ಪ್ರತಿ ತಿಂಗಳು, ಯಾವುದೋ ಒಂದು ದಿನಾಂಕ ವಿಶೇಷವಾಗಿರುತ್ತದೆ. ಆದರೆ, 13 ನೇ ತಾರೀಖಿನ ವಿಷಯಕ್ಕೆ ಬಂದಾಗ, ಜನರು ಈ ದಿನದ ಬಗ್ಗೆ ಯೋಚಿಸುತ್ತಾ ಭಯಪಡುತ್ತಾರೆ. ಅದರಲ್ಲೂ 13ನೇ ತಾರೀಖು, ಶುಕ್ರವಾರವಾಗಿದ್ದರೆ, ಜನರು ಮತ್ತಷ್ಟು ಜಾಗರೂಕರಾಗುತ್ತಾರೆ. ಜನರು ಈ ದಿನ ಮತ್ತು ಈ ದಿನಾಂಕವನ್ನು ದುರದೃಷ್ಟಕರವೆಂದು (unlucky day) ಪರಿಗಣಿಸುತ್ತಾರೆ. ದೊಡ್ಡ ಕಟ್ಟಡಗಳಲ್ಲಿಯೂ ಸಹ, 13 ನೇ ಮಹಡಿ ಇರೋದಿಲ್ಲ, ಅಥವಾ ಕೆಲವು ದೇಶಗಳಲ್ಲಿ ಲಿಫ್ಟ್‌ನಲ್ಲಿ ಈ ಸಂಖ್ಯೆಯೇ ಇರೋದಿಲ್ಲ ಅನ್ನೋದನ್ನು ನೀವು ಗಮನಿಸಿರಬಹುದು.