Published : May 01, 2025, 01:21 PM ISTUpdated : May 01, 2025, 02:20 PM IST
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧ ಶುರುವಾಗಬಹುದು ಎಂಬ ವರದಿಗಳ ನಡುವೆ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ ₹800, ಅಕ್ಕಿ ಕೆಜಿಗೆ ₹340 ಆಗಿದೆ.
ಭಾರತದ ಜೊತೆ ಯುದ್ಧ ಆದ್ರೆ ಪಾಕಿಸ್ತಾನದಲ್ಲಿ ಆಹಾರದ ಕೊರತೆ ತಪ್ಪಿದ್ದಲ್ಲ. ಯಾಕಂದ್ರೆ ಈಗಾಗಲೇ ಪಾಕಿಸ್ತಾನ ಆರ್ಥಿಕ ಸಂಕಷ್ಟದಲ್ಲಿದೆ. ಅಗತ್ಯ ವಸ್ತುಗಳ ಬೆಲೆಗಳು ಏರುತ್ತಲೇ ಇವೆ. ದೇಶದ ಆರ್ಥಿಕತೆ ಕುಸಿಯುತ್ತಿದೆ. ಈ ಸಮಯದಲ್ಲಿ ಭಾರತದ ಜೊತೆ ಜಗಳಕ್ಕೆ ನಿಂತಿದೆ.
25
ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಮತ್ತು ಆಹಾರದ ಕೊರತೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಪ್ರಮುಖ ಬೆಳೆಗಳಾದ ಭತ್ತ ಮತ್ತು ಜೋಳದ ಉತ್ಪಾದನೆ ಕುಸಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರದ ಕೊರತೆ ಹೆಚ್ಚಾಗಿದೆ.
35
ಕೋಳಿ ₹800, ಅಕ್ಕಿ ₹340: ಪಾಕ್ ಸಂಕಷ್ಟದಲ್ಲಿ
ಹಣದುಬ್ಬರಿಂದಾಗಿ ಜನರ ಮೇಲೆ ಹೆಚ್ಚುತ್ತಿರುವ ಹೊರೆ. ಸರಾಸರಿ ಇನ್‌ಪ್ಲೇಷನ್ ದರ 25% ತಲುಪಿರುವುದರಿಂದ ಪಾಕಿಸ್ತಾನದ ಪರಿಸ್ಥಿತಿ ಹದಗೆಟ್ಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.