ಈ ದೇಶದಲ್ಲಿ ಸಾವನ್ನು ಸಂಭ್ರಮಿಸುವ ವಿಶಿಷ್ಟ ಸಂಪ್ರದಾಯವಿದೆ. ಅಂತ್ಯಕ್ರಿಯೆಯನ್ನು ಪಾರ್ಟಿಯಂತೆ ಆಚರಿಸಿ, ಉತ್ತಮ ಬಟ್ಟೆಗಳನ್ನು ಧರಿಸಿ, ಹಾಡು-ನೃತ್ಯಗಳೊಂದಿಗೆ ಮೃತರನ್ನು ಸ್ಮರಿಸುತ್ತಾರೆ. ಶವಪೆಟ್ಟಿಗೆಯನ್ನು ವಿಶೇಷವಾಗಿ ಅಲಂಕರಿಸುವುದು ಇಲ್ಲಿನ ವಿಶೇಷ.
ಕುಟುಂಬದಲ್ಲಿ ಯಾರಾದ್ರು ನಿಧನರಾದ್ರೆ ಮನೆಯಲ್ಲಿ ಸೂತಕದ ಛಾಯೆ ಆವರಿಸುತ್ತದೆ. ಅಕ್ಕ-ಪಕ್ಕದ ಮನೆಯವರು ಸಹ ಯಾವುದೇ ಸಮಾರಂಭ ಮಾಡಲು ಮುಂದಾಗಲ್ಲ. ಕಾರಣ ಪಕ್ಕದ್ಮನೆಯಲ್ಲಿಯೂ ಸಾವಿನ ಛಾಯೆ ಆವರಿಸುತ್ತದೆ. ಆದರೆ ಈ ದೇಶದಲ್ಲಿ ಸಾವನ್ನು ಸಂಭ್ರಮಿಸಲಾಗುತ್ತದೆ.
25
ಈ ದೇಶದಲ್ಲಿ ಸಾವನ್ನು ದುಃಖಿಸುವುದಿಲ್ಲ. ಸಂಬಂಧಿಕರು ಬಂದು ಸಾಂತ್ವಾನ ಸಹ ಹೇಳುವುದಿಲ್ಲ. ಕುಟುಂಬದ ಸದಸ್ಯರ ಸಾವು ಆದ್ರೆ ಪಾರ್ಟಿ ಆಯೋಜಿಸುತ್ತಾರೆ. ಯಾವುದು ಈ ದೇಶ ಅಂತೀರಾ? ಇಲ್ಲಿದೆ ಉತ್ತರ.
35
ಉತ್ತಮ ಬಟ್ಟೆ ಧರಿಸಿ ಭಾಗಿ!
ಆಫ್ರಿಕಾದ ಘಾನಾದಲ್ಲಿ ಸಾವು ಆದರೆ ಅಂತ್ಯಕ್ರಿಯೆಗಾಗಿ ಪಾರ್ಟಿ ಆಯೋಜಿಸಲಾಗುತ್ತದೆ. ಈ ಪಾರ್ಟಿಗೆ ಜನರು ಉತ್ತಮ ಬಟ್ಟೆಗಳನ್ನು ಧರಿಸಿಕೊಂಡು ಹಾಡು ಹೇಳುತ್ತಾ ಕುಣಿದು ಕುಪ್ಪಳಿಸುತ್ತಾರೆ. ಕುಟುಂಬಸ್ಥರು ಮೃತ ವ್ಯಕ್ತಿಯ ಇಷ್ಟವಾದ ಉಡುಪುಗಳನ್ನು ಧರಿಸಿ ಪಾರ್ಟಿಗೆ ಬರುತ್ತಾರೆ. ಏನಿದು ವಿಚಿತ್ರ ಆಚರಣೆ?
ಕುಟುಂಬಸ್ಥರು ಮತ್ತು ಸಂಬಂಧಿಕರು ಮೃತ ವ್ಯಕ್ತಿ ಫೋಟೋವುಳ್ಳ ಉಡುಪುಗಳನ್ನು ಧರಿಸಿಕೊಂಡು ಅಂತ್ಯಕ್ರಿಯೆ ಪಾರ್ಟಿಯಲ್ಲಿ ಭಾಗಿಯಾಗುತ್ತಾರೆ. ಶವಪೆಟ್ಟಿಗೆ ಮೇಲೆ ವಿವಿಧ ಆಕೃತಿಯ ವಸ್ತುಗಳನ್ನಿರಿಸಿ, ಹೂಗಳಿಂದ ಅಲಂಕರಿಸಲಾಗುತ್ತದೆ. ಘಾನಾ ಜನತೆ ಈ ರೀತಿ ಮಾಡೋದರ ಹಿಂದೆ ಕಾರಣವಿದೆ.
55
ಏನಿದರ ಉದ್ದೇಶ?
ಈ ರೀತಿ ಅದ್ಧೂರಿಯಾಗಿ ಅಂತ್ಯಕ್ರಿಯೆ ಪಾರ್ಟಿ ಮಾಡೋದರಿಂದ ಸತ್ಯ ವ್ಯಕ್ತಿಗಾಗಿ ಕುಟುಂಬಸ್ಥರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದರ್ಥ. ಈ ರೀತಿಯ ಪಾರ್ಟಿ ಆಯೋಜನೆಯಿಂದ ಹಲವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ಈ ಆಚರಣೆಗೆ ಹಲವು ಟೀಕೆಗಳು ವ್ಯಕ್ತವಾಗಿದ್ದರೂ ಇಲ್ಲಿನ ಜನರ ತಮ್ಮ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.