Viral Video Fact: ಲೋಕೋಪೈಲಟ್ ಒಬ್ಬರು ಸಮೋಸ ಖರೀದಿಸಲು ರೈಲು ನಿಲ್ಲಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯಿಂದ ಸ್ಪಷ್ಟನೆ ಬಂದಿದೆ.
ಲೋಕೋಪೈಲಟ್ ಒಬ್ಬರು ಮಾರ್ಗಮಧ್ಯೆಯೇ ರೈಲು ನಿಲ್ಲಿಸಿ ಸಮೋಸ ಖರೀದಿಗೆ ಬಂದಿರುವ ಆರೋಪ ಕೇಳಿ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಲೋಕೋಪೈಲಟ್ ಸಮೋಸ ಖರೀದಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
25
ವಿಡಿಯೋ ವೈರಲ್
ಮಧ್ಯಪ್ರದೇಶದ ಇಂದೋರ್‌ನಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಬಳಿಕ ಭಾರತೀಯ ರೈಲ್ವೆ ತನಿಖೆಗೆ ಆದೇಶಿಸಿದೆ. ಇಂದೋರ್-ಮೋವ್ ಡೆಮು (Indore-Mhow DEMU ) ರೈಲಿನ ಲೋಕೋ ಪೈಲಟ್ ಸಮೋಸ ಖರೀದಿ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸಮೋಸಾ ಖರೀದಿಗಾಗಿಯೇ ರೈಲು ನಿಲ್ಲಿಸಲಾಗಿತ್ತು ಎಂಬ ಆರೋಪಕ್ಕೆ DRM Ratlam (@RatlamDRM) ಸ್ಪಷ್ಟನೆಯನ್ನು ನೀಡಿದೆ.
35
ರೈಲ್ವೆ ಸ್ಪಷ್ಟನೆ
ಲೊಕೊ ಸಂಖ್ಯೆ 27237 + 27600 ಸಾಗಿಸುತ್ತಿದ್ದ ಗೂಡ್ಸ್ ರೈಲು CGPT ಅನ್ನು RAU ಯಾರ್ಡ್‌ನಲ್ಲಿರುವ ಹಳಿಯಲ್ಲಿ ಎಂಜಿನಿಯರಿಂಗ್ ಕೆಲಸ ನಡೆಯುತ್ತಿದ್ದ ಕಾರಣ RAU ಹೋಮ್ ಸಿಗ್ನಲ್‌ನಲ್ಲಿ ನಿಲ್ಲಿಸಲಾಯಿತು. ಈ ನಿಲುಗಡೆಯ ಸಮಯದಲ್ಲಿ, ಸಹಾಯಕ ಲೋಕೋ ಪೈಲಟ್ (ALP) ಸಮೋಸಾ ಮತ್ತು ಕಚೋರಿ ಖರೀದಿಸುತ್ತಿರುವುದು ಕಂಡುಬಂದಿದೆ.
ಆಹಾರವನ್ನು ಖರೀದಿಸುವ ಉದ್ದೇಶದಿಂದ ರೈಲನ್ನು ನಿಲ್ಲಿಸಲಾಗಿಲ್ಲ. ಘಟನೆಯ ವೀಡಿಯೊವನ್ನು ತಪ್ಪು ಉದ್ದೇಶದಿಂದ ಹಂಚಿಕೊಳ್ಳಲಾಗಿದೆ, ಈ ನಿಲುಗಡೆಯನ್ನು ಪ್ಯಾಸೆಂಜರ್ DEMU ರೈಲಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಸ್ಪಷ್ಟನೆಯನ್ನು ನೀಡಿದೆ.
55
ಫ್ಯಾಕ್ಟ್ ಚೆಕ್ ಬಳಿಕ ಜನರು ಹೇಳಿದ್ದೇನು?
ಕೆಲವೊಮ್ಮೆ ಗೂಡ್ಸ್ ರೈಲುಗಳು ಗಂಟೆಗಟ್ಟಲೇ ಹಳಿ ಮೇಲೆ ನಿಂತಿರುತ್ತವೆ. ಈ ಸಂದರ್ಭದಲ್ಲಿ ಲೋಕೋಪೈಲಟ್‌ಗಳು ಕೆಳಗೆ ಇಳಿಯುತ್ತಾರೆ. ಬಹುಶಃ ಲೋಕೋಪೈಲಟ್ ಇದೇ ಭಾಗದವರಾಗಿರಬಹುದು. ಪಕ್ಕದಲ್ಲಿಯೇ ಸಮೋಸ ಅಂಗಡಿ ಇರೋ ವಿಷಯ ತಿಳಿದು ಬಂದು ಆಹಾರ ತೆಗೆದುಕೊಂಡು ಹೋಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.