ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ದುಬೈನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ ಭಾರತೀಯ ಮಹಿಳೆ ತನ್ನಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸದ ಜೊತೆ ಎಸೆದಿದ್ದಾರೆ. ಮುಂದೇನಾಯಿತು?
ಭಾರತೀಯ ಮಹಿಳೆ ಕಾಮಿನಿ ಕಣ್ಣನ್ ಮದುವೆ ಕಾರ್ಯಕ್ರಮಕ್ಕಾಗಿ ದುಬೈಗೆ ತೆರಳಿದ್ದಾರೆ. ಯಎಇನಲ್ಲಿ 23 ವರ್ಷ ಕೆಲಸ ಮಾಡಿ ಬಳಿಕ 2021ರಲ್ಲಿ ನಿವೃತ್ತಿ ಪಡೆದು ಕಾಮಿನಿ ಕಣ್ಮನ್ ಭಾರತಕ್ಕೆ ಮರಳಿದ್ದರು. ಮದುವೆಗಾಗಿ ದುಬೈಗೆ ತೆರಳಿದ ಕಾಮಿನಿ ಕಣ್ಣನ್ ತಮ್ಮ ಕೆಲಸದ ವೇಳೆ ಹೂಡಿಕೆಯ ಚಿನ್ನದ ನಾಣ್ಯಗಳನ್ನು ಪೌಚ್‌ನಲ್ಲಿ ಹಾಕಿ ಇಟ್ಟಿದ್ದರು. ಅಚನಕ್ಕಾಗಿ ಈ ಪೌಚ್ ಕಸದ ಬುಟ್ಟಿ ಸೇರಿದೆ. ಮರುದಿನ ಬೆಳಗ್ಗೆ ಕಸದ ಕಾರ್ಮಿಕರು ಬಂದು ಕಸ ತೆಗೆದುಕೊಂಡು ಹೋಗಿದ್ದಾರೆ. ಮೂಲಕ ಬರೋಬ್ಬರಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಸದ ಜೊತೆ ಬಿಸಾಡಿದ ಘಟನೆ ನಡೆದಿದೆ.
26
ಪೌಚ್‌ಗೆ ಬದಲಾಯಿಸಿ ಟೇಬಲ್ ಮೇಲಿಟ್ಟಿದ್ದ ಮಹಿಳೆ
ಕಾಮಿನಿ ಕಣ್ಣನ್ ತಾವಿಟ್ಟಿದ್ದ ಚಿನ್ನದ ನಾಣ್ಯಗಳ ಪೌಚ್ ಕೊಂಚ ಹರಿದಿತ್ತು. ಹೀಗಾಗಿ ಸುರಕ್ಷಿತವಾಗಿ ಚಿನ್ನ ಇಡಲು ಮತ್ತೊಂದು ಪೌಚ್‌ಗೆ ಚಿನ್ನದ ನಾಣ್ಯಗಳನ್ನು ವರ್ಗಾಯಿಸಿದ್ದರು. ಬಳಿಕ ಈ ಪೌಚ್‌ನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟಿದ್ದಾರೆ. ಈ ಪೌಚ್‌ನಲ್ಲಿ 50 ಗ್ರಾಂ ತೂಕದ ಚಿನ್ನದ ಬಿಸ್ಕೆಟ್, 32 ಗ್ರಾಂ ತೂಕದ ನಾಲ್ಕು ಚಿನ್ನದ ನಾಣ್ಯಗಳು ಇತ್ತು.
36
ಮನೆ ಸ್ವಚ್ಚಗೊಳಿಸುವಾಗ ಚಿನ್ನದ ಪೌಚ್ ಕಸದ ಬುಟ್ಟಿಗೆ
ಮನೆ ಸ್ವಚ್ಚಗೊಳಿಸುವಾಗ ಈ ಚಿನ್ನದ ಪೌಚ್‌ನ್ನು ಕಾಮಿನಿ ಕಣ್ಣನ್ ಕಸದ ಬುಟ್ಟಿಗೆ ಎಸೆದಿದ್ದಾನೆ. ತಾಯಿ ಆಭರಣ ಇಟ್ಟಿರುವ ಹಳೇ ಪೌಚ್ ಬಗ್ಗೆ ಮಗನಿಗೆ ಸ್ಪಷ್ಟತೆ ಇತ್ತು. ಹೀಗಾಗಿ ಟೇಬಲ್ ಮೇಲಿಟ್ಟಿದ್ದ ಪೌಚ್ ಕಸದ ಬುಟ್ಟಿಗೆ ಎಸೆದಿದ್ದಾನೆ. ಇತ್ತ ಕಸದ ಕಾರ್ಮಿಕರು ಬಂದು ಕಸ ಸಂಗ್ರಹ ಮಾಡಿ ತೆರಳಿದ್ದಾರೆ. ಈ ಚಿನ್ನದ ನಾಣ್ಯ ಹಾಗೂ ಬಿಸ್ಕಟ್ ಕಸದ ಬುಟ್ಟಿ ಸೇರಿದೆ.
ಕಾಮಿನಿ ಕಣ್ಣನ್ ಭಾರತಕ್ಕೆ ಮರಳಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಕ್ಕೂ ಮೊದಲು ಪ್ಯಾಕಿಂಗ್ ಮಾಡುವಾಗ ಚಿನ್ನ ಇಟ್ಟಿದ್ದ ಪೌಚ್ ಕಾಣೆಯಾಗಿತ್ತು. ವಿಚಾರಿಸಿದಾಗ ಇದು ಕಸದ ಬುಟ್ಟಿ ಸೇರಿದೆ ಅನ್ನೋ ಉತ್ತರ ಬಂದಿತ್ತು. 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಸದ ಬುಟ್ಟಿ ಸೇರಿದೆ ಅನ್ನೋ ಖಚಿತವಾಗಿತ್ತು.
56
ಪೊಲೀಸರಿಂದ ಕರೆ
ತಾವೇ ಕಸದ ಬುಟ್ಟಿಗೆ ಹಾಕಿದ್ದ ಕಾರಣ ದೂರು ನೀಡಬೇಕೋ ಬೇಡವೇ ಅನ್ನೋ ಗೊಂದಲ ಮುಂದುವರಿದಿತ್ತು. ಇದರ ನಡುವೆ ಪೊಲೀಸರಿಂದ ಕರೆಯೊಂದು ಬಂದಿದೆ. ಠಾಣೆಗೆ ಬರಬೇಕು ಎಂದು ಸೂಚಿಸಿದ್ದರು. ಪೊಲೀಸ್ ಠಾಣೆಗೆ ತೆರಳಿದಾಗ ಚಿನ್ನದ ನಾಣ್ಯ, ಬಿಸ್ಕೆಟ್ ಪೌಚ್ ಮುಂದಿಟ್ಟಿದ್ದರೆ. ಸಿಗುವುದೇ ಇಲ್ಲ ಎಂದುಕೊಂಡಿದ್ದ ಚಿನ್ನ ಮರಳಿ ಸಿಕ್ಕಿದೆ. ಕಾಮಿನಿ ಕಣ್ಣನ್ ಸಂತಸಕ್ಕೆ ಪಾರವೇ ಇರಲಿಲಿಲ್ಲ.
66
ಚಿನ್ನ ಸಿಕ್ಕಿದ್ದು ಹೇಗೆ
ಕಸ ಸಂಗ್ರಹಿಸುವ ಪೌರ ಕಾರ್ಮಿಕನಿಗೆ ಈ ಚಿನ್ನದ ಪೌಚ್ ಸಿಕ್ಕಿದೆ.ಈ ಪೌಚ್ ಹಿಡಿದು ದುಬೈ ಗೋಲ್ಡ್ ಮಾರ್ಕೆಟ್ ತೆರಳಿದದ ಕಾರ್ಮಿಕ, ಪೌಚ್ ಹಿಂದಿರುಗಿಸಲು ಮುಂದಾಗಿದ್ದಾನೆ. ಪೊಲೀಸರ ಬಳಿಕ ತನಗೆ ಈ ಪೌಚ್ ಕಸದ ಬುಟ್ಟಿಯಿಂದ ಸಿಕ್ಕಿರುವುದಾಗಿ ಹೇಳಿದ್ದಾನೆ. ಇತ್ತ ಪೊಲೀಸರು, ಯಾವ ಕಸದ ಬುಟ್ಟಿ ಎಂದು ಪರಿಶೀಲಿಸಿದ್ದಾರೆ. ದುಬೈನಲ್ಲಿ ಯಾವ ಮನೆಯಿಂದ ಯಾವ ಕಸ ಬಂದಿದೆ ಅನ್ನೋದು ಸ್ಪಷ್ಟವಾಗಿ ಹೇಳುವ ವ್ಯವಸ್ಥೆ ಇದೆ. ಇದರಂತೆ ಮನೆ ಸದಸ್ಯರ ನಂಬರ್ ಪಡೆದು ಕರೆ ಮಾಡಿದ್ದಾರೆ. ಸಂಬಂಧ ಪಟ್ಟ ದಾಖಲೆ ಪಡೆದು ಚಿನ್ನ ಮರಳಿಸಿದ್ದಾರೆ.
ಚಿನ್ನ ಸಿಕ್ಕಿದ್ದು ಹೇಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ