ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್

Published : Jul 05, 2026, 09:21 AM IST

ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .

PREV
14
ಸಿಬ್ಬಂದಿ ಕಡಿತ

ವಾಷಿಂಗ್ಟನ್‌: ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಆಟೋ ಕಂಪನಿ ಫೋರ್ಡ್‌ ಮೋಟಾರ್‌ ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್‌ ಆದ ‘ಕಾಮನ್‌ ವೆಲ್ತ್‌ ಬ್ಯಾಂಕ್‌ ಆಸ್ಟ್ರೇಲಿಯಾ (ಸಿಬಿಎ) ಕೂಡ ತನ್ನ ಹಳೆಯ ಸಿಬ್ಬಂದಿ ಕಡಿತ ಮಾಡಿ ಪಶ್ಚಾತ್ತಾಪ ಪಡುತ್ತಿದೆ!

24
Artificial Intelligence Risks

2025ರಲ್ಲಿ ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್‌ ಆದ ಕಾಮನ್‌ವೆಲ್ತ್‌ ಬ್ಯಾಂಕ್‌ ಆಫ್‌ ಆಸ್ಟ್ರೇಲಿಯಾ (ಸಿಬಿಎ) ತನ್ನ 45ಕ್ಕೂ ಹೆಚ್ಚು ಗ್ರಾಹಕ ಸೇವಾ ಸಿಬ್ಬಂದಿ ವಜಾ ಮಾಡಿ ಅವರ ಜಾಗಕ್ಕೆ ‘ಎಐ ವಾಯ್ಸ್‌ ಬಾಟ್‌’ ಅನ್ನು ನಿಯೋಜಿಸಿತ್ತು. ಆ ಸಂದರ್ಭದಲ್ಲಿ ಎಐ ಮೇಲಿನ ಹೂಡಿಕೆಯು ಗ್ರಾಹಕರಿಗೆ ಅದರಲ್ಲೂ ಮುಖ್ಯವಾಗಿ ಕಾಲ್‌ ಸೆಂಟರ್‌ ಮೂಲಕ ತಕ್ಷಣ ಸಹಾಯಹಸ್ತ ಚಾಚಲು ಹೆಚ್ಚಿನ ಅನುಕೂಲ ಒದಗಿಸಿದೆ ಎಂದು ಬ್ಯಾಂಕ್‌ ಹೇಳಿಕೊಂಡಿತ್ತು.

34
ಗ್ರಾಹಕರ ಕರೆ

ಆದರೆ ನಂತರದ ದಿನಗಳಲ್ಲಿ ಗ್ರಾಹಕರ ಕರೆಯನ್ನು ಎಐ ಟೂಲ್ಸ್‌ಗಳು ಸರಿಯಾಗಿ ನಿರ್ವಹಿಸದ ಕಾರಣ ಬ್ಯಾಂಕ್‌ ಸಮಸ್ಯೆ ಎದುರಿಸುತ್ತಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ ವಜಾ ಮಾಡಿದ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಬ್ಯಾಂಕ್‌ ಮುಂದಾಗಿದೆ.

44
ಗುಣಮಟ್ಟ ಸುಧಾರಣೆ

ಕೆಲ ದಿನಗಳ ಹಿಂದೆ ಅಮೆರಿಕದ ಫೋರ್ಡ್‌ ಮೋಟಾರ್‌ ಕಂಪನಿಯು, ಗುಣಮಟ್ಟ ಪರಿಶೀಲಿಸುವ ನೂರಾರು ಅನುಭವಿ ಎಂಜಿನಿಯರ್‌ಗಳನ್ನು ವಜಾ ಮಾಡಿ ಅವರ ಜಾಗಕ್ಕೆ ಎಐ ಟೂಲ್‌ಗಳನ್ನು ಅಳವಡಿಸಿಕೊಂಡಿತ್ತು. ಆ ಬಳಿಕ ಗುಣಮಟ್ಟದ ಕುರಿತು ವ್ಯಾಪಕ ಆರೋಪಗಳು ಕೇಳಿಬಂದಾಗ ಇದೀಗ ಮತ್ತೆ ನೂರಾರು ಎಂಜಿನಿಯರ್‌ಗಳನ್ನು ಮರು ನೇಮಕ ಮಾಡಿಕೊಳ್ಳಲು ಆರಂಭಿಸಿದೆ. ಇದೀಗ ಕಂಪನಿಯ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಾಗಿದೆ ಎನ್ನಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories