2026 ಮೇ 15ರಂದು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರೊಬ್ಬರು ನನಗೆ ಸೀನಿಯರ್ ಪಟ್ಟ ಕೊಡಿ ಎಂದು ಹೇಳಿದ್ದರು. ದೇಶದ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆ ಸೂರ್ಯಕಾಂತ್ ಅವರು ಮಾತ್ರ ಇಡೀ ಪ್ರಪಂಚಕ್ಕೆ ಸೀನಿಯರ್ ಪಟ್ಟ ಕೊಡಬಹುದು, ಆದರೆ ನಿನಗೆ ಕೊಡೋದಿಲ್ಲ, ನಿನಗೆ ಏನು ಯೋಗ್ಯತೆ ಇದೆ? ಒಂದು ಸಮಾಜದಲ್ಲಿ ದಾಳಿ ಮಾಡುವ ಪರಾವಲಂಬಿಗಳಿದ್ದಾರೆ, ಅವರ ಜೊತೆ ನೀವು ಸೇರಿಕೊಳ್ತೀರಿ ಅನಿಸತ್ತೆ, ಕೆಲ ಯುವಕರು ಜಿರಳೆಗಳ ಥರ, ಅವರು ಕೆಲವರು ಮೀಡಿಯಾ ಆಗ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಇರುತ್ತಾರೆ, ಹೋರಾಟಗಾರ ಆಗುತ್ತಾರೆ ಎಂದು ಹೇಳಿದ್ದರು. ಇದು ಅನೇಕರಿಗೆ ಸಿಟ್ಟು ತರಿಸಿತು. ಆ ಬಳಿಕ ನ್ಯಾಯಮೂರ್ತಿಗಳು, “ನಾನು ಎಲ್ಲರಿಗೂ ಈ ಮಾತು ಹೇಳಿಲ್ಲ” ಎಂದು ಸಮಜಾಯಿಷಿ ಕೊಟ್ಟರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ, ಒಟ್ಟಿನಲ್ಲಿ ಕೆಲವರು ಆಕ್ರೋಶ ಹೊಂದಿದ್ದರು.
ನಮಗೆ ಕೆಲಸ ಕೊಡದ ಈ ಸಮಾಜದಲ್ಲಿ ನಾವು ಜಿರಳೆಗಳಾಗದೆ ಇನ್ನೇನು ಆಗಲಿಕ್ಕೆ ಸಾಧ್ಯ ಎಂದು ಕೆಲ ಯುವಕರು ಆಕ್ರೋಶ ಹೊರಹಾಕಿದ್ದರು. ಹಾಗೆಯೇ ಕಾಕ್ರೋಚ್ ಜನತಾ ಪಾರ್ಟಿ ಎಂದು ಪೇಜ್ ಕ್ರಿಯೇಟ್ ಆಗಿದ್ದು, ಈ ಪೇಜ್‌ನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ.