ಅಡುಗೆ ಮನೆಯಲ್ಲಿ ಈ ವಸ್ತು ಖಾಲಿಯಾದರೆ, ನಿಮ್ಮ ಜೇಬೂ ಬರಿದಾಗಬಹುದು!

First Published | May 9, 2024, 7:48 PM IST

ಈ ವಸ್ತುಗಳನ್ನು ಅಡುಗೆ ಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬೇಡಿ, ಅಕಸ್ಮಾತ್ ಡಬ್ಬಿ ಖಾಲಿಯಾದರೆ ಕೆಟ್ಟ ಸಮಯ ಪ್ರಾರಂಭವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಿದ್ರೆ ಆ ವಸ್ತುಗಳು ಯಾವುವು ಅನ್ನೋದನ್ನು ನೋಡೋಣ. 
 

ಮನೆಯಲ್ಲಿನ ಎಲ್ಲಾ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡೋದರಿಂದ, ಕುಟುಂಬದಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ (Vaastu Shastra) ತಿಳಿಸಿದೆ. ಅಡುಗೆ ಮನೆ (Kitchen) ಪ್ರತಿಯೊಂದು ಮನೆಯ ಪ್ರಮುಖ ಭಾಗ. ತಾಯಿ ಅನ್ನಪೂರ್ಣ ಅಡುಗೆ ಮನೆಯಲ್ಲಿ ವಾಸಿಸುತ್ತಾಳೆ ಎನ್ನುವ ಅಚಲ ನಂಬಿಕೆ ಕೂಡ ಇದೆ. ಹಾಗಾಗಿ ಕೆಲವು ವಸ್ತುಗಳನ್ನು ಅಡುಗೆ ಕೋಣೆಯಲ್ಲಿ ಖಾಲಿ ಮಾಡಬಾರದು. 

ವಾಸ್ತು ಶಾಸ್ತ್ರದಲ್ಲಿ, ಅಡುಗೆಮನೆಗೆ ಸಂಬಂಧಿಸಿದ ಅನೇಕ ನಿಯಮಗಳಿವೆ. ಇದರ ಬಗ್ಗೆ ಕಾಳಜಿ ವಹಿಸಿದರೆ, ವ್ಯಕ್ತಿಯು ಜೀವನದಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದು. ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಯು ಅದರ ನಕಾರಾತ್ಮಕ ಪರಿಣಾಮಗಳನ್ನು (negative effect) ಎದುರಿಸ ಬೇಕಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ವಿವರಣೆ ಇದೆ.
 

Tap to resize

ಈ ವಸ್ತುಗಳು ಖಾಲಿಯಾಗಲು ಬಿಡಬೇಡಿ
ಅನೇಕ ಜನರು ಸಂಪೂರ್ಣವಾಗಿ ಖಾಲಿಯಾದ ನಂತರವೇ ಮಸಾಲೆಗಳಂತಹ ಅಡುಗೆ ವಸ್ತುಗಳನ್ನು ಖರೀದಿಸುವ ಅಭ್ಯಾಸ ಹೊಂದಿದ್ದಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ನೀವು ಉಪ್ಪನ್ನು (salt) ಇಡುವ ಪಾತ್ರೆಯನ್ನು ಎಂದಿಗೂ ಖಾಲಿಯಾಗಲು ಬಿಡಬಾರದು. ಇದು ಜೀವನದಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. 

ಇದರೊಂದಿಗೆ, ಸಾಸಿವೆ ಎಣ್ಣೆಯನ್ನು (mustard oil) ನಿಮ್ಮ ಅಡುಗೆ ಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಇದು ಖಾಲಿಯಾದರೆ ಮನೆಯಲ್ಲಿ ನಕಾರಾತ್ಮ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಎಣ್ಣೆ ಖಾಲಿಯಾಗುವ ಮುನ್ನವೇ ತಂದು ತುಂಬಿಸಿ ಇಡೋದು ಉತ್ತಮ. 
 

ಅರಿಶಿನ (turmeric) ಅಡುಗೆ ಮನೆಯ ಅತ್ಯಗತ್ಯ ಮಸಾಲೆ. ಅದು ಇಲ್ಲದೆ, ಖಾದ್ಯದ ರುಚಿ ಪರಿಪೂರ್ಣ ಎನಿಸುವುದಿಲ್ಲ. ಇದನ್ನು ವಿಶೇಷವಾಗಿ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ವಾಸ್ತು ಪ್ರಕಾರ, ಅರಿಶಿನವನ್ನು ಅಡುಗೆಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಅರಿಶಿನ ಮುಗಿಯುವ ಮೊದಲು ಅದನ್ನು ಖರೀದಿಸಿ.
 

ಭಾರತೀಯ ಸಂಸ್ಕೃತಿಯಲ್ಲಿ, ಗೋಧಿ, ಅಕ್ಕಿ ಹಿಟ್ಟು ನಮ್ಮ ಆಹಾರದ ಅತ್ಯಗತ್ಯ ಭಾಗ. ಇದನ್ನು ಹೆಚ್ಚಿನ ಆಹಾತ ತಯಾರಿಸಲು ಬಳಸಲಾಗುತ್ತದೆ. ನಿಮ್ಮ ಅಡುಗೆ ಮನೆಯಲ್ಲಿ ಹಿಟ್ಟು ಖಾಲಿಯಾದರೆ, ಇದರಿಂದ ಹಣದ ಸಮಸ್ಯೆ ಉದ್ಭವಿಸಬಹುದು ಎಂದು ವಾಸ್ತು ಶಾಸ್ತ್ರ ತಿಳಿಸುತ್ತೆ. ಹಾಗಾಗಿ ತಪ್ಪಿಯೂ ಗೋಧಿ ಹಿಟ್ಟನ್ನು ಅಥವಾ ಮನೆಯಲ್ಲಿ ದಿನನಿತ್ಯ ಉಪಯೋಗಿಸುವ ಹಿಟ್ಟನ್ನು ಖಾಲಿಯಾಗಲು ಬಿಡಬೇಡಿ. 
 

Latest Videos

click me!