ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ; ಆದಿಮಾನವರ ಚಿತ್ರಗಳೂ ಲಭ್ಯ!

Published : Jul 24, 2025, 05:35 PM IST

ರಾಯಚೂರಿನ ಮಸ್ಕಿ ಪಟ್ಟಣದ ಬಳಿಯ ಗುಡ್ಡದಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿಯ ಕುರುಹುಗಳು ಪತ್ತೆಯಾಗಿವೆ. ವಿದೇಶಿ ಮತ್ತು ದೇಶಿ ಸಂಶೋಧಕರ ತಂಡವು ಅಶೋಕನ ಶಾಸನ ಸಿಕ್ಕ ಸ್ಥಳದ ಸುತ್ತಮುತ್ತ ಉತ್ಖನನ ನಡೆಸಿ ಈ ಕುರುಹುಗಳನ್ನು ಪತ್ತೆ ಹಚ್ಚಿದೆ.

PREV
19

ರಾಯಚೂರಿನ ಮಸ್ಕಿ ಪಟ್ಟಣದ ಗುಡ್ಡದಲ್ಲಿ ಅಶೋಕನ ಶಿಲಾ ಶಾಸಕ ಸಿಕ್ಕಿರುವ ಸುತ್ತಲಿನ ಪ್ರದೇಶದಲ್ಲಿ 4 ಸಾವಿರ ವರ್ಷಗಳ ಹಿಂದೆ ಜನರು ಇಲ್ಲಿ ವಾಸ ಮಾಡುತ್ತಿದ್ದರು ಎಂಬುದರ ಕುರುಹುಗಳು ಪತ್ತೆಯಾಗಿವೆ. ಈ ಮೂಲಕ ಮಸ್ಕಿ ಪ್ರದೇಶದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜನ ವಸತಿ ಇತ್ತು ಎಂಬ ಸಾಕ್ಷ್ಯಗಳು ಇಲ್ಲಿ ಲಭ್ಯವಾಗಿವೆ.

29

ರಾಯಚೂರು ಜಿಲ್ಲೆ ‌ಮಸ್ಕಿ ಪಟ್ಟಣದ ಬಳಿಯಿರುವ ಗುಡ್ಡದಲ್ಲಿ ಐತಿಹಾಸಿಕ ಕುರುಹುಗಳು ಇದೀಗ ಸಿಕ್ಕಿವೆ. ಮಸ್ಕಿ ಪಟ್ಟಣದ ಬಳಿಯ ಗುಡ್ಡದ ಕೆಳಗೆ ಭೂ ಗರ್ಭ ಸೇರಿದ್ದ 4,000 ವರ್ಷಗಳ ಹಿಂದೆಯೇ ಮಾನವರು ವಾಸ ಮಾಡುತ್ತಿದ್ದರು ಎಂಬುದರ ಇತಿಹಾಸವನ್ನು ವಿದೇಶಿ ಸಂಶೋಧಕರು ಕೆದಕಿದ್ದಾರೆ.

39

ಅಮೆರಿಕ ಸ್ಟ್ಯಾನ್‌ಫೋರ್ಡ್‌ ವಿಶ್ವ ವಿದ್ಯಾಲಯದ ಡಾ.ಆ್ಯಂಡ್ರಿಮ್ ಎಂ.ಬವೇರ್, ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಡಾ. ಪೀಟರ್ ಜಿ‌.ಜೋಹಾನ್ಸನ್ ಹಾಗೂ ನಮ್ಮ ದೇಶದ ದೆಹಲಿಯ ನೊಯಿಡಾ ವಿಶ್ವವಿದ್ಯಾಲಯದ ಡಾ.ಹೇಮಂತ್ ಕಡಾಂಬಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಶೋಧ ಕಾರ್ಯ ಮಾಡಲಾಗಿದೆ.

49

ಮಸ್ಕಿಯ ಬೆಟ್ಟದಲ್ಲಿ ಕಳೆದ 2 ತಿಂಗಳ ಕಾಲ ಶೋಧ ಕಾರ್ಯ ಮಾಡಿದ್ದಾರೆ. ಮಸ್ಕಿಯಲ್ಲಿ ಸಾಮ್ರಾಟ್ ಅಶೋಕ ಶಾಸನ ಸಿಕ್ಕಿದ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯವನ್ನು ಮಾಡಲಾಗಿದೆ.

59

ಮಸ್ಕಿಯ ದುರ್ಗದ ಗುಡ್ಡ, ಮಜ್ಜಿಗೆ ಗುಂಡು ಮತ್ತು ಅಯ್ಯಪ್ಪ ಸ್ವಾಮಿ ದೇಗುಲದ ಮುಂಭಾಗದಲ್ಲಿ ಶೋಧ ಕಾರ್ಯವನ್ನು ಮಾಡಲಾಗಿದೆ. ಈ ಗುಡ್ಡದಲ್ಲಿ ಭೂಮಿ ಉತ್ಖನನ ಮಾಡಿ ಪಳಿಯುಳಿಕೆ ಸಂಗ್ರಹಿಸಿ ಅಧ್ಯಯನ ಮಾಡಲಾಗುತ್ತಿದೆ.

69

ಸಂಶೋಧಕರ ಭೂಮಿ ಉತ್ಖನನ ವೇಳೆ 4000 ಸಾವಿರ ವರ್ಷಗಳ ಹಳೆಯ ವಸ್ತುಗಳು ಪತ್ತೆಯಾಗಿವೆ. ಹಿಂದಿನ ಕಾಲದಲ್ಲಿ ಜನ ಜೀವನಕ್ಕೆ ಬಳಸಿದ ಹತ್ತಾರು ವಸ್ತುಗಳು ಈ ಉತ್ಖನನದಲ್ಲಿ ಲಭ್ಯವಾಗಿದ್ದು, ಇನ್ನಷ್ಟು ಕುರುಹುಗಳ ಪತ್ತೆಗೆ ಉತ್ಖನನ ಕಾರ್ಯವನ್ನ ಮುಂದುವರೆಸಲಿದ್ದಾರೆ.

79

ಇತ್ತೀಚೆಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿಯೂ ಈ ಸಂಬಂಧಪಟ್ಟ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದ್ದು, ಇದೀಗ ಈ ಬಗ್ಗೆ ಸ್ವತಃ ಸಂಶೋಧಕರು ಅದನ್ನು ದೃಡಪಡಿಸಿದ್ದಾರೆ.

89

ಇನ್ನು ರಾಯಚೂರಿನ ಮಸ್ಕಿಯಲ್ಲಿಇದೀಗ ಮಾನವ ಕುರುಗಳು ಪತ್ತೆಯ ಬೆನ್ನಲ್ಲಿಯೇ ಇಲ್ಲಿಗೆ ಸಂಶೋಧಕರು ಹಾಗೂ ವಿಜ್ಞಾನಿಗಳು ಆಗಮಿಸುತ್ತಿದ್ದಾರೆ. ಆದರೆ, ಇಲ್ಲಿ ಗೃಹಬಳಕೆ ವಸ್ತುಗಳು ಏನೇನು ಸಿಕ್ಕಿವೆ ಎಂಬುದನ್ನು ಸಂಶೋಧಕರು ಇನ್ನೂ ಬಹಿರಂಗಪಡಿಸಬೇಕಿದೆ. ಇನ್ನು ಇಲ್ಲಿ ಸಿಕ್ಕಿರುವ ಕುರುಹುಗಳ ಸರಿಯಾದ ಕಾಲಮಾನ ಯಾವುದೆಂದು ಗುರುತಿಸಬೇಕಿದೆ.

99

ಈ ಹಿಂದೆ ರಾಯಚೂರು ಜಿಲ್ಲೆಗೆ ಸೇರಿದ್ದ ಗಂಗಾವತಿ ತಾಲೂಕಿನ (ಇದೀಗ ಕೊಪ್ಪಳ ಜಿಲ್ಲೆ) ಹಿರೇಬೆಣಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ಬೃಹತ್ ಶಿಲೆಯ ತಾಣವಾಗಿದೆ. ಕ್ರಿ.ಪೂ. 800 ರಿಂದ ಕ್ರಿ.ಪೂ. 200ರ ಅವಧಿಯಲ್ಲಿ ನಿರ್ಮಿಸಲಾದ ಭಾರತದ ಕೆಲವೇ ಬೃಹತ್ ಶಿಲಾ ತಾಣಗಳಲ್ಲಿ ಒಂದಾಗಿದೆ. ಸುಮಾರು 400 ಬೃಹತ್ ಶಿಲಾ ಗೋರಿಯ ಸ್ಮಾರಕಗಳು ಇಲ್ಲಿ ಈಗಲೂ ಶಿಲಾಯುಗದ ಮಾನವರ ಗೋರಿಗಳು ಜೀವಂತವಾಗಿವೆ.

Read more Photos on
click me!

Recommended Stories