ಮುತ್ತಿನಂತಹ ಹಲ್ಲು ಬೇಕೇ? ಮನೆಯಲ್ಲೇ ಇದೆ ಮದ್ದು, ನೀವೂ ಟ್ರೈ ಮಾಡಿ

Suvarna News   | Asianet News
Published : Oct 18, 2020, 05:19 PM ISTUpdated : Oct 18, 2020, 05:32 PM IST

ಪ್ರತಿಯೊಬ್ಬ ದಂತವೈದ್ಯರು ಪರೀಕ್ಷೆ ನಡೆಸುವ ಸಾಮಾನ್ಯ ಸಮಸ್ಯೆಗಳಲ್ಲಿ ಹಲ್ಲಿನ ಬಣ್ಣ ಮಾಸುವುದು ಒಂದಾಗಿದೆ. ನಾವೆಲ್ಲರೂ ಬಿಳಿ ಮುತ್ತಿನಂತಹ ಸ್ಮೈಲ್ ಹೊಂದಲು ಬಯಸಿದ್ದರೂ, ದುಬಾರಿ ಚಿಕಿತ್ಸೆಗಳಿಗೆ ಹೋಗುವುದು ಖಂಡಿತವಾಗಿಯೂ ನಮ್ಮ ಜೇಬಿನಲ್ಲಿ ತೂತು ಮಾಡುತ್ತದೆ.  ಹಾಗಾಗಿ ನಿಮಗಿಲ್ಲಿ ಕೆಲವು ಮನೆಮದ್ದುಗಳನ್ನು ತಿಳಿಸುತ್ತಿದ್ದೇವೆ, ಇವುಗಳನ್ನು ಟ್ರೈ ಮಾಡುವ ಮೂಲಕ ಸುಲಭವಾಗಿ ಹಲ್ಲುಗಳ ಬಣ್ಣ ಬಿಳಿಯಾಗಿಸಬಹುದು. 

PREV
110
ಮುತ್ತಿನಂತಹ ಹಲ್ಲು ಬೇಕೇ? ಮನೆಯಲ್ಲೇ ಇದೆ ಮದ್ದು, ನೀವೂ ಟ್ರೈ ಮಾಡಿ

ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣುಗಳನ್ನು ಆರೋಗ್ಯಕರ ಹಣ್ಣು ಎಂದು ಪರಿಗಣಿಸಲಾಗುತ್ತದೆ, ಅದು ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಬಾಳೆಹಣ್ಣಿನ ಸಿಪ್ಪೆಗಳು ಹಲ್ಲುಗಳನ್ನು ಬಿಳುಪುಗೊಳಿಸುವ ಉತ್ತಮ ಮೂಲವೆಂದು ನಿಮಗೆ ತಿಳಿದಿದೆಯೇ. ಮುಂದಿನ ಬಾರಿ ಆ ಬಾಳೆಹಣ್ಣಿನ ಸಿಪ್ಪೆಯನ್ನು  ಬಿಳಿ ಹಲ್ಲುಗಳನ್ನು ಪಡೆಯಲು ತೆಗೆದಿಡಿ. 

210

ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ಪ್ರತಿದಿನ ಒಂದೆರಡು ನಿಮಿಷ ಉಜ್ಜಿಕೊಳ್ಳಿ. ಬಾಳೆಹಣ್ಣಿನಲ್ಲಿರುವ ಖನಿಜಗಳಾದ ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ನಿಮ್ಮ ಹಲ್ಲುಗಳಲ್ಲಿ ಹೀರಲ್ಪಡುತ್ತವೆ, ಇದು ನಿಮ್ಮ ಹಲ್ಲುಗಳನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ. ಕಿತ್ತಳೆ ಸಿಪ್ಪೆಗಳನ್ನು ಕೂಡ ಹಲ್ಲುಗಳನ್ನು ಬಿಳುಪುಗೊಳಿಸುವ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ.
 
310

ಸ್ಟ್ರಾಬೆರಿ: ಆ ಸುಂದರ ಕೆಂಪು ಸ್ಟ್ರಾಬೆರಿಗಳು ಹಲ್ಲುಗಳನ್ನು ಬಿಳುಪುಗೊಳಿಸಲು ಬೆಸ್ಟ್ ಎಂದು ನಿಮಗೆ ತಿಳಿದಿದೆಯೇ?. ನೀವು ಮಾಡಬೇಕಾಗಿರುವುದು ಒಂದು ಅಥವಾ ಎರಡು ಸ್ಟ್ರಾಬೆರಿಗಳನ್ನು ತೆಗೆದುಕೊಂಡು, ಅವುಗಳನ್ನು ನುಣ್ಣಗೆ ರುಬ್ಬಿ,  2 ರಿಂದ 3 ನಿಮಿಷಗಳ ಕಾಲ ನಿಮ್ಮ ಹಲ್ಲುಗಳ ಮೇಲೆ ಹಚ್ಚಿ. ಈ ವಿಧಾನದ ನಂತರ ಹಲ್ಲನ್ನು ಸರಿಯಾಗಿ ತೊಳೆಯಿರಿ ಅಥವಾ ನೀವು ಹಲ್ಲುಜ್ಜಬಹುದು. 

410

ಸ್ಟ್ರಾಬೆರಿಗಳು ಮಾಲಿಕ್ ಆಸಿಡ್ ಎಂದು ಕರೆಯಲ್ಪಡುವ ನೈಸರ್ಗಿಕ ಎನ್ಜೈಮ್ಗಳ ಸಮೃದ್ಧ ಮೂಲವಾಗಿದ್ದು, ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ, ಹಾಗೂ ಸ್ಟ್ರಾಬೆರಿಗಳಲ್ಲಿ ಕಂಡುಬರುವ ಫೈಬರ್ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಬ್ಯಾಕ್ಟೀರಿಯಾವನ್ನು ವಿಶೇಷವಾಗಿ ಬಾಯಿ ಮತ್ತು ಹಲ್ಲುಗಳಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ.

510

ಕ್ಯಾರೆಟ್ : ಮುಂದಿನ ಬಾರಿ ನೀವು ಆ ಕ್ಯಾರೆಟ್ಗಳನ್ನು ನೋಡಿದಾಗ, ಅವುಗಳನ್ನು ಚೆನ್ನಾಗಿ ತೊಳೆದು ಹಸಿಯಾಗಿ ತಿನ್ನಿರಿ. ಹಸಿ  ಕ್ಯಾರೆಟ್ಗಳು ನಿಮ್ಮ ಹಲ್ಲುಗಳಿಂದ ಪ್ಲೇಕ್ ಅನ್ನು ಕಿತ್ತುಹಾಕುವಲ್ಲಿ ಬಹಳ ಪ್ರಯೋಜನಕಾರಿ ಮತ್ತು ಇದನ್ನು ನ್ಯಾಚುರಲ್ ಕ್ಲೀನರ್ ಎಂದೂ ಕರೆಯುತ್ತಾರೆ. ಕಚ್ಚಾ ಕ್ಯಾರೆಟ್ ತುಂಡುಗಳನ್ನು ನಿಮ್ಮ ಹಲ್ಲುಗಳ ಮೇಲೆ ಉಜ್ಜುವುದರಿಂದ ಹಲ್ಲುಗಳು ಬೆಳ್ಳಗಾಗುತ್ತವೆ. 

610

ಇದು ನಿಮಗೆ ಆರೋಗ್ಯಕರ ವಸಡುಗಳು ಮತ್ತು ಬಿಳಿ ಹಲ್ಲುಗಳನ್ನು ನೀಡುವುದರೊಂದಿಗೆ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ. ಇದು ಒಸಡು ಕಾಯಿಲೆ ಮತ್ತು ಜಿಂಗೈವಿಟಿಸ್ ಅನ್ನು ತಡೆಯುತ್ತದೆ ಮತ್ತು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. 

710

ಧೂಮಪಾನವನ್ನು ತ್ಯಜಿಸಿ: ಧೂಮಪಾನ, ನಿಮ್ಮ ಹಲ್ಲುಗಳನ್ನು ಹಳದಿ ಮಾಡುವುದರ ಜೊತೆಗೆ ಇತರ ಮಾರಕ ಕಾಯಿಲೆಗಳನ್ನು ನಿಮಗೆ ನೀಡುತ್ತದೆ. ಆದ್ದರಿಂದ ನೀವು ಹಲ್ಲಿನ ಮುತ್ತು ಬಿಳಿ ಹೊಳಪನ್ನು ಮರಳಿ ತರಲು ಬಯಸಿದರೆ, ಧೂಮಪಾನವನ್ನು ತ್ಯಜಿಸಿ.

810

ಸ್ಟ್ರಾ ಬಳಸಿ: ತುಂಬಾ ಬಿಸಿಯಾಗಿ ಅಥವಾ ತಣ್ಣಗಿರುವ ಯಾವುದನ್ನಾದರೂ ಸಿಪ್ ಮಾಡುವುದು ನಿಮ್ಮ ಹಲ್ಲುಗಳಿಗೆ ಒಳ್ಳೆಯದಲ್ಲ. ಆದ್ದರಿಂದ ಚಹಾ ಅಥವಾ ಕೋಲ್ಡ್  ಕಾಫಿಯನ್ನು ಸ್ಟ್ರಾ  ಮೂಲಕ ಸಿಪ್ ಮಾಡಲು ಪ್ರಯತ್ನಿಸಿ ಇದು ನಿಮ್ಮ ಹಲ್ಲು ಮತ್ತು ಬಿಸಿ ಪಾನೀಯಗಳ ನೇರ ಸಂಪರ್ಕವನ್ನು ಕಡಿತಗೊಳಿಸುವುತ್ತದೆ.

910

ಇತರ ಹಣ್ಣುಗಳು : ಸೇಬು ಮತ್ತು ಸೆಲರಿಗಳು, ಜೊತೆಗೆ ಕಿತ್ತಳೆ ಹಣ್ಣಿನ ಸಿಪ್ಪೆಗಳು ಸಹ ಹಲ್ಲಿನ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲ್ಲು ಬಣ್ಣ ಗೆಟ್ಟಿದ್ದು, ದಂತ ವೈದ್ಯರ ಬಳಿ ಹೋಗುವ ಮುನ್ನ ಇವುಗಳನ್ನು ಒಂದು ಬಾರಿ ಟ್ರೈ ಮಾಡಿ, ಸುಲಭವಾಗಿ ಹಲ್ಲುಗಳ ಹೊಳಪನ್ನು ಹೆಚ್ಚಿಸಿ.. 

1010

ಇವುಗಳಲ್ಲಿ ಒಂದನ್ನು ಮಿಸ್ ಮಾಡದೆ ಟ್ರೈ ಮಾಡಿ.... ಮತ್ತೆ ಎಂದಿಗೂ ನಗೋದನ್ನು ಮರೆಯೋದೆ ಇಲ್ಲ ನೀವು... 

click me!

Recommended Stories