ಸಾಮಾನ್ಯವಾಗಿ ಹೊಸವರ್ಷವೆಂದರೆ ಎಲ್ಲರಿಗೂ ವಿಶೇಷವೇ. ಹೊಸ ರೀತಿಯ ಬದುಕಿನ ಕನಸು ಕಾಣುತ್ತಾರೆ. ಸಮಸ್ಯೆಗಳಿಲ್ಲದ ವರ್ಷಕ್ಕಾಗಿ ಎದುರು ನೋಡುತ್ತಾರೆ, ಮುಂಬರುವ ವರ್ಷವು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹೊಸ ವರ್ಷಕ್ಕೂ ಮುನ್ನ ಮನೆ ಸ್ವಚ್ಛಗೊಳಿಸುತ್ತಾರೆ. ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮನೆಯಲ್ಲಿ ಕಸವಿದ್ದಾಗ ಲಕ್ಷ್ಮಿ ದೇವಿ ಬರುವುದಿಲ್ಲ ಎಂಬ ನಂಬಿಕೆ ಇದೆ. 2023ರಲ್ಲಿ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರಬೇಕೆಂದರೆ ಮೊದಲು ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಿ.
ಒಡೆದ ಪೀಠೋಪಕರಣಗಳು
ಮನೆಯಲ್ಲಿ ಟೇಬಲ್, ಸೋಫಾ, ಕುರ್ಚಿಯಂತಹ ಒಡೆದ ಪೀಠೋಪಕರಣಗಳನ್ನು ಹಲವು ದಿನಗಳಿಂದ ಇರಿಸಿದ್ದರೆ, ಹೊಸ ವರ್ಷದ ಮೊದಲು ಅದನ್ನು ಮನೆಯಿಂದ ಹೊರ ತೆಗೆಯಿರಿ. ಕೆಟ್ಟ ಪೀಠೋಪಕರಣಗಳು ಮನೆಗೆ ದುರಾದೃಷ್ಟ ಮತ್ತು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಮನೆಯಲ್ಲಿ ಪೀಠೋಪಕರಣಗಳು ಯಾವಾಗಲೂ ಪರಿಪೂರ್ಣ ಸ್ಥಿತಿಯಲ್ಲಿರಬೇಕು. ಸಾಧ್ಯವಾದಲ್ಲಿ ಒಡೆದ, ಮುರಿದ ಪೀಠೋಪಕರಣಗಳನ್ನು ಸರಿಪಡಿಸಿ, ಇಲ್ಲವೇ ಗುಜರಿಗೆ ಹಾಕಿ.
ಒಡೆದ ಗಾಜು
ಮನೆಯಲ್ಲಿರುವ ಗಾಜು ಅಥವಾ ಕಿಟಕಿ ಬಾಗಿಲುಗಳ ಗಾಜು ಒಡೆದರೆ ತಕ್ಷಣ ತೆಗೆದು ಹಾಕಿ. ಒಡೆದ ಗಾಜನ್ನು ಮನೆಯಲ್ಲಿ ಇಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತವೆ.
ದೇವರ ಹರಿದ ಚಿತ್ರಗಳು
ಒಡೆದ ವಿಗ್ರಹಗಳು ಅಥವಾ ದೇವರ ಹರಿದ ಚಿತ್ರಗಳನ್ನು ಎಂದಿಗೂ ಮನೆಯಲ್ಲಿ ಇಡಬಾರದು. ಅಂತಹ ವಿಗ್ರಹಗಳು ಅನರ್ಥವನ್ನು ಉಂಟು ಮಾಡುತ್ತವೆ. ಹೊಸ ವರ್ಷದ ಮೊದಲು ಅವುಗಳನ್ನು ದೇವರ ಕೋಣೆಯಿಂದ ತೆಗೆದು ಹಾಕಿ ಮತ್ತು ಮನೆಯಲ್ಲಿ ಹೊಸ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ.
ಮುರಿದ ಪಾತ್ರೆ
ಯಾವುದೇ ಪಾತ್ರೆ ಮುರಿದಿದ್ದರೆ, ಹೊಸ ವರ್ಷದ ಆರಂಭದ ಮೊದಲು ಅದನ್ನು ತೆಗೆದುಹಾಕಿ. ಮನೆಯಲ್ಲಿ ಎಂದಿಗೂ ಒಡೆದ ಪಾತ್ರೆಗಳು ಇರಬಾರದು. ಅವು ಮನೆಯಲ್ಲಿ ಅಶುಭವನ್ನು ತರುತ್ತವೆ.
ಬಲ್ಬ್‌ಗಳು
ಮನೆಯಲ್ಲಿನ ವಿದ್ಯುತ್ ಸ್ವಿಚ್ ಬೋರ್ಡ್‌ಗಳು ಅಥವಾ ಬಲ್ಬ್‌ಗಳು, ಟ್ಯೂಬ್‌ಲೈಟ್‌ಗಳು ಹಾಳಾಗಿದ್ದರೆ, ಹೊಸ ವರ್ಷದ ಮೊದಲು ಅವುಗಳನ್ನು ಬದಲಾಯಿಸಿ ಮತ್ತು ಸರಿಪಡಿಸಿ. ಈ ವಸ್ತುಗಳ ಕ್ಷೀಣತೆಯಿಂದಾಗಿ, ಮನೆಯಲ್ಲಿ ಕತ್ತಲೆ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಹರಿದ ಚಪ್ಪಲಿ
ಹಳೆಯ ಅಥವಾ ಮುರಿದ ಬೂಟುಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ಬಿದ್ದಿದ್ದರೆ, ಮೊದಲು ಅವುಗಳನ್ನು ಹೊರತೆಗೆಯಿರಿ. ಈ ವಸ್ತುಗಳು ಮನೆಯಲ್ಲಿ ಬಡತನವನ್ನು ತರುತ್ತವೆ. ಹೊಸ ವರ್ಷದ ಆಗಮನದ ಮೊದಲು, ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸಲು ಅಂಥ ವಸ್ತುಗಳನ್ನು ಮನೆಯಿಂದ ತೆಗೆದುಹಾಕಿ.