Jealous ಇರೋ ಜನರ ನಕಾರಾತ್ಮಕ ದೃಷ್ಟಿಯಿಂದ ಬಚಾವಾಗಲು ಇಲ್ಲಿವೆ ನೋಡಿ ಎಕ್ಸ್ಪರ್ಟ್ ಅಡ್ವೈಸ್!

First Published | Nov 15, 2022, 5:19 PM IST

ನಾವು ಕಷ್ಟ ಪಡುವಾಗ ನಮ್ಮ ಜೊತೆ ನಿಲ್ಲದೋರು, ನಮಗೆ ಬೆಂಬಲ ನಿಡದೇ ಇದ್ದೋರು, ನಾವು ಸಂತೋಷದಿಂದ ಇದ್ದಾಗ ಅಥವಾ ಯಶಸ್ಸನ್ನು ಗಳಿಸಿದಾಗ ಅಸೂಯೆ ಪಟ್ಟುಕೊಳ್ಳುತ್ತಾರೆ. ಇದರಿಂದ ನಮ್ಮ ಜೀವನದಲ್ಲಿ ನೆಗೆಟಿವಿಟಿ ಹೆಚ್ಚಾಗುತ್ತದೆ. ಇದರಿಂದ ಬಚಾವಾಗಲು ಇಲ್ಲಿದೆ ತಜ್ಞರ ಸಲಹೆ

ಜೀವನದಲ್ಲಿ ಸ್ವಲ್ಪ ಸುಧಾರಣೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣವಿದೆ ಎಂದು ಯೋಚಿಸುವಾಗಲೇ ಕೆಲವು ನಕಾರಾತ್ಮಕ(Negativity) ಘಟನೆಗಳು ಸಂಭವಿಸುತ್ತವೆ ಎಂದು ನಿಮಗೂ ಅನಿಸಿರಬಹುದು. ಜೀವನದಲ್ಲಿ ನಾವು ಅನೇಕ ಅಸೂಯೆ ಪಡುವ ಜನರನ್ನು ಎದುರಿಸಬೇಕಾಗುತ್ತೆ. ಇಂತಹ ಜನರು ನಮ್ಮ ಸುತ್ತಮುತ್ತಲಿನ ಜನರು, ನೆರೆಹೊರೆಯವರು, ಸಂಬಂಧಿಕರು ಅಥವಾ ನಿಮ್ಮ ಸ್ನೇಹಿತರಾಗಿರಬಹುದು. ಈ ಜನರು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮೊಂದಿಗೆ ಸಂಪರ್ಕ ಹೊಂದಿರುತ್ತಾರೆ ಮತ್ತು ಅವರಿಂದ ಸಂಪೂರ್ಣವಾಗಿ ಬೇರ್ಪಡಿಸೋದು ಕಷ್ಟ. ಅಂತಹ ಜನರು ನಿಮ್ಮ ಪ್ರಗತಿಯ ಬಗ್ಗೆ ಅಸೂಯೆ ಪಡುತ್ತಾರೆ ಮತ್ತು ಅವರು ಮನೆಗೆ ಬಂದಾಗ, ಅವರೊಂದಿಗೆ ನಕಾರಾತ್ಮಕ ಶಕ್ತಿಯನ್ನು ಸಹ ತರುತ್ತಾರೆ.

ಇಲ್ಲಿ ತಜ್ಞರು ಹೇಳಿದ ಕೆಲವು ಕ್ರಮಗಳ ಬಗ್ಗೆ ತಿಳಿದುಕೊಳ್ಳಿ, ಅದರ ಸಹಾಯದಿಂದ ನೀವು ಮನೆಯೊಳಗೆ ಪ್ರವೇಶಿಸಿದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು. ಅಲ್ಲದೇ ಯಾರ ಕೆಟ್ಟ ದೃಷ್ಟಿಯೂ ನಿಮ್ಮ‌ ಮೇಲೆ ಬೀಳೋದಿಲ್ಲ.

Tap to resize

ದಾಲ್ಚಿನ್ನಿ(Dalchini) ಪರಿಹಾರ

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು, ಮನೆಯ ಪ್ರವೇಶದ್ವಾರದಲ್ಲಿ ಮತ್ತು ಮನೆಯೊಳಗಿನ ನಾಲ್ಕು ಮೂಲೆಗಳಲ್ಲಿ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿರಿ.  ದಾಲ್ಚಿನ್ನಿ ಪುಡಿಯನ್ನು ನಿಮ್ಮ ಜೇಬಿನಲ್ಲಿ ಅಥವಾ ಬ್ಯಾಗ್‌ನಲ್ಲಿಯೂ ಇಟ್ಟುಕೊಳ್ಳಬಹುದು. ಇದು ದುಷ್ಟ ಕಣ್ಣಿನಿಂದ ರಕ್ಷಿಸುತ್ತೆ.

ಪ್ರವೇಶದ್ವಾರದಲ್ಲಿ ಇದನ್ನು ಮಾಡಿ

ನಕಾರಾತ್ಮಕ ಶಕ್ತಿಯು ಮನೆಯೊಳಗೆ ಬರಲು ಮುಖ್ಯ ಮಾರ್ಗವೆಂದರೆ ಮನೆಯ ಮುಖ್ಯ ದ್ವಾರ. ಇದರಿಂದ ನಿಮ್ಮ ಮನೆಯ ಬಾಗಿಲನ್ನು ರಕ್ಷಿಸಬೇಕು. ದುಷ್ಟ ಶಕ್ತಿಯಿಂದ ನಿಮ್ಮ ಇಡೀ ಮನೆಯನ್ನು ರಕ್ಷಿಸಲು, ಹಾರ್ಸ್ ಶೂ (Horse shoe) ಅಂದರೆ ಕುದುರೆ ಲಾಳವನ್ನು ಪ್ರವೇಶ ದ್ವಾರದಲ್ಲಿ ತಲೆಕೆಳಗಾಗಿ ನೇತುಹಾಕಿ. ಒಬ್ಬ ವ್ಯಕ್ತಿ ಕೆಟ್ಟ ಆಲೋಚನೆಯೊಂದಿಗೆ ಮನೆ ಪ್ರವೇಶಿಸುತ್ತಿದ್ದರೆ, ಇದರಿಂದ ಅವನ ಎಲ್ಲಾ ನಕಾರಾತ್ಮಕತೆ ಬಾಗಿಲ ಬಳಿಯೇ ನಿಲ್ಲುತ್ತೆ.

ಸ್ಫಟಿಕಗಳನ್ನು(Crystal) ಬಳಸಿ

ಟೂರ್ಮಲೈನ್ ಒಂದು ಶಕ್ತಿಯುತ ಸ್ಫಟಿಕವಾಗಿದ್ದು, ಇದು ಜನರ ಅಸೂಯೆ ಮತ್ತು ಕೆಟ್ಟ ಶಕ್ತಿಯನ್ನು ದೂರವಿಡುವ ಸಾಮರ್ಥ್ಯ ಹೊಂದಿದೆ. ಅದನ್ನು ಎಡಗೈಯಲ್ಲಿ ಬ್ರೇಸ್ ಲೆಟ್ ನಂತೆ ಧರಿಸಬಹುದು. ದೇಹದ ಎಡಭಾಗವು ಹೀರಿಕೊಳ್ಳುತ್ತೆ ಮತ್ತು ಈ ಸ್ಫಟಿಕವನ್ನು ಎಡ ಕೈ ಮೇಲೆ ಧರಿಸಿದಾಗ ಅದು ರಕ್ಷಿಸುವ ಸ್ಫಟಿಕವಾಗಿ ಕಾರ್ಯನಿರ್ವಹಿಸುತ್ತೆ.

ಮಂತ್ರವನ್ನು ಪಠಿಸಿ

ಪ್ರತಿದಿನ ಮಂತ್ರವನ್ನು ಪಠಿಸುವ ಅಭ್ಯಾಸ ನಿಮ್ಮ ದೈನಂದಿನ ದಿನಚರಿಯ ಒಂದು ಭಾಗವಾಗಿ ಮಾಡಿಕೊಳ್ಳಿ. ಬೆಳಿಗ್ಗೆ ಮಂತ್ರಗಳನ್ನು ಪಠಿಸಿದಾಗ, ಅದರ ಪರಿಣಾಮವು ನಿಮ್ಮ ಮನೆಯೊಳಗೂ(House) ಇರುತ್ತೆ. ಇಷ್ಟೇ ಅಲ್ಲ, ನಿಮ್ಮ ತೇಜಸ್ಸು ಸಹ ಧನಾತ್ಮಕ ಮತ್ತು ಬಲಶಾಲಿಯಾಗಲು ಪ್ರಾರಂಭಿಸುತ್ತೆ.
 

ಡೋರ್ ಮ್ಯಾಟ್ (Door Mat) ಕೆಳಗೆ ಉಪ್ಪನ್ನು ಇರಿಸಿ

ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸೋದನ್ನು ತಡೆಯಲು ಮತ್ತೊಂದು ಪರಿಹಾರವಿದೆ. ಸಮುದ್ರದ ಉಪ್ಪನ್ನು ತೆಗೆದುಕೊಂಡು ಅದನ್ನು ಗಾಳಿಯಾಡುವ ಚೀಲದಲ್ಲಿ ತುಂಬಿಸಿ. ಈಗ ಈ ಚೀಲವನ್ನು ಮನೆಯ ಡೋರ್ ಮ್ಯಾಟ್ ಕೆಳಗೆ ಇರಿಸಿ. ಇದನ್ನ ಮಾಡಿದ್ರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುವ ಮೊದಲು ಹೊರಗೆ ನಿಲ್ಲುತ್ತೆ. ನೀವು ಪ್ರತಿ ಶನಿವಾರ ಉಪ್ಪನ್ನು ಬದಲಾಯಿಸುತ್ತಲೇ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.

Latest Videos

click me!