ಗರಂ ಮಸಾಲದಿಂದ ಆದ ಎಡವಟ್ಟು; 10 ಲಕ್ಷ ರೂಪಾಯಿ ಪರಿಹಾರ ಪಡೆದ ಯುವಕ; ಅಂಥದ್ದೇನಾಯ್ತು?

Published : May 22, 2026, 05:47 PM IST

Why Indian spices trigger airport drug alarms: ಏರ್‌ಪೋರ್ಟ್‌ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಉದ್ಯಮಿಯೊಬ್ಬ 57 ದಿನಗಳ ಕಾಲ ಜೈಲಿನಲ್ಲಿ ಇರುವ ಹಾಗೆ ಆಯ್ತು. ಇದಕ್ಕೆಲ್ಲ ಕಾರಣ ಗರಂ ಮಸಾಲ. ಹಾಗಿದ್ದರೆ ನಿಜಕ್ಕೂ ಏನಾಯ್ತು? ಪರಿಹಾರ ಸಿಕ್ಕಿತು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
14
ಏನು ಘಟನೆ ನಡೆಯಿತು?

Bhopal airport garam masala case: ಉದ್ಯಮಿ ಅಜಯ್‌ ಸಿಂಗ್‌ ಎನ್ನುವವರು ಮೇ 7ರಂದು ಮಲೇಷಿಯಾಕ್ಕೆ ಹೋಗುವವರಿದ್ದರು. ಭೋಪಾಲ್‌ನಿಂದ ದೆಹಲಿಗೆ ಪ್ರಯಾಣ ಮಾಡುತ್ತಿದ್ದರು. ಭೋಪಾಲ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಟ್ರೇಸ್‌ ಡಿಟೆಕ್ಟರ್‌ ಯಂತ್ರವು ನಮ್ಮ ವಸ್ತುಗಳನ್ನು ಪರಿಶೀಲನೆ ಮಾಡುತ್ತದೆ. ಅಂತೆಯೇ ಅಜಯ್‌ ಸಿಂಗ್‌ ಅವರ ಬ್ಯಾಗ್‌ನಲ್ಲಿ ಆಮ್ಚೂರ್‌ ಗರಂ ಮಸಾಲಾ ಬ್ರ್ಯಾಂಡ್ ಪ್ಯಾಕೇಟ್‌ ಇತ್ತು. ಇದರಲ್ಲಿ ಹೆರಾಯಿನ್‌, ಎಂಡಿಇಎ ಇದೆ ಎಂದು ಯಂತ್ರ ಹೇಳಿತ್ತು. ಹೀಗಾಗಿ ಅಜಯ್‌ ಸಿಂಗ್‌ ಅವರನ್ನು ಬಂಧಿಸಲಾಗಿತ್ತು. ಆಮೇಲೆ ಎನ್‌ಡಿಪಿಎಸ್‌ ಕಾಯ್ದೆಯಡಿ ಸೆಕ್ಷನ್‌ 8/21 ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಅವರು 57 ದಿನಗಳ ಕಾಲ ಜೈಲಿನಲ್ಲಿದ್ದರು. 2010ರಲ್ಲಿ ಅವರ ಬಳಿ ಬಾಂಡ್‌ ಬರೆಸಿಕೊಂಡು ಬಿಟ್ಟರು.

24
ಆಮೇಲೆ ಸತ್ಯ ಗೊತ್ತಾಯ್ತು!

ಅದಾದ ಬಳಿಕ ಈ ವಸ್ತುಗಳನ್ನು ಮತ್ತೆ ಪರಿಶೀಲನೆ ಮಾಡಿದಾಗ ಮಾದಕ ದ್ರವ್ಯ ಇಲ್ಲ ಎಂದು ಗೊತ್ತಾಯಿತು. ಈ ಪ್ರಕರಣ ಖುಲಾಸೆಯಾದರೂ ಕೂಡ ಅಜಯ್‌ ಮಾತ್ರ ಜೈಲಿನಲ್ಲಿ ಉಳಿಯುವ ಹಾಗೆ ಆಗಿತ್ತು.

34
ಪರಿಹಾರ ಕೊಡಿ ಎಂದರು!

ಇದಕ್ಕಾಗಿ ಅಜಯ್‌ ಸಿಂಗ್‌ ಅವರು ರಿಟ್‌ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರ ಕೊಡಿ ಎಂದರು. ಅಧಿಕಾರಿಗಳ ಬೇಜಾವಬ್ದಾರಿಯಿಂದಾಗಿ ಜೈಲಿಗೆ ಹಾಕಲಾಗಿದೆ ಎಂದು ಹೇಳಲಾಗಿತ್ತು. ಇದರಿಂದ ನನಗೆ, ನನ್ನ ಮನೆಯವರಿಗೆ ಮಾನಸಿಕ ನೋವು ಕೂಡ ಆಗಿದೆ ಎಂದು ಹೇಳಿದ್ದರು.

44
10 ಲಕ್ಷ ರೂಪಾಯಿ ಪರಿಹಾರ

ಅಜಯ್‌ ಸಿಂಗ್‌ ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ಕೊಡಿ ಎಂದು ಕೋರ್ಟ್‌ ಹೇಳಿದೆ. ಒಟ್ಟಿನಲ್ಲಿ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Read more Photos on
click me!

Recommended Stories