ಗರ್ಭಿಣಿ ಮಹಿಳೆಯರಿಗೆ ಚಿತ್ರ, ವಿಚಿತ್ರ ಬಯಕೆಗಳು ಯಾಕಾಗುತ್ತವೆ?

Suvarna News   | Asianet News
Published : Jun 11, 2021, 12:30 PM IST

ಗರ್ಭಿಣಿ ಮಹಿಳೆಯರಿಗೆ ಹಲವು ಬಯಕೆಗಳು ಮೂಡುವುದು ಸಾಮಾನ್ಯ. ತಾವು ದಿನ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರಗಳು ಬೇಡವೆನಿಸುತ್ತವೆ. ಯಾವುದೋ ವಿಚಿತ್ರ ವಸ್ತುಗಳು ಇಷ್ಟವಾಗತೊಡಗುತ್ತವೆ. ಹುಣಸೆ ಹುಳಿ ಜೊತೆ ಉಪ್ಪು ಸೇರಿಸಿ ತಿನ್ನುವ ಬಯಕೆ, ಹೊರಗೆಲ್ಲೊ ಹೋಗಿ ಮಣ್ಣು ತಿನ್ನುವಾಸೆ. ಇದು ಒಬ್ಬರಿಗೆ ಮಾತ್ರವಲ್ಲ ಹೆಚ್ಚಿನ ಗರ್ಭಿಣಿ ಮಹಿಳೆಯರಲ್ಲಿ ಈ ಹೊಸ ಬೆಳವಣಿಗೆ ಕಂಡು ಬರುತ್ತದೆ.   

PREV
110
ಗರ್ಭಿಣಿ ಮಹಿಳೆಯರಿಗೆ ಚಿತ್ರ, ವಿಚಿತ್ರ ಬಯಕೆಗಳು ಯಾಕಾಗುತ್ತವೆ?

ಹಾರ್ಮೋನುಗಳು, ವಾಸನೆ ಮತ್ತು ರುಚಿಯ ಉನ್ನತ ಪ್ರಜ್ಞೆ ಮತ್ತು ಪೌಷ್ಠಿಕಾಂಶದ ಕೊರತೆಗಳು ಸೇರಿದಂತೆ ಹಲವಾರು ವಿಷಯಗಳಿಂದ ಗರ್ಭಧಾರಣೆಯ ಬಯಕೆಗಳು ಉಂಟಾಗಬಹುದು. ಕಡು ಬಯಕೆಗಳು ಸಾಮಾನ್ಯವಾಗಿ ಮೊದಲ ತ್ರೈಮಾಸಿಕದಲ್ಲಿ ಪ್ರಾರಂಭವಾಗುತ್ತವೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ಗರಿಷ್ಠವಾಗುತ್ತವೆ, ಆದರೆ ಗರ್ಭಾವಸ್ಥೆಯಲ್ಲಿ ಯಾವಾಗ ಬೇಕಾದರೂ ಸಂಭವಿಸಬಹುದು. 
 
210

ಗರ್ಭಿಣಿಯ ಆಸೆಗಳನ್ನು ತೀರಿಸಲೆಂದೇ ಆಕೆಗೆ ಬೇರೆ ಬೇರೆ ವಿಧವಾದ ಸಿಹಿ, ಖಾರ ತಿನಿಸುಗಳನ್ನು ಮಾಡಿ ಸೀಮಂತ ಕಾರ್ಯಕ್ರಮದ ಮೂಲಕ ಆಕೆಗೆ ನೀಡುತ್ತಾರೆ. ಅಷ್ಟಕ್ಕೂ ಗರ್ಭಿಣಿಯರಿಗೆ ಈ ರೀತಿ ಕ್ರೆವಿಂಗ್ ಆಗುವುದು ಯಾಕೆ ಅನ್ನೋದು ನಿಮಗೆ ಗೊತ್ತಾ? 

310

ಉಪ್ಪಿನಕಾಯಿ:  ನಿಸ್ಸಂದೇಹವಾಗಿ ಗರ್ಭಿಣಿ ಮಹಿಳೆಯರಿಗೆ ಸಾಮಾನ್ಯ ಆಹಾರ ಬಯಕೆಗಳಲ್ಲಿ ಒಂದಾಗಿದೆ. ಗರ್ಭಿಣಿ ಮಹಿಳೆಯರಿಗೆ ಈ ಬಯಕೆ ಉಂಟಾಗಲು ಪ್ರಮುಖ ಕಾರಣ ನೀವು ಕಡಿಮೆ ಸೋಡಿಯಂ ಮಟ್ಟ ಹೊಂದಿರುವುದರಿಂದ ಇರಬಹುದು. ಕಾರಣಏನೇ ಇರಲಿ, ತಿನ್ನಲು ಹಿಂಜರಿಯಬೇಡಿ. ಉಪ್ಪಿನಕಾಯಿಯಲ್ಲಿ ಕಡಿಮೆ ಕ್ಯಾಲೊರಿಗಳಿವೆ ಮತ್ತು ಕೈಗೆಡಕುವ ಅಗ್ಗದ ತಿಂಡಿ.

410

ಮಣ್ಣು ತಿನ್ನುವ ಬಯಕೆ : ಶರೀರದಲ್ಲಿ ಖನಿಜಾಂಶದ ಕೊರತೆ ಉಂಟಾದಾಗ ಮಣ್ಣು ತಿನ್ನುವ ಬಯಕೆ ಉಂಟಾಗುತ್ತದೆ. ಆದರೆ ಖನಿಜಾಂಶವುಳ್ಳ ಆಹಾರ ಸೇವಿಸಿದಾಗ ಈ ರೀತಿ ಬಯಕೆ ಆಗುವುದಿಲ್ಲ.

510

ರೆಡ್ ಮೀಟ್ ತಿನ್ನುವ ಬಯಕೆ : ಅಂದರೆ ಪ್ರೊಟೀನ್ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ಅರ್ಥ. ಹಾಗಂತ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.

610

ಚಾಕಲೇಟ್ ತಿನ್ನುವ ಬಯಕೆ : ಮೆಗ್ನೇಷಿಯಂ ಅಂಶ ದೇಹದಲ್ಲಿ ಕಡಿಮೆಯಾದರೆ ಚಾಕಲೇಟ್ ತಿನ್ನಬೇಕೆಂಬ ಅಸೆ ಹೆಚ್ಚುತ್ತದೆ. 

710

ಹುಳಿ, ಮಾವಿನ ಕಾಯಿ ತಿನ್ನುವ ಬಯಕೆ : ವಿಟಮಿನ್ ಸಿ ಕೊರತೆ ಉಂಟಾದರೆ ಅದರಿಂದ ಹುಣಸೆ ಹುಳಿ, ಮಾವಿನ ಕಾಯಿ, ತಿನ್ನುವ ಅಸೆ ಉಂಟಾಗುತ್ತದೆ. 
 
810

ಉಪ್ಪಾಗಿರುವ ಆಹಾರ : ಆಹಾರದಲ್ಲಿ ಸೋಡಿಯಂ ಕೊರತೆ ಕಂಡು ಬಂದರೆ ಉಪ್ಪಿರುವ ಆಹಾರಗಳು ಅಥವಾ ಮಸಾಲೆ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುವ ಅಸೆ ಉಂಟಾಗುತ್ತದೆ. ಇದಲ್ಲದೆ ಗರ್ಭವಾಸ್ಥೆಯಲ್ಲಿ ರಕ್ತ ಹೆಚ್ಚುತ್ತದೆ. ಇದರಿಂದಲೂ ಉಪ್ಪಿನಂಶ ಹೆಚ್ಚು ತಿನ್ನುವ ಬಯಕೆ ಉಂಟಾಗುತ್ತದೆ.  

910

ಹೆಚ್ಚು ಹೆಚ್ಚು ಸಿಹಿ ತಿನ್ನುವ ಬಯಕೆ : ಚಾಕಲೇಟ್, ಐಸ್ ಕ್ರೀಮ್, ಡೋನಟ್ಸ್ ತಿನ್ನವುದು ಗರ್ಭಿಣಿ ಮಹಿಳೆಯರಿಗೆ ಇಷ್ಟ. ಸಾಮಾನ್ಯವಾಗಿ ಬ್ಲಡ್ ಪ್ರೆಶರ್ ಲೆವಲ್ ನಿಯಮಿತವಾಗಿರಲು ಸಿಹಿ ತಿನ್ನುವ ಬಯಕೆ ಉಂಟಾಗುತ್ತದೆ. 

1010

ಅಪಾಯಕಾರಿ : ಕೆಲವೊಮ್ಮೆ ಗರ್ಭಿಣಿ ಜನರು ಕೊಳಕು, ಲಾಂಡ್ರಿ ಡಿಟರ್ಜೆಂಟ್, ಐಸ್, ಕಾರ್ನ್ ಪಿಷ್ಟ, ಜೇಡಿಮಣ್ಣು, ಬೂದಿ ಅಥವಾ ಪೇಂಟ್ ಚಿಪ್ಸ್ ನಂತಹ ಆಹಾರೇತರ ವಸ್ತುಗಳನ್ನು ಹಂಬಲಿಸುತ್ತಾರೆ. ನೀವು ಈ ವಸ್ತುಗಳನ್ನು ಹಂಬಲಿಸಿದರೆ, ನೀವು ಪಿಕಾ ಎಂಬ ವೈದ್ಯಕೀಯ ಸ್ಥಿತಿಯನ್ನು ಅನುಭವಿಸುತ್ತಿರಬಹುದು. ಈ ವಸ್ತುಗಳು ನಿಮಗೆ ಸೇವಿಸಲು ಅಸುರಕ್ಷಿತಮಾತ್ರವಲ್ಲ, ಅವು ಪೌಷ್ಠಿಕಾಂಶದ ಕೊರತೆಯನ್ನು ಸೂಚಿಸಬಹುದು- ಸಾಮಾನ್ಯವಾಗಿ ಕಬ್ಬಿಣದ ಕೊರತೆ (ರಕ್ತಹೀನತೆ). ಆದುದರಿಂದ ಈ ಸಮಯದಲ್ಲಿ ವೈದ್ಯರನ್ನು ಕಂಡರೆ ಉತ್ತಮ. 

click me!

Recommended Stories