Published : Jun 17, 2025, 12:45 PM ISTUpdated : Jun 17, 2025, 01:15 PM IST
ವಿಜಯನಗರ ಜಿಲ್ಲೆಯ ಕಾನಾಹೊಸಳ್ಳಿ ಬಳಿ ಬೃಹತ್ ಕಾಮನಬಿಲ್ಲು ರೂಪುಗೊಂಡು, ನೋಡುಗರ ಮನಸೂರೆಗೊಂಡಿತು. ಮಳೆ ಬಳಿಕ ಗಗನದಲ್ಲಿ ಮೂಡಿದ ಈ ಅದ್ಭುತ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.
ವಿಜಯನಗರ (ಜೂ. 17): ವಿಜಯನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಆರ್ಭಟ ಜೋರಾಗಿರುವ ಬೆನ್ನಲ್ಲೇ, ಪ್ರಕೃತಿಯ ಮತ್ತೊಂದು ಅದ್ಭುತ ಸೌಂದರ್ಯ ಕಣ್ಮನ ಸೆಳೆದಿದೆ.
24
ರಾಷ್ಟ್ರೀಯ ಹೆದ್ದಾರಿ 50ರ ಸಮೀಪ, ಕಾನಾಹೊಸಳ್ಳಿ ಹೊರವಲಯದ ಆನಂದ್ ವಿಹಾರ ಹೊಟೇಲ್ ಬಳಿಯ ಗಗನದಲ್ಲಿ ಬೃಹತ್ ಕಾಮನಬಿಲ್ಲು ರೂಪುಗೊಂಡಿದ್ದು, ದಾರಿ ಹಾದು ಹೋಗುತ್ತಿದ್ದ ವಾಹನಚಾಲಕರು ಹಾಗೂ ಸಾರ್ವಜನಿಕರಲ್ಲಿ ಉಲ್ಲಾಸ ಮೂಡಿಸಿದೆ.
34
ಮಳೆಯ ನಂತರದ ಶೀತವಾತಾವರಣದಲ್ಲಿ ಕಾಣಿಸಿಕೊಂಡ ಈ ಸುಂದರ ಕಾಮನಬಿಲ್ಲು ಅನೇಕರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಯುವಕರು, ಕುಟುಂಬಸ್ಥರು, ಪ್ರವಾಸಿಗರು ಎಲ್ಲರೂ ಈ ಅಪರೂಪದ ನೈಸರ್ಗಿಕ ದೃಶ್ಯವನ್ನೆಲ್ಲಾ ಸೆರೆ ಹಿಡಿದು ಸ್ಮರಣೀಯ ಕ್ಷಣವನ್ನಾಗಿ ಮಾಡಿಕೊಂಡಿದ್ದಾರೆ.
ಇನ್ನು ರಸ್ತೆಗಳಲ್ಲಿ ಹೋಗುತ್ತಿದ್ದ ವಾಹನ ತಡೆದು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 'ಇಷ್ಟು ದೊಡ್ಡ ಹಾಗೂ ಸ್ಪಷ್ಟವಾದ ಕಾಮನಬಿಲ್ಲನ್ನು ಕಾಣುವುದು ಅಪರೂಪ. ಪ್ರಕೃತಿಯ ಈ ಸೌಂದರ್ಯ ಕಣ್ಣಿಗೆ ಹಬ್ಬವಾಗಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.