Published : Jul 20, 2025, 11:31 AM ISTUpdated : Jul 20, 2025, 11:35 AM IST
20 ವರ್ಷಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ 'ಸ್ಲೀಪಿಂಗ್ ಪ್ರಿನ್ಸ್' ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ನಿಧನರಾಗಿದ್ದಾರೆ. 15ನೇ ವಯಸ್ಸಿನಲ್ಲಿ ಅಪಘಾತಕ್ಕೀಡಾದ ನಂತರ ಕೋಮಾಕ್ಕೆ ಜಾರಿದ್ದ ಅವರು, 36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ರಿಯಾದ್: ಸುಮಾರು 20 ವರ್ಷಗಳ ಕಾಲ ಕೋಮಾದಲ್ಲಿದ್ದ ಹಾಗೂ 'ಸ್ಟೀಪಿಂಗ್ ಪ್ರಿನ್ಸ್' ಎಂದೇ ಖ್ಯಾತರಾ ಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಶನಿವಾರ ನಿಧನರಾದರು.
28
ಚಿರನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್
ಅವರ ಅಂತ್ಯಕ್ರಿಯೆ ಇಂದು ರಿಯಾದ್‌ನಲ್ಲಿ ನಡೆಯಲಿದೆ ಎಂದು ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಹೇಳಿದ್ದಾರೆ. ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುವಾಗ ಅವರು 2005ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಅಪಘಾತಕ್ಕೆ ಈಡಾಗಿದ್ದರು.
38
ಚಿರನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್
ಅಪಘಾತಕ್ಕೀಡಾದಾಗ ಅವರ ಮೆದುಳಿಗೆ ಗಂಭೀರ ಗಾಯಗಳಾಗಿತ್ತು, ಸೌದಿ ಅರೇಬಿಯಾದಿಂದ ಕರೆತಂದು ಅವರನ್ನು ರಿಯಾದ್‌ನಲ್ಲಿರುವ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ನಗರಕ್ಕೆ ದಾಖಲಿಸಲಾಯಿತು, ಅಲ್ಲಿ ಅವರು ನಿರಂತರ ವೈದ್ಯಕೀಯ ಆರೈಕೆಯಲ್ಲಿದ್ದರು.
ಆದರೆ ಈಗ ಬರೋಬರಿ 20 ವರ್ಷಗಳ ನಂತರ ಜುಲೈ19ರ ಶನಿವಾರ ತಮ್ಮ 36ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದಾರೆ. ರಾಯಲ್ ಕೋರ್ಟ್ ಸೌದಿ ಪ್ರೆಸ್ ಏಜೆನ್ಸಿ ಮೂಲಕ ರಾಜಕುಮಾರನ ಮರಣವನ್ನು ಘೋಷಿಸಿದೆ. ಈ ಮೂಲಕ ಸೌದಿ ರಾಜಮನೆತನದ ಒಂದು ದೀರ್ಘ ಮತ್ತು ಆಳವಾದ ಭಾವನಾತ್ಮಕ ಅಧ್ಯಾಯನ ಅಂತ್ಯಗೊಂಡಿದೆ.
58
ಚಿರನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್
ಅಂದಿನಿಂದ 20 ವರ್ಷ ನಿಕಟ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದರು. ಆದರೆ ಪ್ರಜ್ಞೆ ಮರಳಿರಲಿಲ್ಲ. ಈ ಅವಧಿಯ ಉದ್ದಕ್ಕೂ, ಅವರಿಗೆ ನೀಡಲಾಗಿದ್ದ ಜೀವ ರಕ್ಷಕ ವ್ಯವಸ್ಥೆ ತೆಗೆದುಹಾಕುವುದನ್ನು ಕುಟುಂಬದವರು ದೃಢವಾಗಿ ವಿರೋಧಿಸಿದರು.
68
ಚಿರನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್
ಜೀವನ ಮತ್ತು ಸಾವು ದೇವರ ದೇವರ ಕೈಯಲ್ಲಿ ಮಾತ್ರ ಇದೆ ಎಂಬ ಅಚಲ ನಂಬಿಕೆಯನ್ನು ಅವರ ತಂದೆ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ವ್ಯಕ್ತಪಡಿಸಿದ್ದರು.
78
ಚಿರನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್
ತಂದೆ ಅಬ್ದುಲಜೀಜ್ ಅವರು ಮಗನ ಮೇಲೆ ಹೊಂದಿದ್ದ ಕರುಣೆ ಹಾಗೂ ಅಪಾರ ಸಹಾನುಭೂತಿ ವಿಶ್ವವನ್ನೇ ಆಕರ್ಷಿಸಿತ್ತು. ಶನಿವಾರ ಅವರ ಮರಣದ ಘೋಷಣೆಯೊಂದಿಗೆ ಪ್ರಿನ್ಸ್ ಅಲ್ವಲೀದ್ ಅಲ್ಲಲೀದ್ ಅವರ ದೀರ್ಘ ಕಾಲದ ವೈದ್ಯಕೀಯ ಹೋರಾಟ ಕೊನೆಗೊಂಡಿದೆ.
88
ಚಿರನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್
ಪ್ರಪಂಚದೆಲ್ಲೆಡೆಯಿಂದ ಸೌದಿ ರಾಜಕುಮಾರನ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ. ಆದರೆ ಮಗ ಎದ್ದು ಬರುತ್ತಾನೆ ಎಂಬ ತಂದೆಯ ಭರವಸೆ ಭಗ್ನಗೊಂಡಿದ್ದು, ಸ್ಲೀಪಿಂಗ್ ಪ್ರಿನ್ಸ್ ತಂದೆ ಪ್ರಿನ್ಸ್ ಖಾಲೀದ್ ಬಿನ್ ತಲಾಲ್ ಬಿನ್ ಅಬ್ದುಲಜೀಜ್ ಶೋಕ ಸಾಗರದಲ್ಲಿ ಮುಳುಗಿದ್ದಾರೆ.