ವಾಸ್ತು (Vaastu) ಪ್ರಕಾರ, ನಮ್ಮೆಲ್ಲರ ಮನೆಗಳಲ್ಲಿ ಕೆಲವು ನ್ಯೂನತೆಗಳು ಇರುತ್ತವೆ, ಅವುಗಳನ್ನು ವಾಸ್ತು ದೋಷಗಳೆಂದು ಪರಿಗಣಿಸಲಾಗುತ್ತೆ. ಈ ನ್ಯೂನತೆಗಳಿಂದಾಗಿ, ಮನೆಯಲ್ಲಿ ಆಗಾಗ್ಗೆ ಭಿನ್ನಾಭಿಪ್ರಾಯದ ವಾತಾವರಣ ನಿರ್ಮಾಣವಾಗುತ್ತೆ. ಕುಟುಂಬ ಸದಸ್ಯರ ನಡುವೆ ವಿವಾದ ಉಂಟಾಗುತ್ತೆ. ಗಂಡ ಮತ್ತು ಹೆಂಡತಿ ನಡುವಿನ ಸಂಬಂಧದಲ್ಲಿ ಪ್ರೀತಿಯಿರೋದಿಲ್ಲ. ಅಂತಹ ವಾಸ್ತು ದೋಷಗಳು ಯಾವುವು ಎಂದು ತಿಳಿಯೋಣ.
ಚಿತ್ರಗಳಿಂದಾಗಿ ಉಂಟಾಗುವ ದೋಷ :
ಮನೆಯ ಗೋಡೆಗಳ ಮೇಲೆ ಚಿತ್ರವನ್ನು ಮಾಡಬಹುದು, ಆದರೆ ಚಿತ್ರ ಮತ್ತು ವಿಗ್ರಹಗಳನ್ನು ಅಂಟಿಸಬಾರದು. ಇದು ಭಯಾನಕ ವಾಸ್ತು ದೋಷವನ್ನಾಗಿ ಮಾಡುತ್ತೆ. ಮನೆಯಲ್ಲಿ ದೇವರ ಪ್ರತಿಮೆಯನ್ನು ಇಟ್ಟರೆ, ತುಂಬಾ ದೊಡ್ಡ ಪ್ರತಿಮೆ(Idol) ಇಡಬೇಡಿ. ಯಾವುದೇ ವಿಗ್ರಹ, ಫೋಟೋ ಇಡೋ ಮೊದಲು, ಅವುಗಳ ಬಗ್ಗೆ ತಿಳಿದುಕೊಳ್ಳೋದು ಮುಖ್ಯ.
ಈ ದಿಕ್ಕಿನಲ್ಲಿರೋ ಕೋಣೆಯನ್ನು ತಪ್ಪಿಯೂ ಬಾಡಿಗೆಗೆ(Rent) ನೀಡಬೇಡಿ.
ಮನೆಯ ಈಶಾನ್ಯ ಭಾಗವನ್ನು ಎತ್ತರಿಸಬಾರದು. ಅಲ್ಲದೆ, ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಶೌಚಾಲಯಗಳನ್ನು ನಿರ್ಮಿಸಬಾರದು. ಇದು ಹಣದ ಭಾರಿ ನಷ್ಟಕ್ಕೆ ಕಾರಣವಾಗುತ್ತೆ. ಕುಟುಂಬದಲ್ಲಿ ಅಶುಭ ಘಟನೆಗಳು ಸಂಭವಿಸಬಹುದು.
ಈ ದಿಕ್ಕನ್ನು ಉಳಿದ ದಿಕ್ಕಿನ ಕೆಳಗೆ ಮಾಡೋದು ಮತ್ತು ದೇವರ ಕೋಣೆ (Pooja room)ಈ ದಿಕ್ಕಿನಲ್ಲಿ ಹೊಂದಿರುವುದು ಶುಭವೆಂದು ಪರಿಗಣಿಸಲಾಗಿದೆ. ಒಂದು ಕೋಣೆಯನ್ನು ಉಳಿದುಕೊಳ್ಳಲಿಕ್ಕಾಗಿ ಮಾಡಿದರೆ, ಈಶಾನ್ಯದಲ್ಲಿ ಎಂದಿಗೂ ಕೋಣೆಯನ್ನು ಬಾಡಿಗೆಗೆ ನೀಡಬೇಡಿ.
ಕಿಟಕಿಗಳು(Window) ಒಳಗೆ ತೆರೆಯುವಂತಿರಲಿ
ಮನೆಯ ಬಾಗಿಲನ್ನು ಹೊರಗೆ ತೆರೆಯೋದು ಒಳ್ಳೆಯದು ಎಂದು ಪರಿಗಣಿಸಲಾಗೋದಿಲ್ಲ. ಬಾಗಿಲನ್ನು ಒಳಮುಖವಾಗಿ ತೆರೆಯಬೇಕು. ಅಲ್ಲದೆ, ಬಾಗಿಲು ತೆರೆದಾಗ ಶಬ್ದ ಮಾಡುವುದು ಶುಭವಲ್ಲ.
ಕಿಟಕಿಗಳು ಸಹ ಒಳಗೆ ತೆರೆಯಬೇಕು ಮತ್ತು ಹೊರಗಿನಿಂದ ತೆರೆಯಬಾರದು ಎಂಬುದು ಸಹ ನಿಯಮವಾಗಿದೆ. ಈ ದೋಷದಿಂದಾಗಿ, ಭಯ ಮತ್ತು ಮಾನಸಿಕ ಯಾತನೆ ಉಂಟುಮಾಡುತ್ತೆ. ಮನೆಯ ಮುಖ್ಯಸ್ಥನು ಜೀವನದಲ್ಲಿ ಕಷ್ಟಪಡಬೇಕಾಗುತ್ತೆ.
ಬಾವಲಿಗಳು(Bat) ಬಂದಾಗ ಶುದ್ಧೀಕರಿಸಿಕೊಳ್ಳಿ
ಜೇನುಗೂಡನ್ನು ಮನೆಯಲ್ಲಿ ಸ್ಥಾಪಿಸಬಾರದು. ವಾಸ್ತು ವಿಜ್ಞಾನದ ಪ್ರಕಾರ ವಾಸ್ತು ದೋಷವು 6 ತಿಂಗಳವರೆಗೆ ಉಳಿಯುತ್ತೆ. ಮನೆಗೆ ಬಾವಲಿಗಳ ಆಗಮನದಿಂದಾಗಿ 15 ದಿನಗಳವರೆಗೆ ವಾಸ್ತು ದೋಷವಿರುತ್ತೆ. ಹಾಗಾಗಿ, ಮನೆಯನ್ನು ಶುದ್ಧೀಕರಿಸಬೇಕು. ರಣಹದ್ದು ಮತ್ತು ಕಾಗೆಗಳು ಸಹ ಮನೆಯನ್ನು ಪ್ರವೇಶಿಸುವುದು ಉತ್ತಮವೆಂದು ಪರಿಗಣಿಸಲಾಗೋದಿಲ್ಲ.
ಅಡುಗೆ ಮನೆಯ(Kitchen) ದೋಷಗಳು
ಒಲೆಯು ಬಾಗಿಲಿನ ಮುಂಭಾಗದಿಂದ ಕಾಣುವ ರೀತಿಯಲ್ಲಿ ಅಡುಗೆಮನೆ ಎಂದಿಗೂ ಇರಬಾರದು. ಈ ಕಾರಣದಿಂದಾಗಿ, ನೆಮ್ಮದಿ ಮನೆಯಿಂದ ದೂರ ಹೋಗುತ್ತೆ. ಅಡುಗೆ ಮಾಡುವಾಗ, ಗೃಹಿಣಿಯು ಪೂರ್ವಾಭಿಮುಖವಾಗಿ ಇರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಆರೋಗ್ಯಕ್ಕೆ ಉತ್ತಮ. ಮನೆಯಲ್ಲಿ ಜನರು ಕಡಿಮೆ ಅನಾರೋಗ್ಯದಿಂದ ಬಳಲುತ್ತಾರೆ.
ರಾತ್ರಿಯಲ್ಲಿ ಆಹಾರವನ್ನು(Food) ತಯಾರಿಸಿದ ನಂತರ, ಒಲೆ ಮತ್ತು ಸ್ಲಾಬ್ ಸ್ವಚ್ಛಗೊಳಿಸಬೇಕು. ಎಂಜಿಲು ಪಾತ್ರೆಗಳನ್ನು ರಾತ್ರಿ ಸಿಂಕ್ ನಲ್ಲಿ ಉಳಿಯಲು ಬಿಡಬಾರದು.ಈ ಟಿಪ್ಸ್ ಫಾಲೋ ಮಾಡಿದ್ರೆ ನೆಮ್ಮದಿ ಜೀವನ ನಿಮ್ಮದಾಗಿಸಿಕೊಳ್ಳಬಹುದು .