ಬೆಂಗಳೂರಿನ ಮಂತ್ರಿಮಾಲ್‌ನಲ್ಲಿರುವ ಯುವತಿಗೆ ಡಬಲ್ ಜಾಕ್ ಪಾಟ್ ಸಿಕ್ಕಿದೆ. ಈ 'ಡಬಲ್ ಜಾಕ್‌ಪಾಟ್' ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಯುವತಿಯೊಬ್ಬರಿಗೆ ಡಬಲ್ ಜಾಕ್‌ಪಾಟ್ ಸಿಕ್ಕಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂತಹ ಸಣ್ಣ ಸಣ್ಣ ಘಟನೆಗಳು ಅತ್ಯಂತ ಖುಷಿಯನ್ನು ನೀಡುತ್ತವೆ ಎಂದು ಅಂತರ್ಜಾಲ ಬಳಕೆದಾರರು ಕಮೆಂಟ್ ಮಾಡುತ್ತಿದ್ದಾರೆ. ಹಲವರು ಈ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
25
ವೆಂಡಿಂಗ್ ಮಷೀನ್
ಇಂದು ಎಲ್ಲಾ ಕಡೆ ವೆಂಡಿಂಗ್ ಮಷೀನ್‌ಗಳು ಬಂದಿವೆ. ಈ ಮಷೀನ್ ಮೂಲಕ ಜನರು ತಮಗೆ ಬೇಕಾದ ಆಹಾರವನ್ನು ಖರೀದಿ ಮಾಡಬಹುದು. ಇದರಿಂದ ಜನರಿಗೆ ಅಂಗಡಿಗಳ ಮುಂದೆ ಕ್ಯೂ ನಿಲ್ಲೋದು ತಪ್ಪುತ್ತದೆ. ಬೆಂಗಳೂರಿನ ಬಸ್ ನಿಲ್ದಾಣ, ಮೆಟ್ರೋ ಸ್ಟೇಶನ್‌ಗಳಲ್ಲಿ ಈ ರೀತಿಯ ಮಷೀನ್‌ಗಳನ್ನು ಕಾಣಬಹುದು. ಇಂತಹ ಸ್ನ್ಯಾಕ್ಸ್ ವೆಂಡಿಂಗ್ ಮಷೀನ್‌ನಲ್ಲಿ ಯುವತಿಯೊಬ್ಬರಿಗೆ ಡಬಲ್ ಜಾಕ್‌ಪಾಟ್ ಸಿಕ್ಕಿದೆ.
35
ವೈರಲ್ ಆಗಿರುವ ವಿಡಿಯೋ
ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ, ವೆಂಡಿಂಗ್ ಮಷೀನ್‌ನಲ್ಲಿ ಚಿಪ್ಸ್ ಪ್ಯಾಕೇಟ್ ಗ್ಲಾಸ್ ಮುಂಭಾಗಕ್ಕೆ ಬಂದಿರುತ್ತದೆ. ಯುವತಿ ಅದೇ ಬ್ರ್ಯಾಂಡ್‌ನ ಚಿಪ್ಸ್ ಪ್ಯಾಕೇಟ್ ಆರ್ಡರ್ ಮಾಡಿ ಹಣವನ್ನು ಆನ್‌ಲೈನ್ ಮೂಲಕ ಪಾವತಿಸುತ್ತಾರೆ. ಆಗ ಮುಂಭಾಗದಲ್ಲಿದ್ದ ಪ್ಯಾಕೇಟ್ ಸಹ ಕೆಳಗೆ ಬೀಳುತ್ತದೆ. ಇದರಿಂದ ಯುವತಿಗೆ ಎರಡು ಚಿಪ್ಸ್ ಪ್ಯಾಕೇಟ್ ಲಭ್ಯವಾಗುತ್ತದೆ. ಇದರಿಂದ ಯುವತಿ ಖುಷಿಯಾಗಿದ್ದಾರೆ.
Dalia Barman ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಡಬಲ್ ಜಾಕ್‌ಪಾಟ್ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಇಲ್ಲಿವರೆಗೆ ಈ ವಿಡಿಯೋಗೆ 7.85 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಬಳಕೆದಾರರು, ಇನ್ಮುಂದೆ ಮಾಲ್‌ಗೆ ಹೋದಾಗ ಈ ವೆಂಡಿಂಗ್ ಮಷೀನ್ ನೋಡುತ್ತೇನೆ ಎಂದಿದ್ದಾರೆ. ಕೆಲವರು ಇದು ತುಂಬಾ ಸಂತೋಷದ ಕ್ಷಣ ಎಂದಿದ್ದಾರೆ.
55
ತಮಾಷೆಯ ಕಮೆಂಟ್
ಮಹಿಳೆಯ ಅತಿದೊಡ್ಡ ಸಾಧನೆ ಮಾಡಿದ್ದಾರೆ. ಇದೊಂದು ರೀತಿಯ ಮಾಸ್ಟರ್ ಸ್ಟ್ರೋಕ್. ಜೀವನದಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರಬೇಕು ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಮಾತ್ರ ವೈರಲ್ ಆಗುತ್ತಿದ್ದು, ಕೆಲವರು ಮಷೀನ್ ಮಾಲೀಕರಿಗೆ ವಿಷಯ ಗೊತ್ತಾದ್ರೆ ಏನ್ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.