ಒಮಾನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ದಾಳಿ, ಮಳುಗುತ್ತಿದ್ದ ಶಿಪ್‌ನಿಂದ 14 ಸಿಬ್ಬಂದಿ ರಕ್ಷಣೆ

Published : May 14, 2026, 04:54 PM IST

ಒಮಾನ್ ಕರಾವಳಿ ಬಳಿ ಡ್ರೋನ್ ದಾಳಿಗೆ ತುತ್ತಾಗಿ ಗುಜರಾತ್ ಮೂಲದ 'ಹಾಜಿ ಅಲಿ' ಎಂಬ ಭಾರತೀಯ ಸರಕು ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 14 ಭಾರತೀಯ ನಾವಿಕರನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದಾರೆ.

PREV
15
ಭಾರತದ ಹಡಗಿನ ಮೇಲೆ ಡ್ರೋನ್ ದಾಳಿ

ಇರಾನ್ ಯುದ್ಧ ಸಂಘರ್ಷದಿಂದ ಹೊರ್ಮುಜ್ ಜಲಸಂಧಿ ದಾಟಿ ತೈಲ, ಅನಿಲ, ಸರಕು ಹಡಗುಗಳು ಸಂಚರಿಸುವುದು ಅತೀ ದೊಡ್ಡ ಅಪಾಯ ಮೈಮೇಲೆ ಎಳೆದುಕೊಂಡಂತೆ. ಎಲ್ಲಿಂದ ದಾಳಿಯಾಗುತ್ತಿದೆ ಅನ್ನೋ ಹೇಳುವುದು ಕಷ್ಟ. ಇದೀಗ ಭಾರತದತ್ತ ಸರಕು ತುಂಬಿಕೊಂಡು ಬರುತ್ತಿದ್ದ ಭಾರತದ ಹಡಗಿನ ಮೇಲೆ ಡ್ರೋನ್ ದಾಳಿಯಾಗಿದೆ. ಓಮಾನ್ ಕರಾವಳಿ ತೀರ ಪ್ರದೇಶದಲ್ಲಿ ಈ ದಾಳಿಯಾಗಿದೆ. ಪರಿಣಾಮ ಹಡಗು ಮುಳುಗಡೆಯಾಗಿದೆ.

25
14 ಸಿಬ್ಬಂದಿಗಳ ರಕ್ಷಣೆ

ಹಡಗು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಗುಜರಾತ್ ಮೂಲದ 'ಹಾಜಿ ಅಲಿ' ಹೆಸರಿನ ಈ ಹಡಗಿನಲ್ಲಿದ್ದ ಎಲ್ಲಾ 14 ಭಾರತೀಯ ನಾವಿಕರನ್ನು ಒಮಾನ್ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬುಧವಾರ ಮುಂಜಾನೆ 3:30ರ ಸುಮಾರಿಗೆ ಒಮಾನ್‌ನ ಉತ್ತರ ಕರಾವಳಿಯ ಲಿಮಾ ಎಂಬ ಪ್ರದೇಶದ ಬಳಿ ಈ ಘಟನೆ ನಡೆದಿದೆ.

35
ಹಡಗು ಗುರಿಯಾಸಿ ದಾಳಿ

ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯ ಸಲಾಯಾ ಬಂದರಿನಲ್ಲಿ ಈ ಹಡಗು ನೋಂದಣಿಯಾಗಿತ್ತು. 'ಹಾಜಿ ಅಲಿ' ಹಡಗು ಸೊಮಾಲಿಯಾದಿಂದ ಜಾನುವಾರುಗಳನ್ನು ಹೊತ್ತು ಶಾರ್ಜಾಗೆ ಹೊರಟಿತ್ತು. ಪ್ರಯಾಣದ ಮಧ್ಯೆ, ಅಪರಿಚಿತ ಸ್ಫೋಟಕ ವಸ್ತುವೊಂದು ಹಡಗಿಗೆ ಅಪ್ಪಳಿಸಿದೆ. ಇದು ಡ್ರೋನ್ ಅಥವಾ ಮಿಸೈಲ್ ಇರಬಹುದು ಎಂದು ಶಂಕಿಸಲಾಗಿದೆ. ದಾಳಿಯ ನಂತರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಹಡಗು ಸಂಪೂರ್ಣ ನಾಶಗೊಂಡ ಕಾರಣ ಸಮುದ್ರದಲ್ಲಿ ಮುಳುಗಿದೆ.

45
ಲೈಪ್ ಬೋಟ್ ಮೂಲಕ ಸಮುದ್ರ ಜಿಗಿದ ಸಿಬ್ಬಂದಿ

ತಕ್ಷಣವೇ ಅಪಾಯದ ಸಂಕೇತ ರವಾನಿಸಿದ 14 ಸಿಬ್ಬಂದಿ, ಲೈಫ್ ಬೋಟ್‌ಗಳ ಮೂಲಕ ಪಾರಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಒಮಾನ್ ಕೋಸ್ಟ್ ಗಾರ್ಡ್ ಸಿಬ್ಬಂದಿ, ಎಲ್ಲರನ್ನೂ ರಕ್ಷಿಸಿ ದೀಬಾ ಬಂದರಿಗೆ ಕರೆತಂದಿದ್ದಾರೆ. ನಾವಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹಡಗಿನ ಮಾಲೀಕ ಸುಲ್ತಾನ್ ಅಹ್ಮದ್ ಸಂಗರ್ ಖಚಿತಪಡಿಸಿದ್ದಾರೆ. ಆದರೆ, ಹಡಗಿನಲ್ಲಿದ್ದ ಎಲ್ಲಾ ಜಾನುವಾರುಗಳು ಸಾವನ್ನಪ್ಪಿವೆ.

55
ಆತಂಕಕ್ಕೆ ಕಾರಣವಾದ ಘಟನೆ

ಈ ಘಟನೆಯನ್ನು ಭಾರತದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಭಾರತದ ಧ್ವಜ ಹೊತ್ತ ಹಡಗಿನ ಮೇಲಿನ ದಾಳಿ ಒಪ್ಪುವಂತದ್ದಲ್ಲ. ವಾಣಿಜ್ಯ ಹಡಗುಗಳು ಮತ್ತು ಸಾಮಾನ್ಯ ನಾವಿಕರನ್ನು ಗುರಿಯಾಗಿಸುವುದು ಖಂಡನೀಯ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇರಾನ್-ಅಮೆರಿಕ ಸಂಘರ್ಷದಿಂದಾಗಿ ಸೂಕ್ಷ್ಮವಾಗಿರುವ ಹಾರ್ಮುಜ್ ಜಲಸಂಧಿ ಬಳಿ ಈ ಘಟನೆ ನಡೆದಿರುವುದು, ಈ ಭಾಗದಲ್ಲಿ ಕಡಲ ಭದ್ರತೆಯ ಬಗ್ಗೆ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿದೆ. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆತಂಕಕ್ಕೆ ಕಾರಣವಾದ ಘಟನೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories