ಹುಚ್ಚರಂತೆ ಪ್ರೀತಿಸೋರು ಸಿಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ!

First Published | May 4, 2024, 6:52 PM IST

ಜೀವನದಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಂಡರೆ, ಮೊದಲಿಗಿಂತ ಹೆಚ್ಚು ಜೀವನ ಸುಂದರವಾಗುತ್ತದೆ. ನೀವು ಬಯಸುವ ನೈಜ ಪ್ರೀತಿಯನ್ನು ಪಡೆಯಲು ಬಯಸಿದರೆ, ವಾಸ್ತುವಿನ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಇದನ್ನ ಟ್ರೈ ಮಾಡಿದ್ರೆ, ನೀವು ಇಷ್ಟ ಪಟ್ಟ ವ್ಯಕ್ತಿ ನಿಮಗೆ ಸಿಕ್ಕೇ ಸಿಗ್ತಾರೆ. 
 

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ನಿಜವಾದ ಪ್ರೀತಿ (true love) ಸಿಗಬೇಕೆಂದು ಬಯಸುತ್ತಾನೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ನಿಜವಾದ ಪ್ರೀತಿ ಸಿಗೋದಕ್ಕೆ ಸಾಧ್ಯವೇ ಆಗೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಜೀವನವನ್ನು ಅಪೂರ್ಣವೆಂದು ಭಾವಿಸಲು ಪ್ರಾರಂಭಿಸುತ್ತಾರೆ. ವಾಸ್ತು ಶಾಸ್ತ್ರದಲ್ಲಿ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಆಕರ್ಷಿಸುವ ಮಾರ್ಗಗಳಿವೆ. ಇದರರ್ಥ ನೀವು  ನಿಮಗಿಷ್ಟವಾದ ಪ್ರೀತಿಯನ್ನು ಪಡೆಯಲು ಬಯಸಿದರೆ, ವಾಸ್ತು ಶಾಸ್ತ್ರದ ಈ ಪರಿಹಾರಗಳನ್ನು ಟ್ರೈ ಮಾಡಬಹುದು. ಬನ್ನಿ, ಈ ಕುರಿತು ತಿಳಿಯೋಣ. 
 

ಮಲಗುವ ಕೋಣೆಯಲ್ಲಿ ಲವ್ ಬರ್ಡ್ಸ್ ಫೋಟೋ ಇರಿಸಿ
ನಿಜವಾದ ಪ್ರೀತಿ ಅಥವಾ ನೀವು ಇಷ್ಟಪಟ್ಟ ಪ್ರೀತಿಯನ್ನು ಪಡೆಯಲು ಎರಡು ಸುಂದರ ಪಕ್ಷಿಗಳ ಫೋಟೋಗಳನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದು ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ತರುತ್ತದೆ. ಲವ್ ಬರ್ಡ್ಸ್ ಫೋಟೋ (love birds photo) ಮನೆಯಲ್ಲಿ ಪ್ರೀತಿಯ ಶಕ್ತಿಯನ್ನು ಆಕರ್ಷಿಸುತ್ತದೆ.

Tap to resize

ಮನೆಯಲ್ಲಿ ಬಿಳಿ ದೀಪವನ್ನಿಡಿ 
ಅನೇಕರು ರಾತ್ರಿಯಲ್ಲಿ ಹಳದಿ ಬಲ್ಬ್ ಉರಿಸೋದಕ್ಕೆ ಇಷ್ಟಪಡುತ್ತಾರೆ, ಆದರೆ ಹಾಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಗೆ ಹಾನಿಯಾಗಬಹುದು. ನಿಮ್ಮ ಮನೆಯಲ್ಲಿ ಪ್ರೀತಿ ಮತ್ತು ಸಕಾರಾತ್ಮಕ ಶಕ್ತಿ (Positive Energy) ಇರಬೇಕೆಂದು ಬಯಸಿದ್ರೆ ಬಿಳಿ ಬಣ್ಣದ ಬೆಳಕನ್ನು ಇಟ್ಟುಕೊಳ್ಳಬೇಕು, ಅಂದರೆ, ರಾತ್ರಿಯಲ್ಲಿ ಬಿಳಿ ಬಣ್ಣದ ಬಲ್ಬ್ ಗಳನ್ನು (white bulb) ಮಾತ್ರ ಬೆಳಗಿಸಬೇಕು.

ನೈಸರ್ಗಿಕ ಬೆಳಕನ್ನು ಮನೆಯೊಳಗೆ ಬಿಡಿ
ನೈಸರ್ಗಿಕ ಬೆಳಕು (natural sunlight) ಅಂದರೆ ಸೂರ್ಯನ ಬೆಳಕು ಸಹ ಮನೆಯಲ್ಲಿ ಬಹಳ ಮುಖ್ಯ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಇರಿಸುತ್ತದೆ. ನಿಮ್ಮ ಮನೆಯಲ್ಲಿ ಕಿಟಕಿಗಳು ಇರಬೇಕು. ಅಲ್ಲಿಂದ ಸೂರ್ಯನ ಬೆಳಕು ಕೋಣೆಯನ್ನು ತಲುಪುತ್ತದೆ. ಇದು ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳುತ್ತದೆ.

ಮನೆಯಲ್ಲಿ ರಾಧಾ-ಕೃಷ್ಣರ ಫೋಟೋ ಹಾಕಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ರಾಧಾ-ಕೃಷ್ಣರ (Radha Krishna) ಫೋಟೋವನ್ನು ಇಡೋದ್ರಿಂದ ಜೀವನದಲ್ಲಿ ಎಂದಿಗೂ ಪ್ರೀತಿಗೆ ಕೊರತೆಯಾಗುವುದಿಲ್ಲವಂತೆ. ಇದನ್ನು ಮಾಡೋದರಿಂದ, ಜೀವನದಲ್ಲಿ ಅಪೇಕ್ಷಿತ ಪ್ರೀತಿಯನ್ನು ಸಹ ಸೆಳೆಯಬಹುದು. ಮನೆಯಲ್ಲಿ ರಾಧಾ-ಕೃಷ್ಣರ ಫೋಟೋವನ್ನು ಇಡುವುದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಸಹ ತರುತ್ತದೆ.

ಮನೆಯ ಗೋಡೆಗಳ ಮೇಲೆ ಬಿಳಿ ಅಥವಾ ನೀಲಿ ಬಣ್ಣ ಹಚ್ಚಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಗೋಡೆಗಳನ್ನು ಹಸಿರು, ಕೆಂಪು, ಕೇಸರಿ ಅಥವಾ ಹಳದಿ ಬಣ್ಣದಲ್ಲಿ ಪೈಂಟ್ ಮಾಡಿ. ಇದಲ್ಲದೆ, ನೀವು ಪ್ರೀತಿಸೋರು ನಿಮಗೆ ಸಿಗಬೇಕು ಎಂದು ಬಯಸಿದ್ರೆ, ಮನೆಯ ಗೋಡೆಗಳ ಮೇಲೆ ಎಂದಿಗೂ ನೀಲಿ ಬಣ್ಣವನ್ನು ಹಚ್ಚಬೇಡಿ. ಇದು ನಿಮ್ಮ ಲವ್ ಲೈಫ್ ಮೇಲೆ ಪರಿಣಾಮ ಬೀರುತ್ತದೆ.
 

Latest Videos

click me!