ಫೆಂಗ್ ಶುಯ್ ಆಮೆಗಳ ಜಗತ್ತು; ಯಾವುದಿಟ್ಟರೆ ಬರುತ್ತೆ ಆರೋಗ್ಯ, ಸಂಪತ್ತು?

First Published | May 23, 2024, 6:38 PM IST

ಭಾರತೀಯ ಸಂಸ್ಕೃತಿಯಲ್ಲಿ ಆಮೆಯು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶೇಷವಾಗಿ ಭಗವಾನ್ ವಿಷ್ಣುವಿನೊಂದಿಗಿನ ಅದರ ಸಂಬಂಧದ ಮೂಲಕ. ಚೀನೀ ಪುರಾಣದಲ್ಲಿ, ಆಮೆ ಫೆಂಗ್ ಶುಯಿಯ ನಾಲ್ಕು ಅತೀಂದ್ರಿಯ ಪ್ರಾಣಿಗಳಲ್ಲಿ ಒಂದಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಆಮೆಯು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶೇಷವಾಗಿ ಭಗವಾನ್ ವಿಷ್ಣುವಿನೊಂದಿಗಿನ ಅದರ ಸಂಬಂಧದ ಮೂಲಕ. ಚೀನೀ ಪುರಾಣದಲ್ಲಿ, ಆಮೆ ಫೆಂಗ್ ಶುಯಿಯ ನಾಲ್ಕು ಅತೀಂದ್ರಿಯ ಪ್ರಾಣಿಗಳಲ್ಲಿ ಒಂದಾಗಿದೆ.

ಫೆಂಗ್ ಶುಯಿ ಆಮೆಗಳ ವಿಧಗಳು ಮತ್ತು ಅವುಗಳ ಪ್ರಯೋಜನಗಳು ಏನೆಲ್ಲ ಎಂದು ನೋಡೋಣ. ಆರೋಗ್ಯ, ಸಂಪತ್ತು, ಆಯಸ್ಸು, ಕೌಟುಂಬಿಕ ನೆಮ್ಮದಿಗಾಗಿ ಯಾವ ರೀತಿಯ ಆಮೆ ಮನೆಯಲ್ಲಿಡಬೇಕು ಎಂಬ ವಿವರ ಇಲ್ಲಿದೆ. 

Latest Videos


ಮರದ ಆಮೆ: ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಮರದ ಆಮೆಯನ್ನು ಮನೆಯ ಪೂರ್ವದಲ್ಲಿರಿಸಿ. ಕುಟುಂಬದ ಸಾಮರಸ್ಯ, ಆರೋಗ್ಯ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಆಗ್ನೇಯದಲ್ಲಿರಿಸಿದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ. 

ಲೋಹದ ಆಮೆ: ರಕ್ಷಣೆ ಮತ್ತು ಬೆಂಬಲ ನಿರ್ದೇಶನ ನೀಡುವ ಈ ಆಮೆಯನ್ನು ಮನೆಯ ಉತ್ತರದಲ್ಲಿರಿಸಿದರೆ ವೃತ್ತಿ ಪ್ರಗತಿ ಮತ್ತು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುತ್ತದೆ. ಪಶ್ಚಿಮದಲ್ಲಿಟ್ಟಾಗ ಸೃಜನಶೀಲತೆ ಮತ್ತು ಅದೃಷ್ಟವನ್ನು ಉತ್ತೇಜಿಸುತ್ತದೆ. 
 

ನಾಣ್ಯಗಳೊಂದಿಗೆ ಆಮೆ: ಸಂಪತ್ತು ಮತ್ತು ಆರ್ಥಿಕ ಭದ್ರತೆಗಾಗಿ ಮನೆಯ ಆಗ್ನೇಯ ದಿಕ್ಕಿನಲ್ಲಿ ಈ ನಾಣ್ಯಗಳೊಂದಿಗಿರುವ ಆಮೆ ಇರಿಸಿದಾಗ ಸಂಪತ್ತು ಕ್ರೋಢೀಕರಣವಾಗುತ್ತದೆ. ಉತ್ತರದಲ್ಲಿರಿಸಿದಾಗ ವೃತ್ತಿ ಸಂಬಂಧಿತ ಆರ್ಥಿಕ ಲಾಭವನ್ನು ಹೆಚ್ಚಿಸುತ್ತದೆ. 

ಕಲ್ಲಿನ ಆಮೆ: ಸ್ಥಿರತೆ ಮತ್ತು ಅಹಂಕಾರ ಬರದಂತೆ ನೋಡಿಕೊಳ್ಳುತ್ತದೆ ಈ ಕಲ್ಲಿನ ಆಮೆ. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿಟ್ಟರೆ ಕುಟುಂಬದ ಸಾಮರಸ್ಯ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ. ಈಶಾನ್ಯದಲ್ಲಿರಿಸಿದಾಗ ಜ್ಞಾನ ಮತ್ತು ವೈಯಕ್ತಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.  

ಕ್ರಿಸ್ಟಲ್ ಟರ್ಟಲ್: ಸ್ಪಷ್ಟತೆ ಮತ್ತು ಸಮೃದ್ಧಿಯ ನಿರ್ದೇಶನ ನೀಡುವ ಕ್ರಿಸ್ಟಲ್ ಆಮೆಯನ್ನು ಮನೆಯ ನೈಋತ್ಯದಲ್ಲಿಡುವುದರಿಂದ ಪ್ರೀತಿ ಮತ್ತು ಸಂಬಂಧಗಳನ್ನು ಹೆಚ್ಚಿಸುತ್ತದೆ. ಮನೆಯ ಒಟ್ಟಾರೆ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. 

ಡ್ರ್ಯಾಗನ್-ಟರ್ಟಲ್: ಸಂಯೋಜಿತ ಶಕ್ತಿ ಮತ್ತು ರಕ್ಷಣೆಗಾಗಿ ಕಚೇರಿಯ ಉತ್ತರ ಅಥವಾ ಹಿಂಭಾಗದಲ್ಲಿ ಡ್ರ್ಯಾಗನ್ ಟರ್ಟಲ್ ಇರಿಸಿದರೆ ವೃತ್ತಿ ಭವಿಷ್ಯವನ್ನು ಹೆಚ್ಚಿಸುತ್ತದೆ ಮತ್ತು ಬಲವಾದ ರಕ್ಷಣೆ ನೀಡುತ್ತದೆ.

click me!