ಬರ್ಮುಡಾ ಟ್ರಯಾಂಗಲ್ ಕುರಿತು ಹಲವು ಬಾರಿ ವರದಿಯಾಗಿದೆ. ಈ ಭಾಗದಿಂದ ಹಡಗು ಹೋದರು ಮಾಯವಾಗುತ್ತೆ, ಇದರ ಮೇಲೆ ವಿಮಾನ ಹಾರಾಟವು ಅಸಾಧ್ಯ. ಹೋದವರು ಬದುಕುಳಿದಿಲ್ಲ ಅನ್ನೋ ವರದಿ ಅಚ್ಚರಿ ತರಿಸಿತ್ತು. ಇದೀಗ ವಿಜ್ಞಾನಿಗಳು ಈ ರಹಸ್ಯ ಭೇದಿಸಿದ್ದಾರೆ.
ಬರ್ಮುಡಾ ಟ್ರಯಾಂಗಲ್ ರಹಸ್ಯ ಕುರಿತು ಕೆಲ ಸಿನಿಮಾಗಳಿವೆ. ಜೊತೆಗೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹಲವು ಕತೆಗಳು, ನಡೆದ ಘಟನೆಗಳ ಮಾಧ್ಯಮ ವರದಿಗಳು ಭಾರಿ ಚರ್ಚೆಗಳಾಗಿದೆ. ಬರ್ಮುಡಾ ಟ್ರಯಾಂಗಲ್ ಮೂಲಕ ಹಡುಗು ಹಾದು ಹೋಗಲು ಸಾಧ್ಯವಿಲ್ಲ, ಆಕಾಶದಲ್ಲಿ ವಿಮಾನ ಹಾರಟವೂ ಅಸಾಧ್ಯ. ಭಂಡ ಧೈರ್ಯ ಮಾಡಿದರವರು ಉಳಿದಿಲ್ಲ ಅನ್ನೋ ವರದಿ ಹಾಗೂ ಮಾತುಗಳು ಬರ್ಮುಡಾ ಟ್ರಯಾಂಗಲ್ ಕುರಿತು ಆತಂಕ, ಭಯ ಹಾಗೂ ರಹಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಇದೀಗ ವಿಜ್ಞಾನಿಗಳು ಈ ರಹಸ್ಯ ಭೇದಿಸಿದ್ದಾರೆ
25
400 ಕಿಲೋಮೀಟರ್ ಆಳಕ್ಕಿಳಿದು ಅಧ್ಯಯನ
ಸಂಶೋಧಕರು ಈ ಬರ್ಮಡಾ ಟ್ರಯಾಂಗಲ್ ರಹಸ್ಯ ಭೇದಿಸಲು ಬರೋಬ್ಬರಿ ಸಾಗರದ ಆಳದಲ್ಲಿ 400 ಕಿಲೋಮೀಟರ್ ವರೆಗೆ ಇಳಿದು ಸಂಶೋಧನೆ ನಡೆಸಿದ್ದಾರೆ. ದ್ವೀಪದ ತಳದಲ್ಲಿರುವ ಕರಗಿದ ಶಿಲೆಗಳ ವಿಶಿಷ್ಟ ಪದರದ ರಚನೆಯಿಂದ ಇಲ್ಲಿ ವಿಸ್ಮಯಕಾರಿ ಘಟನೆಳು ನಡೆಯುತ್ತದೆ ಎಂದಿದ್ದಾರೆ.
35
30 ವರ್ಷಗಳ ಹಿಂದೆ ನಡೆದ ಜ್ವಾಲಾಮುಖಿ ಸ್ಫೋಟ
30 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದ ಈ ದ್ವೀಪ ರಚನೆಯಾಗಿದೆ. ದ್ವೀಪದ ಅಡಿಯಲ್ಲಿ ಬರೋಬ್ಬರಿ 20 ಕಿಲೋಮೀಟರ್ ದಪ್ಪದ ದೈತ್ಯ ಶಿಲಾ ಪದರವಿದೆ. ಈ ರಚನೆ ಭೂಮಿಯ ಇತರ ಯಾವುದೇ ಭಾಗದಲ್ಲಿ ಕಂಡುಬಂದಿಲ್ಲ. ಇದರಿಂದ ಕ್ರಸ್ಟ್ ಹಾಗೂ ಮ್ಯಾಂಟಲ್ ನಡುವೆ ಈ ಪದರವಿದೆ.
ಭೂಗರ್ಭದ ರಚನೆಗಳಿಂದ ಇಲ್ಲಿ ವಿಶೇಷ ರೀತಿಯ ಕಾಂತಿ ಇದೆ. ಹವಾಮಾನ ಹಾಗೂ ಕಾಂತಿಯ ಸಳೆತದಿಂದ ಇಲ್ಲಿ ಹಡಗು ಚಲಿಸಲು ಸಾಧ್ಯವಾಗುವುದಿಲ್ಲ. ಇತ್ತ ವಿಮಾನ ಹಾರಾಟ ಸಾಧ್ಯವಾಗುವುದಿಲ್ಲ. ಈ ಕಾಂತಿಯ ಸೆಳೆತದಿಂದ ಹಡಗು ಹಾಗೂ ವಿಮಾನಗಳ ದಿಕ್ಸೂಚಿ ಯಂತ್ರಗಳನ್ನು ಸರಿಯಾಗಿ ಕೆಲಸ ಮಾಡದಂತೆ ಮಾಡುತ್ತದೆ. ಇದರಿಂದ ಅಪಘಾತಗಳು ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
55
ಈ ದ್ವೀಪ ಮಳುಗುವುದಿಲ್ಲ
ಕಾರ್ನೆಗೆ ಸೈನ್ಸ್ ಹಾಗೂ ಯೇಲ್ ವಿಶ್ವವಿದ್ಯಾಲಯದ ಸಂಶೋದಕರು ವಿಜ್ಞಾನಿಗಳು ಈ ಬರ್ಮಡಾ ಟ್ರಯಾಂಗಲ್ ರಹಸ್ಯ ಭೇದಿಸಲು ಕಳೆದ ಹಲವು ವರ್ಷಗಳಿಂದ ಸತತ ಅಧ್ಯಯನ ನಡೆಸುತ್ತಿದ್ದಾರೆ. ಜ್ವಾಲಾಮುಖಿಯಿಂದ ಸೃಷ್ಟಿಯಾದ ದ್ವೀಪ ಮುಳುಗುತ್ತದೆ. ಆದರೆ ಬರ್ಮುಡಾ ಟ್ರಯಾಂಗಲ್ ಯಾವುದೇ ಸಮಸ್ಯೆ ಇಲ್ಲದೆ ಗಟ್ಟಿಯಾಗಿ ನಿಂತಿದೆ. ಇದಕ್ಕೆ ಇಲ್ಲಿ ರಚನೆಗೊಂಡಿರುವ ವಿಶೇಷ ಶಿಲಾಪದರವೇ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ದ್ವೀಪ ಮಳುಗುವುದಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ