ಒಟಿಪಿ ಸೋರಿಕೆಯಿಂದ ಆಗುವ ವಂಚನೆಗೆ ಬ್ರೇಕ್, ಹೊಸ ಎಐ ಚಾಲಿತ ಏರ್‌ಟೆಲ್ ಫ್ರಾಡ್ ಅಲರ್ಟ್

Published : Feb 13, 2026, 08:02 PM IST

ಒಟಿಪಿ ಸೋರಿಕೆಯಿಂದ ಆಗುವ ವಂಚನೆಗೆ ಬ್ರೇಕ್, ಹಲವು ಗ್ರಾಹಕರು ಒಟಿಪಿ ಅಚಾನಕ್ಕಾಗಿ ವಂಚಕರ ಕೈಸೇರಿ ಭಾರಿ ಮೋಸ ಹೋಗುವ ಪ್ರಕರಣಕ್ಕೆ ಬ್ರೇಕ್ ಹಾಕಲು ಏರ್‌ಟೆಲ್ ಹೊಸ ಎಐ ಚಾಲಿತ ಫ್ರಾಡ್ ಅಲರ್ಟ್ ಜಾರಿಗೆ ತಂದಿದೆ.

PREV
15
ಫ್ರಾಡ್ ಅಲರ್ಟ್

ಫೋನ್ ಮೂಲಕ ನಡೆಯುತ್ತಿರುವ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಸೈಬರ್ ಕೇಸ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಹಕರ ಬಳಿ ಒಟಿಪಿಯನ್ನ ಹಲುವ ವಿಧಗಳ ಮೂಲಕ ಕೇಳಿ ಪಡೆದು ವಂಚನೆ ಮಾಡುವ ಹಳೇ ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿದೆ. ಇದೀಗ ಈ ವಂಚನೆಗಳಿಗೆ ತಡೆ ನೀಡಲು ಏರ್‌ಟೆಲ್ ಫ್ರಾಡ್ ಅಲರ್ಟ್ ಜಾರಿಗೆ ತಂದಿದೆ.

25
ಒಟಿಪಿ ವಂಚನೆಗಳಿಗೆ ಬ್ರೇಕ್

ಏರ್‌‌ಟೆಲ್ ವಿನೂತನ 'ಫ್ರಾಡ್ ಅಲರ್ಟ್' ಸೇವೆಯನ್ನು ಅನಾವರಣಗೊಳಿಸಿದೆ. ಈ ವ್ಯವಸ್ಥೆಯು ಎಐ ಚಾಲಿತ ಅತ್ಯಾಧುನಿಕ ಸೌಲಭ್ಯವಾಗಿದ್ದು, ವೇಗವಾಗಿ ಹೆಚ್ಚಾಗುತ್ತಿರುವ ಒನ್-ಟೈಮ್-ಪಾಸ್‌ ವರ್ಡ್ (ಓಟಿಪಿ) ಸಂಬಂಧಿತ ಬ್ಯಾಂಕ್ ವಂಚನೆಗಳ ವಿರುದ್ಧ ಗ್ರಾಹಕರಿಗೆ ತಕ್ಷಣವೇ ರಕ್ಷಣೆಯನ್ನು ನೀಡುತ್ತದೆ. ವಿತರಣೆ ಅಥವಾ ಡೆಲಿವರಿ ಕೆಲಸಗಳ ನೆಪದಲ್ಲಿ ವಂಚಕರು ಓಟಿಪಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಗ್ರಾಹಕರನ್ನು ನಂಬಿಸಿ ಅವರಿಂದ ಬ್ಯಾಂಕಿಂಗ್ ವ್ಯವಹಾರದ ಓಟಿಪಿಗಳನ್ನು ಪಡೆದು, ಅವರ ಖಾತೆಯಲ್ಲಿ ಇರುವ ಉಳಿತಾಯದ ಹಣವನ್ನು ದೋಚುತ್ತಿದ್ದಾರೆ.

35
ಎಐ ನಿಂದ ವಂಚನೆಗಳಿಗೆ ತಡೆ

ಏರ್‌ ಟೆಲ್‌ ನ ಹೊಸ ಎಐ ಚಾಲಿತ ವ್ಯವಸ್ಥೆಯು ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಗುರುತಿಸಿ ಗ್ರಾಹಕರನ್ನು ಎಚ್ಚರಿಸುತ್ತದೆ. ಅಪಾಯಕಾರಿ ಎನಿಸುವ ಕರೆ ಬಂದಾಗ ಬ್ಯಾಂಕ್ ಓಟಿಪಿ ಪತ್ತೆಯಾದಲ್ಲಿ, ಏರ್‌ಟೆಲ್ ತಕ್ಷಣವೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ. ಕರೆಯಲ್ಲಿರುವಾಗಲೇ ಬ್ಯಾಂಕಿಂಗ್ ವ್ಯವಹಾರದ ಓಟಿಪಿ ನೀಡುವ ಅಪಾಯದ ಬಗ್ಗೆ ಇದು ತಿಳಿಸುತ್ತದೆ. ಎಐ ಬುದ್ಧಿವಂತಿಕೆ ಮತ್ತು ಮನುಷ್ಯನ ವಿವೇಚನಾ ಶಕ್ತಿಯ ಈ ಅದ್ಭುತ ಸಂಯೋಜನೆಯು ಗ್ರಾಹಕರಿಗೆ ಯೋಚಿಸಲು ಮತ್ತು ಪರಿಶೀಲಿಸಲು ಸಮಯವನ್ನು ನೀಡುತ್ತದೆ, ಇದರಿಂದ ಅವರು ತಮ್ಮ ಸುರಕ್ಷತೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.

45
ಕಾಲ್ ವಾರ್ನಿಂಗ್

ಕಳೆದ ಎರಡು ವರ್ಷಗಳಲ್ಲಿ, ಏರ್‌ ಟೆಲ್ ಸ್ಪ್ಯಾಮ್ ಕರೆಗಳ ಎಚ್ಚರಿಕೆ (ಸ್ಪ್ಯಾಮ್ ಕಾಲ್ ವಾರ್ನಿಂಗ್) ಮತ್ತು ಹಾನಿಕಾರಕ ಲಿಂಕ್‌ ಗಳನ್ನು ನಿರ್ಬಂಧಿಸುವಂತಹ ಎಐ ತಂತ್ರಜ್ಞಾನಗಳನ್ನು ಜಾರಿಗೆ ತಂದಿದೆ. ನೆಟ್‌ ವರ್ಕ್‌ ನಲ್ಲಿ ವಂಚನೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ವಂಚಕರು ವ್ಯಕ್ತಿಗಳ ಸೋಗು ಹಾಕುವ ಮೂಲಕ ಜನರ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಲೇ ಇದ್ದಾರೆ. ಮೊಬೈಲ್ ಬಳಕೆದಾರರನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಈ ಹೊಸ ವೈಶಿಷ್ಟ್ಯವು ಡಿಜಿಟಲ್ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಈ ಸೌಲಭ್ಯವು ಈಗಾಗಲೇ ಹರಿಯಾಣದಲ್ಲಿ ಚಾಲ್ತಿಯಲ್ಲಿದ್ದು, ಮುಂದಿನ ಎರಡು ವಾರಗಳಲ್ಲಿ ಏರ್‌ ಟೆಲ್ ಇದನ್ನು ತನ್ನ 100% ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಿದೆ.

55
ಗ್ರಾಹಕರಿಗೆ ರಕ್ಷಣೆ

ನಾವು ಏರ್‌ ಟೆಲ್ ಅನ್ನು ಸುರಕ್ಷಿತ ನೆಟ್‌ವರ್ಕ್ ಮಾಡುವ ಗುರಿಯನ್ನು ಹೊಂದಿದ್ದೇವೆ ಏರ್‌ಟೆಲ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಶಾಶ್ವತ್ ಶರ್ಮಾ ಹೇಳಿದ್ದಾರೆ. ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತಗೊಳಿಸುವಲ್ಲಿ ಓಟಿಪಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಅಪರಾಧ ಚಟುವಟಿಕೆಗಳಿಂದಾಗಿ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ, ಬ್ಯಾಂಕಿಂಗ್ ವಂಚನೆಗಳ ವಿರುದ್ಧ ರಕ್ಷಣೆಯನ್ನು ಹೆಚ್ಚಿಸಲು ಏರ್‌ ಟೆಲ್‌ ನೆಟ್‌ ವರ್ಕ್ ನಲ್ಲಿ ಮಹತ್ವದ ಸುಧಾರಣೆಯನ್ನು ಪರಿಚಯಿಸಲು ನಾವು ಸಂತೋಷ ಪಡುತ್ತೇವೆ ಎಂದಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories