ಜೋಡಿ ಹಲ್ಲಿ ಜೊತೆಯಾಗಿ ಕಂಡರೇನರ್ಥ? ಶುಭವೋ, ಅಶುಭವೋ?

First Published Nov 24, 2022, 4:42 PM IST

ಭವಿಷ್ಯದಲ್ಲಿ ವಿವಿಧ ಘಟನೆಗಳನ್ನು ಸೂಚಿಸಲು ದೇವರು ಅನೇಕ ಮಾಧ್ಯಮಗಳನ್ನು ಸೃಷ್ಟಿಸಿದ್ದಾನೆ, ಮನೆಯಲ್ಲಿ ಕಂಡುಬರುವ ಹಲ್ಲಿಗಳ ವರ್ತನೆಯು ಭವಿಷ್ಯದ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ಸಹ ನೀಡಬಹುದು. ನಿಮಗೂ ಈ ಬಗ್ಗೆ ತಿಳಿಯುವ ಆಸಕ್ತಿ ಇದ್ರೆ ನೀವು ಮುಂದೆ ಓದಬಹುದು. 

ಹಲ್ಲಿಯ ಶಕುನದ ಬಗ್ಗೆ ನೀವು ಸಾಕಷ್ಟು ಮಾಹಿತಿ ಕೇಳಿರಬಹುದು. ಅದರಲ್ಲಿ ಹೆಚ್ಚಾಗಿ ಹಲ್ಲಿ ದೇಹದ ವಿವಿಧ ಭಾಗಗಳಲ್ಲಿ ಬಿದ್ದರೆ ಶುಭ (Omen) ಮತ್ತು ಅಶುಭ ಪರಿಣಾಮ ಉಂಟಾಗುತ್ತೆ ಅನ್ನೋದನ್ನು ಸೂಚಿಸುತ್ತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಬಯಸಿದ್ರೆ ನೀವು ಈ ಲೇಖನ ಪೂರ್ತಿಯಾಗಿ ಓದಬೇಕು. ಇಲ್ಲಿ ಹಲ್ಲಿ ಸದ್ದು ಮಾಡಿದ್ರೆ ಅದರ ಅರ್ಥ ಏನು? ಹಲ್ಲಿ ಸತ್ತಿರೋದನ್ನು (dead lizard)ಕಂಡ್ರೆ ಏನಾಗುತ್ತೆ? ಅನ್ನೋದನ್ನೆಲ್ಲಾ ವಿವರಿಸಲಾಗಿದೆ.

ಶಕುನ ಶಾಸ್ತ್ರದ ಪ್ರಕಾರ, ಹೊಸದಾಗಿ ನಿರ್ಮಿಸಲಾದ ಕಟ್ಟಡ ಪ್ರವೇಶಿಸುವ ಸಮಯದಲ್ಲಿ ಕಟ್ಟಡದ ಮಾಲೀಕರು ಸತ್ತ ಅಥವಾ ಮಣ್ಣಿನಿಂದ ಕೂಡಿದ ಹಲ್ಲಿಯನ್ನು ನೋಡಿದರೆ, ಆ ಕಟ್ಟಡದ ನಿವಾಸಿಗಳು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು (health problem) ಎದುರಿಸಬೇಕಾಗಬಹುದು.
 

ಊಟದ ಸಮಯದಲ್ಲಿ ಹಲ್ಲಿ ಶಬ್ಧ ಕೇಳಿದರೆ, ಕೆಲವು ಒಳ್ಳೆಯ ಸುದ್ದಿ ಅಥವಾ ಶುಭ ಫಲಿತಾಂಶಗಳನ್ನು ಕೇಳಲಾಗುತ್ತದೆ. ಹಲ್ಲಿಗಳು ತಮ್ಮೊಳಗೆ ಜಗಳವಾಡುವುದು ಶುಭವಲ್ಲ. ಆಗಾಗ್ಗೆ, ಇದು ಸಂಭವಿಸಿದಾಗ, ಮನೆಯ ಸದಸ್ಯರು ತಮ್ಮೊಳಗೆ ಅಥವಾ ಇತರರೊಂದಿಗೆ ಜಗಳವಾಡುತ್ತಾರೆ ಅಥವಾ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. 

ಗಂಡು ಮತ್ತು ಹೆಣ್ಣು ಹಲ್ಲಿಗಳ ಜೊತೆಯಾಗಿರೋದು ಕಂಡು ಬಂದರೆ ಹಳೆಯ ಸ್ನೇಹಿತ ಅಥವಾ ಪರಿಚಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಅನ್ನೋದನ್ನು ಅದು ಸೂಚಿಸುತ್ತೆ. ಇನ್ನು ದೇಹದ ವಿವಿಧ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಏನು ಪರಿಣಾಮ ಉಂಟಾಗುತ್ತೆ ಅನ್ನೋದನ್ನು ನೋಡೋಣ.

ಪುರುಷರ ತಲೆ ಅಥವಾ ಬಲಗೈ ಮತ್ತು ಮಹಿಳೆಯರ ಎಡ ತೋಳಿನ ಮೇಲೆ ಹಲ್ಲಿಗಳು ಬೀಳುವುದನ್ನು ಮಂಗಳಕರ ಮತ್ತು ಅದೃಷ್ಟವೆಂದು (good luck) ಪರಿಗಣಿಸಲಾಗುತ್ತದೆ. 
ಹಲ್ಲಿ ಬಲ ಕೆನ್ನೆಯ ಮೇಲೆ ಬಿದ್ದರೆ ಸುಖ, ಅದು ಎಡ ಕೆನ್ನೆ ಅಥವಾ ಜನನಾಂಗಗಳ ಮೇಲೆ ಬಿದ್ದರೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ ಅನ್ನೋದನ್ನು ಸೂಚಿಸುತ್ತದೆ.

ಹಲ್ಲಿ ಹೊಕ್ಕಳಿನ ಮೇಲೆ ಬಿದ್ದರೆ ಮಗುವಿನ ಸಂತೋಷ, ಹೊಟ್ಟೆಯ ಮೇಲೆ ಬಿದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಆವರಿಸುವ ಸಾಧ್ಯತೆ ಇದೆ ಅನ್ನೋದನ್ನು ಸೂಚಿಸುತ್ತೆ. ಇನ್ನು ಎದೆಯ ಮೇಲೆ ಬಿದ್ದರೆ ಆಹಾರ ಸುಖ, ಮೊಣಕಾಲಿನ ಮೇಲೆ ಬಿದ್ದರೆ ನಿಮ್ಮ ಜೀವನದಲ್ಲಿ ಸಂತೋಷ (happy life) ತುಂಬಿರುತ್ತೆ ಅನ್ನೋದನ್ನು ಸೂಚಿಸುತ್ತೆ.

ದುಡಿಯುವ ಪುರುಷ ಅಥವಾ ಮಹಿಳೆಯ ದೇಹದ ಮೇಲಿನ ಹಲ್ಲಿ ಬಲಬದಿಯಿಂದ ಏರಿ ಎಡಭಾಗದಿಂದ ಇಳಿದರೆ, ಆಗ ಅವನು ಪ್ರಮೋಶನ್ ಅಥವಾ ಬಡ್ತಿ ಪಡೆಯುತ್ತಾನೆ.
ಒಂದು ವೇಳೆ, ದೇಹದ ಎಡಭಾಗದ ಯಾವುದೇ ಭಾಗದಲ್ಲಿ ಹಲ್ಲಿ ಬಿದ್ದರೆ ಅದು ಅಶುಭ ಪರಿಣಾಮವನ್ನು ನೀಡುತ್ತದೆ.

ಹಲ್ಲಿ ಮೈ ಮೇಲೆ ಬೀಳುವುದರ ಅಶುಭ ಪರಿಣಾಮ ಅಥವಾ ದೋಷವನ್ನು ನಿವಾರಿಸಲು, ಎಳ್ಳು, ತುಪ್ಪ, ಚಿನ್ನ ಇತ್ಯಾದಿಗಳನ್ನು ದಾನ ಮಾಡಲು ಸೂಚಿಸಲಾಗುತ್ತೆ. ಅಷ್ಟೇ ಅಲ್ಲದೇ, ಮಹಾ ಮೃತ್ಯುಂಜಯ ಮಂತ್ರ ಪಠಿಸಲು, ಪಂಚ ಗವ್ಯವನ್ನು ಸೇವಿಸಲು ಸಹ ಹೇಳಲಾಗುತ್ತೆ. 
 

click me!