ಬಂಡೀಪುರ ಕಾಡಲ್ಲಿ ಆನೆ ತುಳಿದರೂ ಬದುಕಿಬಂದ ವ್ಯಕ್ತಿ: ₹25,000 ದಂಡ ಹಾಕಿದ ಅರಣ್ಯ ಇಲಾಖೆ!

Published : Aug 12, 2025, 02:24 PM ISTUpdated : Aug 12, 2025, 02:26 PM IST

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯ ನಂತರವೂ ಪ್ರಾಣಾಪಾಯದಿಂದ ಪಾರಾಗಿಬಂದ ಪ್ರವಾಸಿಗನಿಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಬರೋಬ್ಬರಿ ₹25,000 ದಂಡ ವಿಧಿಸಿದೆ.

PREV
18

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯ ನಂತರವೂ ಪ್ರಾಣಾಪಾಯದಿಂದ ಪಾರಾಗಿಬಂದ ಪ್ರವಾಸಿಗನಿಗೆ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ಬರೋಬ್ಬರಿ ₹25,000 ದಂಡ ವಿಧಿಸಿದೆ.

28

ಕೇರಳ ಮೂಲದ ಪ್ರವಾಸಿಗ ಆರ್. ಬಸವರಾಜ್, ನಂಜನಗೂಡಿನ ನಿವಾಸಿಯಾಗಿದ್ದು, ಇವರು ಬಂಡೀಪುರ-ಕೆಕ್ಕನಹಳ್ಳ ಚೆಕ್‌ಪೋಸ್ಟ್ ನಡುವಿನ ಅರಣ್ಯ ರಸ್ತೆಯಲ್ಲಿ ತಮ್ಮ ವಾಹನದಿಂದ ಇಳಿದು ಕಾಡಾನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದರು. ಇದರಿಂದ ತನ್ನ ನೆಲೆಯಲ್ಲಿ ಯಾರೋ ಆಗಂತುಕರು ಬಂದು ತೊಂದರೆ ಉಂಟುಮಾಡುತ್ತಿದ್ದಾರೆ ಎಂಬ ಭಯದಿಂದ ರೊಚ್ಚಿಗೆದ್ದ ಕಾಡಾನೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಬೆನ್ನಟ್ಟಿದೆ.

38

ಆನೆ ದಾಳಿ ಮಾಡಲು ಬಂದಾಗ ಎದ್ದು ಬಿದ್ದು ಓಡುವಾಗ, ರಸ್ತೆಯ ಮೇಲೆ ಎಡವಿ ಬಿದ್ದಿದ್ದಾನೆ. ಆಗ, ರಸ್ತೆಗೆ ಬಿದ್ದ ಪ್ರವಾಸಿಗ ಬಸವರಾಜ್ ಅವರನ್ನು ಆನೆ ತುಳಿದಿದೆ. ಆದರೆ, ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

48

ಈ ಘಟನೆ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ವನ್ಯಜೀವಿಗಳಿರುವ ರಸ್ತೆಗಳಲ್ಲಿ ಗಸ್ತು ತೀವ್ರಗೊಳಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ತಲೆಮರೆಸಿಕೊಂಡಿದ್ದ ಬಸವರಾಜ್ ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಂಜನಗೂಡಿನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆತನನನ್ನು ವಿಚಾರಣೆಗೆ ಒಳಪಡಿಸಿದ ವೇಳೆ, ನಾನು ತಿಳುವಳಿಕೆ ಕೊರತೆಯಿಂದ ಕಾಡಿನಲ್ಲಿ ಇಳಿದು ಆನೆ ಇರುವ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.

58

ಅರಣ್ಯ ಇಲಾಖೆ ಆದೇಶದಂತೆ ಕಾಡಿನಲ್ಲಿ ಹಾದುಹೋಗುವ ರಸ್ತೆಯಲ್ಲಿ ಎಲ್ಲಿಯೂ ವಾಹನಗಳಿಂದ ಇಳಿಯಬಾರದು. ಕಾಡು ಪ್ರಾಣಿಗಳೊಂದಿಗೆ , ಫೋಟೋ, ವಿಡಿಯೋ ಮಾಡಲು ಕೆಳಗಿಳಿಯಬಾರದು. ಕಾಡು ಪ್ರಾಣಿಗಳಿಗೆ ಆಹಾರ ನೀಡಬಾರದು ಎಂಬ ನಿಯಮಗಳಿದ್ದರೂ ಅವುಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ₹25,000 ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ.

68

ಬಸವರಾಜ್ ಅವರು ವಿಡಿಯೋ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರವಾಸಿಗರು ಅರಣ್ಯ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸುವುದು, ವನ್ಯಜೀವಿಗಳಿಗೆ ಆಹಾರ ನೀಡುವುದು ಅಥವಾ ಇಂತಹ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ವಿಡಿಯೋ ನೋಡಲಿ ಇಲ್ಲಿ ಕ್ಲಿಕ್ ಮಾಡಿ

78

ಅರಣ್ಯ ಸಚಿವರ ಸೂಚನೆ

ಈ ಘಟನೆಯ ಕುರಿತು ಮಾಹಿತಿ ಪಡೆದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಅರಣ್ಯ ಪ್ರದೇಶದ ರಸ್ತೆಗಳಲ್ಲಿ ಗಸ್ತು ವಾಹನಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪ್ರವಾಸಿಗರು ವಾಹನಗಳಿಂದ ಇಳಿಯದಂತೆ, ಅಜಾಗರೂಕತೆಯಿಂದ ವಾಹನ ಚಲಾಯಿಸದಂತೆ ಮತ್ತು ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.

88

ಈ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಇಲಾಖೆ ಮುಂದಾಗಿದೆ. ಈ ಕ್ರಮಗಳು ವನ್ಯಜೀವಿ ಮತ್ತು ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿವೆ.

Read more Photos on
click me!

Recommended Stories