ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್, ವಾಯ್ಸ್, ವಿಡಿಯೋ ಕಾಲ್ ಫೀಚರ್ ಆರಂಭ

Published : Feb 10, 2026, 04:44 PM IST

ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್, ವಾಯ್ಸ್, ವಿಡಿಯೋ ಕಾಲ್ ಫೀಚರ್ ಆರಂಭ, ಇಷ್ಟು ದಿನ ಈ ಫೀಚರ್ ಮೊಬೈಲ್ ಆ್ಯಪ್ ಬಳಕೆ ಮಾಡುವವರಿಗೆ ಮಾತ್ರ ಲಭ್ಯವಿತ್ತು. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೂ ಲಭ್ಯವಿದೆ. 

PREV
15
ವ್ಯಾಟ್ಸಾಪ್ ಹೊಸ ಫೀಚರ್

ವ್ಯಾಟ್ಸಾಪ್ ಹಲವು ಫೀಚರ್ ಪರಿಚಯಿಸಿದೆ. ಪ್ರಮುಖವಾಗಿ ಬಳಕೆದಾರರ ಬೇಡಿಕೆ, ಅನುಕೂಲ, ಸುರಕ್ಷತೆಗೆ ತಕ್ಕಂತೆ ಈಗಾಗಲೇ ಹಲವು ಫೀಚರ್ ಪರಿಚಯಿಸಲಾಗಿದೆ. ಇದೀಗ ವ್ಯಾಟ್ಸಾಪ್ ವೆಬ್ ಬಳಕೆಮಾಡುವ ಗ್ರಾಹಕರಿಗೆ ವಾಯ್ಸ್ ಹಾಗೂ ವಿಡಿಯೋ ಕಾಲ್ ಫೀಚರ್ ಆರಂಭಿಸಿದೆ. ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್ ಮೂಲಕ ವ್ಯಾಟ್ಸಾಪ್ ಬಳಕೆ ಮಾಡುವ ಗ್ರಾಹಕರೂ ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ ಮಾಡಲು ಸಾಧ್ಯವಿದೆ.

25
ವಾಯ್ಸ್ ಕಾಲ್ , ವಿಡಿಯೋ ಕಾಲ್

ಕಳೆದ ಒಂದು ವರ್ಷದಿಂದ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ ಫೀಚರ್ ನೀಡಲು ಡೆವಲಪ್ಪಿಂಗ್ ಕೆಲಸಗಳು ನಡೆಯುತ್ತಿತ್ತು. ಸದ್ಯ ಬಿಟಾ ವರ್ಶನ್‌ನಲ್ಲಿ ಈ ಫೀಚರ್ ಲಭ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.ಈ ಫೀಚರ್ ವಿಂಡೋಸ್ ಹಾಗೂ ಮ್ಯಾಕ್ ಡೆಸ್ಕ್‌ಟಾಪ್ ಆ್ಯಪ್ಸ್‌ನಲ್ಲಿ ಲಭ್ಯವಿದೆ.

35
ವೆಬ್ ಬಳಕೆದಾರರಿಗೆ ಸಂಪೂರ್ಣ ಫೀಚರ್

ಸದ್ಯ ವ್ಯಾಟ್ಸಾಪ್ ವೆಬ್ ಬಳಕೆದಾರರು ಮೆಸೇಜ್, ಫಾರ್ವರ್ಡ್ ಮೆಸೇಜ್, ಇಮೇಜ್, ವಿಡಿಯೋ ಫಾರ್ವರ್ಡ್ ಸೇರಿದಂತೆ ಕೆಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ವ್ಯಾಟ್ಸಾಪ್ ವೆಬ್ ಡೆಸ್ಕ್‌ಟಾಪ್ ಬಳೆಕೆದಾರರು ವ್ಯಾಟ್ಸಾಪ್ ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ ಸೇವೆಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ.

45
ಬಳಕೆ ಹೇಗೆ?

ವ್ಯಾಟ್ಸಾಪ್ ವೆಬ್ ಬಳಕೆದಾರರು ಬೆಟಾ ವರ್ಶನ್‌ ಮೂಲಕ ಸದ್ಯ ಪರಿಚಯಿಸಲಾಗಿರುವ ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ ಫೀಚರ್ ಸೇವೆ ಬಳಸಿಕೊಳ್ಳಬಹುದು. ಯಾರಿಗೆ ಕರೆ ಮಾಡಬೇಕು, ಅವರ ಚಾಟ್ ಬಾಕ್ಸ್ ಟ್ಯಾಪ್ ಮಾಡಿದರೆ ಸಾಕು, ಮೇಲ್ಬಾಗದಲ್ಲಿ ಎರಡು ಆಯ್ಕೆಗಳು ಕಾಣಲಿದೆ. ವಾಯ್ಸ್ ಕಾಲ್ ಹಾಗೂ ವಿಡಿಯೋ ಕಾಲ್ ಆಯ್ಕೆಗಳು ಇರಲಿದೆ. ಸದ್ಯ ಹಲವರಿಗೆ ವಿಡಿಯೋ ಕಾಲ್ ಆಯ್ಕೆ ಕಂಡರೂ ಕ್ಲಿಕ್ ಮಾಡಿದರೆ ವ್ಯಾಟ್ಸಾಪ್ ವಿಂಡೋಸ್ ಆ್ಯಪ್ ಡೌನ್ಲೋಡ್ ಮಾಡಲು ಸೂಚನೆ ನೀಡುತ್ತದೆ.

55
ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್

ವಾಯ್ಸ್ ಹಾಗೂ ವಿಡಿಯೋ ಕಾಲ್ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಮೂಲಕ ಮಾಡಲಾಗುತ್ತದೆ. ಸದ್ಯ ಐಒಎಸ್‌ನಲ್ಲಿ ಇದೇ ಪ್ರಕ್ರಿಯೆ ಮೂಲಕ ಕಾಲ್ ಮಾಡಲಾಗುತ್ತದೆ. ಈಗಾಗಲೇ ವಿಂಡೋಸ್ ಆ್ಯಪ್ ಮೂಲಕ ಈ ಫೀಚರ್ ಬಳಕೆ ಮಾಡಬಹುದು. ಆದರೆ ಬ್ರೌಸರ್ ಮೂಲಕ ವ್ಯಾಟ್ಸಾಪ್ ವೆಬ್ ಬಳಕೆ ಮಾಡುವ ಗ್ರಾಹಕರಿಗೆ ಲಭ್ಯವಾಗಲಿದೆ.

ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories