿವೆ. ಆದರೆ ದೇಶದ ಜನಸಂಖ್ಯೆ ಕೇವಲ 88 ಲಕ್ಷ. ಅಂದರೆ, ಪ್ರತಿಯೊಬ್ಬರಿಗೂ ಒಂದೊಂದು ಜಾಗ ಖಚಿತ. ಈ ಬಂಕರ್‌ಗಳಲ್ಲಿ ಗಾಳಿ ಶುದ್ಧೀಕರಣ ವ್ಯವಸ್ಥೆ, ದಪ್ಪ ಕಾಂಕ್ರೀಟ್ ಗೋಡೆಗಳು ಮತ್ತು ವಿಕಿರಣವನ್ನು ತಡೆಯುವ ಬಾಗಿಲುಗಳಿವೆ. ಅಣು ದಾಳಿಯಾದರೂ ಜನರನ್ನು ರಕ್ಷಿಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
1990ರ ದಶಕದಲ್ಲಿ ಸೋವಿಯತ್ ಒಕ್ಕೂಟ ಪತನವಾದ ನಂತರ, ಹಲವು ದೇಶಗಳು ತಮ್ಮ ಬಂಕರ್‌ಗಳನ್ನು ಕೈಬಿಟ್ಟವು. ಆದರೆ ಸ್ವಿಟ್ಜರ್ಲೆಂಡ್ ಮಾತ್ರ ಅವುಗಳನ್ನು ಉಳಿಸಿಕೊಂಡಿತು. ಅಪಾಯಗಳು ಎಂದಿಗೂ ಕಣ್ಮರೆಯಾಗುವುದಿಲ್ಲ, ಅವು ಕೇವಲ ರೂಪ ಬದಲಿಸುತ್ತವೆ ಎಂದು ಸ್ವಿಸ್ ಅಧಿಕಾರಿಗಳು ನಂಬಿದ್ದರು. ಅಣು ಅಪಘಾತ, ಭಯೋತ್ಪಾದಕ ದಾಳಿಗಳಂತಹ ಹೊಸ ಬೆದರಿಕೆಗಳಿಗಾಗಿ ಇವುಗಳನ್ನು ರೆಡಿ ಮಾಡಿದರು.
55
ತಮ್ಮ ಬಂಕರ್ ಎಲ್ಲಿದೆ?
ಸದ್ಯಕ್ಕೆ ಯುದ್ಧದ ಅಪಾಯವಿಲ್ಲದ ಕಾರಣ, ಈ ಬಂಕರ್‌ಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಅನೇಕರು ಇವುಗಳನ್ನು ಸ್ಟೋರ್ ರೂಮ್, ವೈನ್ ಸಂಗ್ರಹ ಕೊಠಡಿ, ಮತ್ತು ಸರ್ಕಾರಿ ದಾಖಲೆಗಳ ಕೋಣೆಗಳಾಗಿ ಬಳಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಉಕ್ರೇನ್ ಯುದ್ಧದ ನಂತರ, ಸ್ವಿಸ್ ಜನರಲ್ಲಿ ಈ ಬಂಕರ್‌ಗಳ ಬಗ್ಗೆ ಮತ್ತೆ ಆಸಕ್ತಿ ಹೆಚ್ಚಾಗಿದೆ. ತಮ್ಮ ಬಂಕರ್ ಎಲ್ಲಿದೆ ಎಂದು ಹಲವರು ಈಗ ಹುಡುಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ