2025 Cursed Year: 1941ರ ಅದೇ ಕ್ಯಾಲೆಂಡರ್ ವರ್ಷ 2025…. ಕರಾಳ ಇತಿಹಾಸ ಮತ್ತೆ ರಿಪೀಟ್ ಆಗುತ್ತಿದೆಯೇ?

Published : Jun 16, 2025, 02:19 PM ISTUpdated : Jun 16, 2025, 02:53 PM IST

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, 1941ರ ಅದೇ ಕ್ಯಾಲೆಂಡರ್ ವರ್ಷ ಇದೀಗ ಮತ್ತೆ ರಿಪೀಟ್ ಆಗಿದ್ದು, ಅದೇ ಕರಾಳ ಇತಿಹಾಸ ಮತ್ತೆ ಮರುಕಳಿಸಲಿದೆಯೇ? 

PREV
17

2025 ಆರಂಭವಾಗಿ ಇದೀಗ 6ನೇ ತಿಂಗಳು ನಡೆಯುತ್ತಿದೆ. ಈ ಆರು ತಿಂಗಳಲ್ಲಿ ದೊಡ್ಡ ದೊಡ್ಡ ಅನಾಹುತಗಳು ನಡೆದು ಹೋಗಿವೆ. ಈ ಎಲ್ಲಾ ಘಟನೆಗಳನ್ನು ನೋಡಿದ್ರೆ, ಎದೆ ಝಲ್ ಎನಿಸುತ್ತೆ. ಈ ಘಟನೆಗಳಿಗೂ 1941ರ ಇಸವಿಗೂ ಏನಾದರೂ ಸಂಬಂಧ ಇದೆಯೇ? ಕರಾಳ ಇತಿಹಾಸ ಮತ್ತೆ ರಿಪೀಟ್ (history repeats) ಆಗುತ್ತಿದೆಯೇ?

27

ಸೋಶಿಯಲ್ ಮೀಡಿಯಾದಲ್ಲಿ ಕುಲ್ ದೀಪ್ ಸಿಂಘಾನಿಯಾ ಎನ್ನುವ ಇನ್ ಫ್ಲ್ಯುಯೆನ್ಸರ್ ಒಬ್ಬರ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಪ್ರಕಾರ 1941ನೇ ವರ್ಷದ ಕ್ಯಾಲೆಂಡರ್ (calendar year) ಮತ್ತು ಈ ವರ್ಷದ ಕ್ಯಾಲೆಂಡರ್ ದಿನಗಳು ಒಂದೇ ರೀತಿಯಾಗಿವೆ. ಹಾಗಾಗಿ ಆ ವರ್ಷ ಆದಂತಹ ಟ್ರಾಜಿಡಿಗಳೆಲ್ಲಾ ಇದೀಗ ಮತ್ತೆ ರಿಪೀಟ್ ಆಗುತ್ತಿವೆ ಎನ್ನಲಾಗುತ್ತಿದೆ. ಹೌದೆ ಅನ್ನೋದನ್ನು ನೋಡೋಣ.

37

1941ನೇ ಇಸವಿಯಲ್ಲಿ ಪ್ರಪಂಚದಲ್ಲಿ ಹಲವಾರು ಅನಾಹುತಗಳು ನಡೆದಿದ್ದವು. ಈ ಅನಾಹುತಗಳಿಗೆ ಸಾವಿರಾರು ಜನರು ಬಲಿಯಾಗಿದ್ದರು. ಇದೀಗ ಮತ್ತೆ ಅದೇ ಇತಿಹಾಸ ಮರುಕಳಿಸುತ್ತಿದೆ ಎನ್ನಲಾಗುತ್ತಿದೆ. 1941ರಲ್ಲಿ 2ನೇ ವಿಶ್ವ ಯುದ್ಧ ಭೀಕರ ರೂಪಕ್ಕೆ ತಿರುಗಿ, ಹಲವು ಜನ ಸಾವನ್ನಪ್ಪಿದ್ದರೆ, ಈ ವರ್ಷ ಹಲವು ದುರ್ಘಟನೆಗಳಿಂದಾಗಿ ಜನ ಪ್ರಾಣ ಕಳೆದುಕೊಂಡಿದ್ದಾರೆ.

47

1941 ವಿಶ್ವ ಇತಿಹಾಸದಲ್ಲಿ ಎದ್ದು ಕಾಣಲು ಒಂದು ಕಾರಣವಿದೆ. ಯುರೋಪ್ ಈಗಾಗಲೇ ಎರಡನೇ ಮಹಾಯುದ್ಧದಲ್ಲಿ (World war) ಮುಳುಗಿದ ವರ್ಷ ಅದಾಗಿತ್ತು, ಮತ್ತು ಡಿಸೆಂಬರ್ 7 ರಂದು, ಜಪಾನಿನ ಮಿಲಿಟರಿ ಪರ್ಲ್ ಹಾರ್ಬರ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿತು. ಈ ಘಟನೆಯಲ್ಲಿ 2400 ಕ್ಕೂ ಹೆಚ್ಚು ಅಮೆರಿಕನ್ನರು ಸಾವನ್ನಪ್ಪಿದ್ದರು ಮತ್ತು ಅಮೆರಿಕವು ಯುದ್ಧಕ್ಕೆ ಪ್ರವೇಶಿಸಲು ಪ್ರೇರೇಪಿಸಿತು.

57

ಈ ವರ್ಷ ತುಂಬಾ ಸಾವು ನೋವುಗಳು ಸಂಭವಿಸಿದ್ದರು, ಹಲವೆಡೆ ಬಾಂಬ್ ದಾಳಿ, ನಾಗರೀಕರ ಹತ್ಯೆ, ಹಸಿವಿನಿಂದ ಹಲವಾರು ಜನರ ಸಾವು, ಆ ವರ್ಷ ಏನೇನು ನಡೆದಿಲ್ಲ ಹೇಳಿ. ಜನ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಹಲವಾರು ದುರ್ಘಟನೆಗಳು ನದೆದಿದ್ದವು. ಆದರೆ ಇವೆಲ್ಲದಕ್ಕೂ ಮುಖ್ಯ ಕಾರಣ, ರಾಜಕೀಯ ಅಂತಾನೆ ಹೇಳಬಹುದು.

67

ಆದರೆ 2025ರಲ್ಲಿ ಇಲ್ಲಿವರೆಗೆ ನಡೆದ ಘಟನೆಗಳನ್ನು ಗಮನಿಸಿದರೆ ಅಂದರೆ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು (wild fire), ಇತ್ತೀಚಿಗೆ ನಡೆದ ವಿಮಾನ ದುರಂತ, ಪಹಲ್ಗಾಮ್ ಭಯೋತ್ಪಾದಕರ ದಾಳಿ, ಬೆಂಗಳೂರಿನ ಕಾಲ್ತುಳಿತ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ. ಇದನ್ನೆಲ್ಲಾ ಗಮನಿಸಿದಾಗ, ಮತ್ತೆ ಅದೇ 1941ರ ದಿನಗಳು ಮರುಕಳಿಸಲಿದೆಯೇ ಎನ್ನುವ ಭಯ ಕಾಡುತ್ತಿವೆ. ಅದೇ ವಿಷಯವಾಗಿ 2025ನ್ನು ಶಾಪಗ್ರಸ್ತ ವರ್ಷ ಎನ್ನುವ ಮೂಢನಂಬಿಕೆ ಕೂಡ ಬೆಳೆಯುತ್ತಿದೆ.

77

ಆದರೆ ಸರಿಯಾಗಿ ಗಮನಿಸಿದರೆ 1941ರ ದುರಂತಗಳು ಕ್ಯಾಲೆಂಡರ್‌ನಿಂದ ಖಂಡಿತವಾಗಿ ಉಂಟಾಗಿಲ್ಲ - ಅವು ರಾಜಕೀಯ ತಪ್ಪು ಲೆಕ್ಕಾಚಾರಗಳು, ಜಾಗತಿಕ ಉದ್ವಿಗ್ನತೆಗಳು ಮತ್ತು ಅನಿಯಂತ್ರಿತ ಆಕ್ರಮಣಶೀಲತೆಯ ಪರಿಣಾಮಗಳಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, 2025ರ ಎಲ್ಲಾ ಘಟನೆಗಳಿಗೆ ಅತಿದೊಡ್ಡ ಕಾರಣಗಳು- ಹವಾಮಾನ ಅಸ್ಥಿರತೆ, ಭೌಗೋಳಿಕ ರಾಜಕೀಯ ಪೈಪೋಟಿ, ಇನ್ನಿತರ ಕಾರಣಗಳಾಗಿವೆ. ಇವೆಲ್ಲವೂ ಸರಿಯಾದರೆ ಸಮಸ್ಯೆಗಳು ತನ್ನಿಂದ ತಾನೆ ನಿವಾರಣೆಯಾಗಬಹುದು.

Read more Photos on
click me!

Recommended Stories