Published : Feb 12, 2026, 07:41 AM ISTUpdated : Feb 12, 2026, 01:20 PM IST
ಸೌದಿ ಅರೇಬಿಯಾದ ಮದುವೆಯೊಂದರಲ್ಲಿ ಅತಿಥಿಗಳಿಗೆ ವಧುವಿನ ಸಹೋದರ ಚಿನ್ನದ ಬಿಸ್ಕಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತ. ಇದೀಗ ಈ ವೈರಲ್ ವಿಡಿಯೋ ಅಸಲಿ ವಿಷಯ ಬೆಳಕಿಗೆ ಬಂದಿದೆ.
ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಧುವಿನ ಸೋದರ ಚಿನ್ನದ ಬಿಸ್ಕಟ್ ವಿತರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಮುಂಚೆ ಈ ವಿಷಯ ಗೊತ್ತಿದ್ರೆ ನಾವು ಸಹ ಮದುವೆಗೆ ಹೋಗಬಹುದಿತ್ತು ಅಲ್ಲವಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಇದೀಗ ಈ ವಿಡಿಯೋದ ಅಸಲಿ ಕಥೆ ಬಯಲಾಗಿದೆ.
25
ಚಿನ್ನದ ಬೆಲೆ 1 ಲಕ್ಷ
ಇಂದು 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿದ್ದು, ಹಳದಿ ಸುಂದರಿ ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಜೀವನದ ಉಳಿತಾಯವನ್ನೆಲ್ಲಾ ಒಟ್ಟುಗೂಡಿಸಿ ಚಿನ್ನ ತೆಗೆಯುವ ಸಂದರ್ಭವಾಗಿದೆ. ಈ ತಿಂಗಳ ಆರಂಭದಲ್ಲಿ ಕೊಂಚ ಕುಸಿತ ಕಂಡಿದ್ದ ಚಿನ್ನ ಮತ್ತೆ ಏರಿಕೆಯಾಗುತ್ತಿದೆ.
35
ಹಲ್-ಚಲ್
ಇದೀಗ ಸೌದಿ ಅರೇಬಿಯಾದ ಮದುವೆಯದ್ದು ಎನ್ನಲಾದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಹಲ್-ಚಲ್ ಸೃಷ್ಟಿಸಿತ್ತು. ಸುಮಾರು 100 ಗ್ರಾಂ ತೂಕವಿರುವಷ್ಟು ಶುದ್ಧ ಚಿನ್ನದ ಬಿಸ್ಕಟ್‌ಗಳನ್ನು ಅತಿಥಿಗಳಿಗೆ ಉಡುಗೊರೆ ರೂಪದಲ್ಲಿ ನೀಡಲಾಗಿದೆ ಎಂದು ಹೇಳಲಾಗಿತ್ತು.
@FrontalForce ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈವರೆಗೆ 74 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಸೌದಿಯ ಶ್ರೀಮಂತದ ಕುಟುಂಬದ ಮದುವೆಯಲ್ಲಿ ಚಿನ್ನವನ್ನು ಕಾಣಿಕೆಯಾಗಿ ನೀಡಲಾಗಿದೆ ಎಂದು @grok ಸಹ ಖಚಿತಪಡಿಸಿದ ಟ್ವೀಟ್ ಸಹ ವೈರಲ್ ಆಗಿತ್ತು.
ವಿಡಿಯೋದಲ್ಲಿ ನೀಡಲಾಗಿದ್ದು, ಗೋಲ್ಡನ್ ಕಲರ್ ಪೇಪರ್‌ನಲ್ಲಿ ಸುತ್ತಿರುವ ಚಾಕ್ಲೇಟ್‌ಗಳನ್ನು ನೀಡಲಾಗಿದೆ. ಆದ್ರೆ ಇದು ಅಸಲಿ ಚಿನ್ನವಲ್ಲ. ಇದು ಗೋಲ್ಡ್ ಕಲರ್ ಪೇಪರ್ ಹೊಂದಿರುವ ಚಾಕ್ಲೇಟ್ ಎಂಬ ಸತ್ಯ ಫ್ಯಾಕ್ಟ್ ಚೆಕ್‌ನಲ್ಲಿ ಬಯಲಾಗಿದೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ನನಗೂ ಇಂತಹ ಮದುವೆಗೆ ಯಾರಾದ್ರು ಆಹ್ವಾನಿಸಿದ್ರೆ ನಾನು ಖಂಡಿತವಾಗಿಯೂ ಸ್ವಇಚ್ಛೆಯಿಂದ ಹಾಜರಾಗುವೆ. ಇಂತಹ ಮದುವೆಗಳ ಮಾಹಿತಿಯಿದ್ರೆ ಮುಂಚಿತವಾಗಿಯೇ ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ