ಭಾರತ ಸೇರಿದಂತೆ ಕೆಲವು ದೇಶಗಳ ನಾಗರೀಕರಿಗೆ ಗೋಲ್ಡನ್ ವೀಸಾ ಅಡಿಯಲ್ಲಿ ಜೀವಿತಾವಧಿಯ ನಿವಾಸ ನೀಡಲಾಗುತ್ತಿರುವ ಸುದ್ದಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿರಾಕರಿಸಿದೆ. 23 ಲಕ್ಷ ರೂ. ನೀಡಿದ್ರೆ ಯುಎಇ ಸರ್ಕಾರದಿಂದ ಗೋಲ್ಡನ್ ವಿಸಾ ನೀಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು.
26
ಈ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಗೋಲ್ಡನ್ ವಿಸಾ ಸಹ ಕುರಿತು ಸುದ್ದಿಗಳನ್ನು ಪ್ರಕಟಿಸಿದ್ದರು. ಈ ಸುದ್ದಿಯ ಕುರಿತು ಯುಎಇ ಸರ್ಕಾರ, ಪೌರತ್ವ ನೀಡುವ ವಿಷಯದಲ್ಲಿ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
36
ಯುಎಇಯ ಪೌರತ್ವ, ಕಸ್ಟಮ್ಸ್ ಮತ್ತು ಕಸ್ಮಮ್ಸ್ ಮತ್ತು ಬಂದರು ಭದ್ರತಾ ಇಲಾಖೆ ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಗೋಲ್ಡನ್ ವೀಸಾಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಯುಎಇಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಇಲಾಖೆ ತಿಳಿಸಿದೆ.
ಗೋಲ್ಡನ್ ವೀಸಾಕ್ಕಾಗಿ ಎಲ್ಲಾ ಅರ್ಜಿಗಳನ್ನು ಯುಎಇಯ ಅಧಿಕೃತ ಇಲಾಖೆಗಳಿಂದ ಮಾತ್ರ ಸ್ವೀಕರಿಸಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಪ್ರಕ್ರಿಯೆಗೆ ಯಾವುದೇ ಸಂಸ್ಥೆಗೆ ಅಧಿಕಾರವಿಲ್ಲ ಎಂದು ಯುಎಇ ಸ್ಪಷ್ಟಪಡಿಸಿದೆ.
56
ಈ ರೀತಿಯ ಸುಳ್ಳು ಸುದ್ದಿ ಹರಡುವ ಮೂಲಕ ಜನರನ್ನು ದಾರಿ ತಪ್ಪಿಸುವವರು ಮತ್ತು ಅಮಾಯಕರಿಂದ ಹಣ ವಂಚನೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಯುಎಇ ತನ್ನ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
66
ಏನಿದು ಫೇಕ್ ನ್ಯೂಸ್?
ಭಾರತ ಸೇರಿದಂತೆ ಕೆಲವು ದೇಶದ ನಾಗರೀಕರಿಗೆ ಯಾವುದೇ ಆಸ್ತಿ ಅಥವಾ ವ್ಯವಹಾರದಲ್ಲಿ ಹೂಡಿಕೆ ಮಾಡದೇ ಜೀವಿತಾವಧಿಯ ಗೋಲ್ಡನ್ ವೀಸಾ ನೀಡಲಾಗುತ್ತಿದೆ. ಈ ವೀಸಾ ನೀಡಲು ಯುಎಇ ಕೇವಲ 23 ಲಕ್ಷ ರೂ. (1 ಲಕ್ಷ ಧೀರಮ್) ಶುಲ್ಕವನ್ನು ಪಡೆದುಕೊಳ್ಳುತ್ತಿದೆ ಎಂದು ಸುದ್ದಿಯಲ್ಲಿ ಉಲ್ಲೇಖವಾಗಿತ್ತು.