ಬೆಲೆ ಎಷ್ಟು?: ಇದರ ಬೆಲೆ ಎಷ್ಟು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ ಒಂದು ಕ್ಷಿಪಣಿಯ ಬೆಲೆ ಸುಮಾರು 35 ಮಿಲಿಯನ್ ಡಾಲರ್‌ಗಳು ಅಂದರೆ ರೂ. 290 ಕೋಟಿಗಳು. ಆದರೆ ಇದರ ಸಂಪೂರ್ಣ ಯೋಜನೆಯ ವೆಚ್ಚ ಸುಮಾರು 85 ಬಿಲಿಯನ್ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ. ಸಂಶೋಧನೆ, ಅಭಿವೃದ್ಧಿ, ಪರೀಕ್ಷೆ, ಉತ್ಪಾದನೆ ಮುಂತಾದ ಎಲ್ಲಾ ವೆಚ್ಚಗಳನ್ನು ಸೇರಿಸಿದರೆ ಒಟ್ಟು ಮೊತ್ತ ಇಷ್ಟಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.