ತಜ್ಞರು ಹೇಳಿದಂತೆ ದಿನದಿಂದ ದಿನಕ್ಕೆ Gold Rate ಕುಸಿತ; ಆದರೆ ಇದು Red Alert ಸೂಚನೆ!

Published : Oct 27, 2025, 11:06 AM ISTUpdated : Oct 27, 2025, 11:08 AM IST

Today Gold Rate In India: ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಇತ್ತು. ಈಗ ಕುಸಿತ ಕಾಣುತ್ತಿದೆ. ಈ ವರ್ಷ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗುತ್ತಲೇ ಇತ್ತು. ಬಂಗಾರವು 10 ಗ್ರಾಂಗೆ 1,29,584 ರೂ. ತಲುಪಿತ್ತು. ಚಿನ್ನ 1,23,000 ರೂ.ಗೆ ಇಳಿದಿದೆ. ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.

PREV
16
ಏರಿಕೆ ಆಗಲು ಕಾರಣ ಏನು?

ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಬಡ್ಡಿದರ ಕಡಿತ, ಹೊಸ ಹೊಸ ಸುಂಕಗಳು, ಅಮೆರಿಕದ ಡೊನಾಲ್ಡ್‌ ಟ್ರಂಪ್ ಅವರ ಒತ್ತಡದಿಂದ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇತ್ತು.

26
ಯಾಕೆ ಕೇಂದ್ರ ಬ್ಯಾಂಕ್ ಹೆಚ್ಚು ಚಿನ್ನ ಖರೀದಿಸುತ್ತಿವೆ?

ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್‌ಗಳು ಹೆಚ್ಚು ಹೆಚ್ಚು ಬಂಗಾರವನ್ನು ಖರೀದಿ ಮಾಡುತ್ತಿವೆ. ಡಾಲರ್ ಮೇಲೆ ಅವಲಂಬಿಸೋದನ್ನು ಕಡಿಮೆ ಮಾಡೋದು ಇವರ ಪ್ಲ್ಯಾನ್. ಅಮೆರಿಕನ್ ಡಾಲರ್‌ನ ಏಕಸ್ವಾಮ್ಯತೆ ಏನಿದೆ, ಅದನ್ನು ಅಂತ್ಯ ಮಾಡಬೇಕು ಎನ್ನೋದು ಅವರ ಯೋಜನೆಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತವು ತನ್ನ ಚಿನ್ನದ ಮೀಸಲನ್ನು 9.6% ರಿಂದ 13.1% ಕ್ಕೆ ಹೆಚ್ಚು ಮಾಡಿದೆ. ಅದೇ ರೀತಿ ರಷ್ಯಾ ದೇಶವು ಕೂಡ 29.5%-35.8% ಕ್ಕೆ ಹೆಚ್ಚಿಸಿದೆ.

36
ಆರ್‌ಬಿಐ ಬಳಿ ಎಷ್ಟು ಬಂಗಾರವಿದೆ?

2025-26ರ ಆರ್ಥಿಕ ವರ್ಷದಲ್ಲಿ, ಅಂದರೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ, ಚಿನ್ನದ ಮೀಸಲು 880.18 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಾಗಿದೆ. 2024-25ರ ಅಂತ್ಯದಲ್ಲಿ 879.58 ಮೆಟ್ರಿಕ್ ಟನ್ ಇತ್ತು. 2025ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ RBI ತನ್ನ ಚಿನ್ನದ ಮೀಸಲಿಗೆ 600 ಕೆಜಿ ಬಂಗಾರವನ್ನು ಸೇರಿಸಿದೆ. 2024-25ರ ಆರ್ಥಿಕ ವರ್ಷದಲ್ಲಿ ರಿಸರ್ವ್ ಬ್ಯಾಂಕ್ 54.13 ಮೆಟ್ರಿಕ್ ಟನ್‌ ಬಂಗಾರ ಖರೀದಿಸಿದೆ.

46
ಇಳಿಕೆ ಕಾಣುತ್ತಿದೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಬಂಗಾರವು 9,000 ರೂಪಾಯಿ ಆಗಿದ್ರೆ, ಬೆಳ್ಳಿ ಬೆಲೆಯು 22,000 ರೂಪಾಯಿವರೆಗೆ ಇಳಿಕೆ ಕಂಡಿದೆ. ಜಾಗತಿಕವಾಗಿ ಹೇಳುವುದಾದರೆ ಸ್ಪಾಟ್ ಗೋಲ್ಡ್ 0.53% ಇಳಿಕೆಯೊಂದಿಗೆ ಪ್ರತಿ ಔನ್ಸ್‌ಗೆ 4102.09 ಡಾಲರ್‌ ಆಗಿದೆ. ಪ್ರತಿ ಔನ್ಸ್‌ಗೆ 48.82 ಡಾಲರ್‌ನಲ್ಲಿ ಸ್ಪಾಟ್ ಸಿಲ್ವರ್ ವಹಿವಾಟು ಮಾಡುತ್ತಿದೆ.

56
ತಜ್ಞರು ಹೇಳಿದಂತೆ ಆಯ್ತು

ಚಿನ್ನ-ಬೆಳ್ಳಿಯು ನಿರಂತರವಾಗಿ ಬೆಲೆ ಏರುತ್ತಿರೋದು ನಿಜಕ್ಕೂ ಸಣ್ಣ ಹೂಡಿಕೆದಾರರಿಗೆ ದೊಡ್ಡ ನಷ್ಟವಾಗಬಹುದು ಎಂದು ತಜ್ಞರು ಹೇಳಿದ್ದರು. ಇದರಿಂದಲೇ ಚಿನ್ನ-ಬೆಳ್ಳಿ ಬೆಲೆಯಲ್ಲಿ ಈಗ ಇಳಿಕೆ ಕಾಣುತ್ತಿದೆ ಎನ್ನಲಾಗಿದೆ. ಏಷ್ಯನ್ ಮಾರುಕಟ್ಟೆ, ಜಾಗತಿಕ ಮಟ್ಟದಲ್ಲಿ ಬಂಗಾರ ಹಾಗೂ ಬೆಳ್ಳಿ ಬೆಲೆಯು ಇಳಿಯುತ್ತಿದೆ.

66
ರೆಡ್ ಅಲರ್ಟ್ ಯಾಕೆ?

ಇಡೀ ಪ್ರಪಂಚದಲ್ಲಿರುವ ಕೇಂದ್ರ ಬ್ಯಾಂಕ್‌ಗಳು ಚಿನ್ನವನ್ನು ದೊಡ್ಡ ಮಟ್ಟದಲ್ಲಿ ಖರೀದಿ ಮಾಡ್ತಿದ್ದಾರೆ. ಇದು ಒಂದು ರೀತಿಯ ಜಾಗತಿಕ ರೆಡ್ ಅಲರ್ಟ್ ಎಂದು ಕರೆಯಲಾಗಿದೆ. ಚಿನ್ನದ ಬೆಲೆ ಈಗ ಅನಿರೀಕ್ಷಿತವಾಗಿ ಏರಿಕೆ ಕಂಡಿದೆ. ಇದು ಏರಿಕೆಗಿಂತ ಹೆಚ್ಚಾಗಿ ಎಚ್ಚರಿಕೆಯ ಕರೆಘಂಟೆ. ಈ ಏರಿಕೆಯು 2008ರ ಆರ್ಥಿಕ ಹಿಂಜರಿತ, ಕೋವಿಡ್-19 ಸಾಂಕ್ರಾಮಿಕದ ಬಿಕ್ಕಟ್ಟುಗಳನ್ನು ನೆನಪು ಮಾಡುವುದು.

Read more Photos on
click me!

Recommended Stories