87 ಜನರ ಬಲಿ ಪಡೆದ ಐರೀಸ್ ದೇನಾ ಮೇಲಿನ ದಾಳಿಗಾಗಿ ಅಮೆರಿಕಾ ತೀವ್ರವಾಗಿ ವಿಷಾದಿಸಲಿದೆ: ಇರಾನ್

Published : Mar 05, 2026, 04:02 PM IST

ಶ್ರೀಲಂಕಾ ಕರಾವಳಿ ಬಳಿ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯು ಇರಾನಿನ ಯುದ್ಧನೌಕೆ ಐರಿಸ್ ದೇನಾವನ್ನು ಟಾರ್ಪಿಡೊ ಬಳಸಿ ಮುಳುಗಿಸಿದ ನಂತರ ಇರಾನ್  ಈ ದಾಳಿಯನ್ನು  ಕ್ರೂರ ದೌರ್ಜನ್ಯ ಎಂದು ಕರೆದಿದ್ದು ಪ್ರತೀಕಾರದ ಎಚ್ಚರಿಕೆ ನೀಡಿದೆ..

PREV
15
, ಅಮೆರಿಕಾ ಅತ್ಯಂತ ಕ್ರೂರವಾದ ದೌರ್ಜನ್ಯ ಮಾಡಿದೆ ಇರಾನ್

ಟೆಹ್ರಾನ್: ಶ್ರೀಲಂಕಾದ ಕರಾವಳಿಗೆ ಸೇರುವ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನಿನ ಯುದ್ಧನೌಕೆ ಐರಿಸ್ ದೇನಾವನ್ನು ಮುಳುಗಿಸಿದ ನಂತರ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕಾ ಅತ್ಯಂತ ಕ್ರೂರವಾದ ದೌರ್ಜನ್ಯ ಮಾಡಿದೆ ಎಂದು ಹೇಳಿದ್ದಾರೆ. ಅಮೆರಿಕವು ದೌರ್ಜನ್ಯ ಎಸಗಿದೆ ಎಂದು ಅವರು ಆರೋಪಿಸಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ಯುದ್ಧ ನೌಕೆ ಮುಳುಗಿದ್ದಕ್ಕೆ ಟೆಹ್ರಾನ್ ನೀಡಿದ ಮೊದಲ ಅಧಿಕೃತ ಪ್ರತಿಕ್ರಿಯೆ ಇದಾಗಿದೆ.

ಇದಕ್ಕಾಗಿ ಅಮೆರಿಕಾ ವಿಷಾದಿಸಲಿದೆ.

ಇರಾನ್‌ನ ತೀರದಿಂದ 2,000 ಮೈಲು ದೂರದಲ್ಲಿ ಅಮೆರಿಕ ಸಮುದ್ರದಲ್ಲಿ ದೌರ್ಜನ್ಯ ಎಸಗಿದೆ ಎಂದು ಅರಘ್ಚಿ ಎಕ್ಸ್‌ನಲ್ಲಿ ಬರೆದಿದ್ದಾರೆ. ನನ್ನ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ, ಅಮೆರಿಕವು ತಾನು ಮಾಡಿದ ಕೃತ್ಯಕ್ಕೆ ತೀವ್ರವಾಗಿ ವಿಷಾದಿಸಲಿದೆ ಎಂದು ಅವರು ಹೇಳಿದರು.

25
87 ಮೃತದೇಹಗಳು ಹೊರತೆಗೆದ ಶ್ರೀಲಂಕಾ ನೌಕಾಪಡೆ

ಭಾರತದ ನೌಕಾಪಡೆ ಆಯೋಜಿಸಿದ ಮಿಲನ್ ನವಾಲಾ ಎಕ್ಸೈಸ್(Milan naval exercise)ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ, ಸುಮಾರು 130 ನಾವಿಕರನ್ನು ಹೊತ್ತೊಯ್ಯುತ್ತಿದ್ದ ಫ್ರಿಗೇಟ್ ದೇನಾ ಎಂಬ ಇರಾನಿನ ಯುದ್ಧ ನೌಕೆಯನ್ನು ಅಮೆರಿಕಾದ ಜಲಾಂತರ್ಗಾಮಿ ನೌಕೆ ಬುಧವಾರ ಶ್ರೀಲಂಕಾದ ಕರಾವಳಿಯ ಅಂತರರಾಷ್ಟ್ರೀಯ ನೀರಿನಲ್ಲಿ ಟೋಪಿಡೋ ಹಾಕುವ ಮೂಲಕ ಮುಳುಗುವಂತೆ ಮಾಡಿತ್ತು. (ಟೋಪಿಡೋ ಎಂದರೆ ಜಲಾಂತರ್ಗಮಿಯಿಂದ ಕ್ಷಿಪಣಿಯಂತಹ ಸಾಧನವನ್ನು ಎಸೆದು ಹಡಗು ಮುಳುಗುವುದಕ್ಕೆ ಕಾರಣವಾಗುವುದು)

35
ಇರಾನ್ ಯುದ್ಧನೌಕೆ ಮುಳುಗಿದ ವೀಡಿಯೋ ಬಿಡುಗಡೆ ಮಾಡಿದ ಪೆಂಟಗನ್

ಈ ದಾಳಿಯನ್ನುಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ದೃಢಪಡಿಸಿದ್ದಾರೆ. ಪೆಂಟಗನ್ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಎರಡನೇ ಮಹಾಯುದ್ಧದ ನಂತರ ಶತ್ರು ಯುದ್ಧನೌಕೆಯನ್ನು ಟಾರ್ಪಿಡೊ ಮುಳುಗಿಸಿದ್ದು ಇದೇ ಮೊದಲು ಎಂದು ಹೇಳಿದ್ದಾರೆ. ಶ್ರೀಲಂಕಾ ನೌಕಾಪಡೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿರುವ ಪ್ರಕಾರ, ಐರಿಸ್ ದೇನಾ ಯುದ್ಧನೌಕೆ ಮುಳುಗಿದ ನಂತರ ಹಡಗಿನಿಂದ 87 ಜನರ ಶವಗಳನ್ನು ಹೊರತೆಗೆಯಲಾಗಿದೆ ಮತ್ತು 32 ಜನರನ್ನು ರಕ್ಷಿಸಲಾಗಿದೆ.

ಅಂತರರಾಷ್ಟ್ರೀಯ ನೀರಿನಲ್ಲಿ ಸುರಕ್ಷಿತವೆಂದು ಭಾವಿಸಿದ ಇರಾನಿನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆ ಟಾರ್ಪಿಡೊದಿಂದ ಮುಳುಗಿಸಿದೆ ಎಂದು ಹೆಗ್ಸೇತ್ ಹೇಳಿದ್ದಾರೆ. ಈ ಘಟನೆಯು ಪರ್ಷಿಯನ್ ಕೊಲ್ಲಿಯ ಹೊರಗೆ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಪ್ರಮುಖವಾಗಿ ಉಲ್ಬಣವಾಗಿರುವುದನ್ನು ಸೂಚಿಸಿದೆ ಮತ್ತು ಹಿಂದೂ ಮಹಾಸಾಗರದಲ್ಲಿ ಕಡಲ ಭದ್ರತೆಗೆ ಸಂಬಂಧಿಸಿದಂತೆ ಇದು ಪ್ರಶ್ನೆಗಳು ಏಳುವಂತೆ ಮಾಡಿದೆ. ಶ್ರೀಲಂಕಾ ಸಮೀಪ ಇರಾನ್ ಯುದ್ಧನೌಕೆ ಮುಳುಗಿದ ಬಗ್ಗೆ ಪೆಂಟಗನ್ ಒಂದು ಸಣ್ಣ ವೀಡಿಯೊವನ್ನು ಸಹ ಬಿಡುಗಡೆ ಮಾಡಿದೆ.

45
ಇರಾನ್‌ನಲ್ಲಿ 1,000 ಕ್ಕೂ ಹೆಚ್ಚು ಜನರ ಬಲಿ

ಇರಾನ್ ನಾಯಕತ್ವ, ಕ್ಷಿಪಣಿ ಶಸ್ತ್ರಾಗಾರ ಮತ್ತು ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಕಳೆದ ಶನಿವಾರದಿಂದ ಯುದ್ಧವನ್ನು ಆರಂಭಿಸಿದ್ದು, ಅಲ್ಲಿನ ಸರ್ಕಾರವನ್ನು ಉರುಳಿಸುವುದು ನಮ್ಮ ಗುರಿ ಎಂದು ಅಮೆರಿಕಾ ಹೇಳಿಕೊಂಡಿತ್ತು. ಆದರೆ ಅದರ ಗುರಿಗಳು ಉದ್ದೇಶಗಳು ಕ್ಷಣ ಕ್ಷಕ್ಕೂ ಬದಲಾಗಿದ್ದು,ಮುಕ್ತ ಸಂಘರ್ಷವನ್ನು ಸೂಚಿಸುತ್ತದೆ.

ಇರಾನ್ ದೇಶದ ಅಧಿಕಾರಿಗಳ ಪ್ರಕಾರ, ಯುದ್ಧವು ಇರಾನ್‌ನಲ್ಲಿ 1,000 ಕ್ಕೂ ಹೆಚ್ಚು ಜನರ ಬಲಿ ಪಡೆದಿದೆ. ಲೆಬನಾನ್‌ನಲ್ಲಿ 50 ಕ್ಕೂ ಹೆಚ್ಚು ಜನರು ಮತ್ತು ಇಸ್ರೇಲ್‌ನಲ್ಲಿ ಸುಮಾರು ಒಂದು ಡಜನ್ ಜನರು ಸಾವಿಗಿಡಾಗಿದ್ದಾರೆ. ಯುದ್ಧದ ಮೊದಲ ಎರಡು ದಿನಗಳಲ್ಲಿಯೇ ಅಂದಾಜು ಲಕ್ಷ ಜನರು ಇರಾನ್ ರಾಜಧಾನಿಯಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

55
ಐರಿಸ್ ದೇನಾ ಭಾರತೀಯ ನೌಕಾಪಡೆಯ ಅತಿಥಿಯಾಗಿತ್ತು ಎಂದ ಇರಾನ್

ಐರಿಸ್ ದೇನಾ ಭಾರತೀಯ ನೌಕಾಪಡೆಯ ಅತಿಥಿಯಾಗಿತ್ತು ಎಂದು ಇರಾನ್ ಹೇಳಿಕೊಂಡಿದೆ. ಆದರೆ ಫೆಬ್ರವರಿ 28 ರಂದು ಯುದ್ಧ ಘೋಷಿಸಿದ ನಂತರ ಯುದ್ಧನೌಕೆ ಭಾರತದಿಂದ ಎಂದಿಗೂ ಸಹಾಯವನ್ನು ಕೋರಲಿಲ್ಲ ಎಂದು ಭಾರತೀಯ ಸರ್ಕಾರಿ ಮೂಲಗಳು ತಿಳಿಸಿವೆ. ಅಲ್ಲದೇ ಭಾರತ ಇರಾನ್‌ಗೆ ಅಥಿಯಂತೆ ಕರೆಸಿ ನಡುನೀರಲ್ಲಿ ಕೈ ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಇದಕ್ಕೆ ಎಕ್ಸ್‌ನಲ್ಲಿ ಒಬ್ಬರು ಪ್ರತಿಕ್ರಿಯಿಸಿದ್ದು, ಅದು ಭಾರತದ ಕರಾವಳಿಯಲ್ಲಿ ಇರಲಿಲ್ಲ. , ಅಂತರರಾಷ್ಟ್ರೀಯ ಜಲಮಾರ್ಗಗಳು ಯಾರ ಮನೆಯ ಹಿತ್ತಲೂ ಅಲ್ಲ. ಆ ಹಡಗು 200 ಮೈಲಿ ಮಿತಿಯನ್ನು ದಾಟಿದ ನಂತರ ಅದು ಭಾರತದ ರಕ್ಷಣೆಯನ್ನು ತೊರೆದಿದೆ. ಹೈ ಸೀಸ್‌ ಎನ್ನಲಾಗುವ ಅಂತಾರಾಷ್ಟ್ರೀಯ ಸಮುದ್ರದಲ್ಲಿ ಭಾರತವು ಯುಎಸ್-ಇರಾನ್ ಮುಖಾಮುಖಿಯನ್ನು ತಡೆಯಲು ಭಾರತ ಯಾವುದೇ ಕಾನೂನು ಅಧಿಕಾರವನ್ನು ಹೊಂದಿಲ್ಲ. ನಾವು ಪಾರ್ಟಿಯನ್ನು (MILAN 2026) ಆಯೋಜಿಸಬಹುದು, ಆದರೆ ನಾವು ಇಡೀ ಸಾಗರಕ್ಕೆ ಬೌನ್ಸರ್‌ಗಳಲ್ಲ ಅದು ನಮ್ಮ ಕರಾವಳಿಯಿಂದ ಹೊರಗಿದ್ದರೆ ಅದು ಅಕ್ಷರಶಃ ನಮ್ಮ ವ್ಯವಹಾರವಲ್ಲ ಎಂದು ಒಬ್ಬರು ಬಳಕೆದಾರರು ಬರೆದುಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories