H1B visa fee increase impact: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್1ಬಿ ವೀಸಾ ಶುಲ್ಕವನ್ನು ಏರಿಸಿದ್ದರಿಂದ, ಅಮೆರಿಕದ ಕಂಪನಿಗಳಿಗೆ ಭಾರತೀಯರನ್ನು ನೇಮಿಸಿಕೊಳ್ಳುವುದು ದುಬಾರಿಯಾಗಿದೆ.
ಐಟಿ ವಲಯದಲ್ಲಿನ ವಿದೇಶಿಯರ ನೌಕರಿಗೆ ಕಡಿವಾಣ ಮತ್ತು ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನೆಪದಲ್ಲಿ, ವಿದೇಶಿಗರಿಗೆ ನೀಡಲಾಗುವ ಎಚ್1ಬಿ ವೀಸಾ ಶುಲ್ಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಕೆ ಮಾಡಿದ್ದಾರೆ.
25
ಅಮೆರಿಕದ ಕಂಪನಿ
ಈ ಶುಲ್ಕ ಏರಿಕೆ ಭಾರತೀಯರಿಗೆ ಮಾತ್ರವಲ್ಲ, ಅಮೆರಿಕದ ಕಂಪನಿಗಳಿಗೂ ಸಮಸ್ಯೆಯಾಗುತ್ತಿದೆ. ಆದಕಾರಣ ಅವುಗಳು ಕೆಲ ಸೇವಾ ವಲಯದ ಕೆಲಸಗಳನ್ನು ಭಾರತದಲ್ಲಿಯೇ ಮಾಡಲು ಮುಂದಾಗುವ ಸಾಧ್ಯತೆ ದಟ್ಟವಾಗುತ್ತಿದೆ.
35
ಕೌಶಲ್ಯಯುತ ದುಡಿಯುವ ವರ್ಗ
ಭಾರತದಲ್ಲಿ ಕೌಶಲ್ಯಯುತ ದುಡಿಯುವ ವರ್ಗವಿದೆಯಾದರೂ, ಅವರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಅಗತ್ಯವಾದ ಎಚ್1ಬಿ ವೀಸಾವನ್ನು ಟ್ರಂಪ್ ದುಬಾರಿಗೊಳಿಸಿದ್ದಾರೆ. ಇವುಗಳ ಹೊರೆ ಕಂಪನಿಗಳ ಮೇಲೆ ಬೀಳಲಿರುವ ಕಾರಣ, ಅವುಗಳು ವಿದೇಶಿಗರ ಬದಲು ಅಮೆರಿಕನ್ನರನ್ನು ನೇಮಿಸಿಕೊಳ್ಳುತ್ತಾರೆ ಎಂಬುದು ಟ್ರಂಪ್‌ರ ಲೆಕ್ಕಾಚಾರ.
ಅಮೆರಿಕನ್ನರಲ್ಲಿರುವ ಪ್ರಾವೀಣ್ಯತೆಯ ಕೊರತೆ ಹಾಗೂ ಅವರಿಗೆ ಅಧಿಕ ವೇತನ ಕೊಡಬೇಕಾಗಿರುವುದರಿಂದ ಅಮೆರಿಕದ ಕಂಪನಿಗಳು ಭಾರತೀಯರನ್ನೇ ನೆಚ್ಚಿಕೊಳ್ಳುವುದನ್ನು ಮುಂದುವರೆಸಿವೆ. ಪರಿಣಾಮವಾಗಿ, ಅವುಗಳು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಬೆಳವಣಿಗೆ(ಜಿಸಿಸಿ) ಸೇವೆಗಳನ್ನು ಭಾರತದಲ್ಲಿಯೇ ಮಾಡಿಸಲು ಮುಂದಾಗುತ್ತಿವೆ. ಹೀಗಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ, ಕೃತಕ ಬುದ್ಧಿಮತ್ತೆ(ಎಐ)ಯ ವ್ಯಾಪಕ ಅಳವಡಿಕೆ.
ಈ ಬಗ್ಗೆ ಮಾತನಾಡಿರುವ ಡೆಲಾಯ್ಟ್ ಇಂಡಿಯಾದಲ್ಲಿ ಜಿಸಿಸಿ ಉದ್ಯಮದ ಅಧ್ಯಕ್ಷ ರೋಹನ್ ಲೋಬೊ, ‘ಹಲವು ಕಂಪನಿಗಳು ಜಿಸಿಸಿ ಸೇವೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ನೋಡುತ್ತಿವೆ. ಈ ಬಗ್ಗೆ ಯೋಜನೆಗಳೂ ಸಿದ್ಧವಿದೆ’ ಎಂದು ಹೇಳಿದ್ದಾರೆ. ಈ ಮೊದಲು ಸುಮಾರು 4 ಲಕ್ಷ ರು. ಇದ್ದ ಎಚ್1ಬಿ ವೀಸಾ ದರವನ್ನು ಟ್ರಂಪ್ 88 ಲಕ್ಷ ರು.ಗೆ ಏರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ