ಭಾರತದ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಲಾ 1 ಕೋಟಿ ರು, ಪರಿಹಾರ ಘೋಷಿಸಿದ್ದಾರೆ. ಅಜರ್ ಕುಟುಂಬದ 14 ಮಂದಿ ಸತ್ತಿದ್ದು, ಆತನೇ 14 ಕೋಟಿ ರು, ಪರಿಹಾರ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಭಾರತದ ದಾಳಿಯಲ್ಲಿ ಅಜರ್‌ನ ಸಹೋದರಿ, ಭಾವ , ಅಳಿಯ ಮಕ್ಕಳು, ಆಪ್ತರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು.