ಭೂಕಂಪದ ವೇಳೆ ಇಡೀ ಕಟ್ಟಡ ಕುಸಿದಿತ್ತು. ನೆಲ ಮಹಡಿಯ ಪಾರ್ಕಿಂಗ್ ಲಾಟ್‌ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಅವಶೇಷಗಳಡಿ ಸಿಲುಕಿದ್ದರು. ಬರೋಬ್ಬರಿ 29 ಅಡಿ ಅವಶೇಷಗಳಡಿ ಸಿಲುಕಿದ ಸೆಕ್ಯೂರಿಟಿ 8 ದಿನಗಳ ಬಳಿಕ ಜೀವಂತವಾಗಿ ಹೊರಂಬದ ಘಟನೆ ನಡೆದಿದೆ.
ವೆನಿಜುವೆಲಾ ಭೂಕಂಪದಲ್ಲಿ ಹಲವು ಕಟ್ಟಡಗಳ ಕುಸಿದಿದೆ. ಈಗಲೂ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಆದರೆ ರಕ್ಷಣಾ ತಂಡಕ್ಕೆ ಕಳೆದ 8 ದಿನಗಳಿಂದ ಧೂಳನ್ನೇ ಸೇವಿಸಿದ, ಆಹಾರ, ನೀರು ಇಲ್ಲದೆ ಉಸಿರಾಡಲು ಆಗದೇ ಮೃತಪಟ್ಟವರ ಮೃತದೇಹಗಳೇ ಸಿಗುತ್ತಿದೆ. ಇದರ ನಡುವೆ ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಅವಶೇಷಗಳಡಿ ಸಿಲುಕಿದ್ದ. ಇದೀಗ 8 ದಿನಗಳ ಬಳಿಕ ಜೀವಂತವಾಗಿ ಹೊರಬಂದ ಘಟನೆ ನಡೆದಿದೆ.
26
8 ದಿನಗಳಿಂದ ಅವಶೇಷಗಳಡಿಯಲ್ಲಿ ಸಿಲುಕಿದ ಸೆಕ್ಯೂರಿಟಿ
ಗೆಲಾರಿಯಾ ಪ್ಲೆಯಾ ಗ್ರ್ಯಾಂಡೇ ಶಾಪಿಂಗ್ ಮಾಲ್ ವೆನಿಜುವೆಲಾ ಭೂಕಂಪದಲ್ಲಿ ಕುಸಿದು ಬಿದ್ದಿತ್ತು. ಈ ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ 40ರ ಹರೆಯದ ಸೆಕ್ಯೂರಿಟಿ ಗಾರ್ಡ್ ಭೂಕಂಪದ ವೇಳೆ ಅವಶೇಷಗಳಡಿ ಸಿಲುಕಿದ್ದರು. ವೆನಿಜುವೆಲಾದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಅನ್ನೋ ಆರೋಪದ ನಡುವೆ ಕಾರ್ಯಾಚರಣೆ ನಡೆದಿತ್ತು. 8 ದಿನಗಳ ಬಳಿಕ 29 ಅಡಿಯ ಅವಶೇಷಗಳಡಿಯಲ್ಲಿದ್ದ ಸೆಕ್ಯೂರಿಟಿ ಜೀವಂತವಾಗಿ ಬದುಕಿ ಬಂದಿದ್ದು ಇದೀಗ ಅಚ್ಚರಿಗೆ ಕಾರಣವಾಗಿದೆ.
36
100 ಗಂಟೆಗಳ ಕಾರ್ಯಾಚರಣೆ
ಸೆಕ್ಯೂರಿಟಿ ಗಾರ್ಡ್ ಹೆರ್ನಾನ್ ಆಲ್ಬ್ರೆಟ್ ಗಿಲ್ ಕೆಲಸ ಮಾಡುತ್ತಿದ್ದ ಶಾಪಿಂಗ್ ಮಾಲ್ ಕುಸಿದ ಬೆನ್ನಲ್ಲೇ ಗಿಲ್ ಪತ್ನಿ ಸ್ಥಳಕ್ಕೆ ದಾವಿಸಿದ್ದರು.ಆದರೆ ಕಾರ್ಯಾಚರಣೆಗಳು ವಿಳಂಹವಾಗಿದ್ದ ಕಾರಣ ತಕ್ಷಣಕ್ಕೆ ರಕ್ಷಣೆ ಸಾಧ್ಯವಾಗಲಿಲ್ಲ. ಪತ್ನಿಯ ಮನವಿ ಮೇರೆಗೆ ಕಾರ್ಯಾಚರಣೆ ಆರಂಭಗೊಂಡಿತ್ತು. ಬರೋಬ್ಬರಿ 100 ಗಂಟೆಗಳ ಕಾರ್ಯಾಚರಣೆ ಬಳಿಕ ಸೆಕ್ಯೂರಿಟಿ ಗಾರ್ಡ್‌ನನ್ನು ಜೀವಂತವಾಗಿ ಹೊರತೆಗೆಯಲಾಗಿದೆ.
ಅವಶೇಷಗಳಡಿ ಗಿಲ್ ಸಹಾಯಕ್ಕಾಗಿ ಕೂಗುತ್ತಿರುವ ಶಬ್ದ ಕೇಳಿಸುತ್ತಿದ್ದಂತೆ ಕಾರ್ಯಾಚರಣೆ ತೀವ್ರಗೊಳಸಲಾಗಿತ್ತು. ರಕ್ಷಣಾ ತಂಡಗಳು ಆಕ್ಸಿಜನ್, ನೀರು, ಸೇರಿದಂತೆ ಇತರ ಆಹಾರಗಳನ್ನು ಅವಶೇಷಗಳಡಿಗೆ ನೀಡಲಾಗಿತ್ತು. ಇತ್ತ ಅಷ್ಟೇ ಜಾಗರೂಕತೆಯಿಂದ ರಕ್ಷಣಾ ಕಾರ್ಯಾಚರಣೆಗಳು ನಡೆದಿತ್ತು.
56
2,500 ದಾಟಿದ ಸಾವಿನ ಸಂಖ್ಯೆ
ವೆನೆಜುವೆಲಾ ಭೂಕಂಪದಲ್ಲಿ ಸಾವಿನ ಸಂಖ್ಯೆ 2500 ದಾಟಿದೆ. 12,000 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ನಾಪತ್ತೆಯಾದವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿದೆ. ಬರೋಬ್ಬರಿ 189 ಗಗನಚುಂಬಿ ಕಟ್ಟಡಗಳು ಧರೆಗುರುಳಿಸಿದೆ. ಭೀಕರ ದುರಂತದಿಂದ ಹೊರಬರಲು ವೆನಿಜುವೆಲಗೆ ಕನಿಷ್ಠ 5 ರಿಂದ 10 ವರ್ಷಗಳೇ ಬೇಕು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
66
ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದ ವೆನಿಜುವೆಲಾ
ವೆನಿಜುವೆಲಾಯದಲ್ಲಿ ಪರಿಹಾರ, ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆಸ್ಪತ್ರೆಗಳಲ್ಲಿ ವಿಶೇಷ ಬೆಡ್ ವ್ಯವಸ್ಥೆ ಮಾಡಲಾಗಿದೆ. ಆದರೆ ರಕ್ಷಣಾ ಕಾರ್ಯಾಚರಣೆ ವಿಳಂಬದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಅನ್ನೋ ಆರೋಪಗಳೂ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ