Vastu for Health: ಈ ವಸ್ತುಗಳನ್ನು ದಿಂಬಿನ ಕೆಳಗಿಟ್ರೆ ಸಿಗುತ್ತೆ ಆರೋಗ್ಯ ಭಾಗ್ಯ!

First Published | Nov 14, 2022, 2:36 PM IST

ಈ ಆಧುನಿಕ ಕಾಲದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲೇ ಸರಿ. ಆರೋಗ್ಯಕ್ಕಾಗಿ ವಾಸ್ತುವಿನಲ್ಲೂ ಕೆಲ ಸಲಹೆಗಳಿವೆ. ಅಂತೆಯೇ ಉತ್ತಮ ಆರೋಗ್ಯಕ್ಕಾಗಿ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಕೆಲ ವಸ್ತುಗಳನ್ನಿಡಲು ವಾಸ್ತು ಸಲಹೆ ನೀಡುತ್ತದೆ. ಆ ವಸ್ತುಗಳು ಯಾವೆಲ್ಲ ನೋಡೋಣ.

ಇಂದಿನ ಒತ್ತಡದ ಜೀವನದಲ್ಲಿ ಮಾನಸಿಕ ಆರೋಗ್ಯ  ಮತ್ತು ಹದಗೆಡುತ್ತಿರುವ ಜೀವನಶೈಲಿಯಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಹಲವು ಆಯುರ್ವೇದ ಮತ್ತು ಅಲೋಪತಿ ವಿಧಾನಗಳು, ವ್ಯಾಯಾಮ, ಯೋಗಾಸನಗಳು ಇತ್ಯಾದಿಗಳಿವೆ. ಆದರೆ ಇಂದಿನ ಸ್ಥಿತಿ ಹೇಗಿದೆ ಎಂದರೆ ಆರೋಗ್ಯಕ್ಕಾಗಿ ಎಷ್ಟು ಕಾಳಜಿ ವಹಿಸಿದರೂ ಸಾಲದು, ಎಷ್ಟು ಹೊಸ ದಾರಿಗಳನ್ನು ಕಂಡುಕೊಂಡರೂ ಸಾಲದು. ಇಂಥ ಸಂದರ್ಭದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ವಾಸ್ತುವಿನ ಈ ವಿಶೇಷ ಮಾರ್ಗಗಳನ್ನು ಹೇಳಲಿದ್ದೇವೆ. ಇದರಂತೆ, ದಿಂಬಿನ ಕೆಳಗೆ ಕೆಲ ವಸ್ತುಗಳನ್ನಿಡುವುದರಿಂದ ಉತ್ತಮ ನಿದ್ರೆಯ ಜೊತೆಗೆ ಸದೃಢ ಆರೋಗ್ಯವೂ ನಮ್ಮ ಪಾಲಾಗುತ್ತದೆ. ಹಾಗಿದ್ದರೆ, ಅಂಥ ಆರೋಗ್ಯವರ್ಧಕ ವಸ್ತುಗಳು ಯಾವೆಲ್ಲ ನೋಡೋಣ. 

ಹೂವುಗಳು(Flowers)
ಮಲಗುವ ಮುನ್ನ ದಿಂಬಿನ ಕೆಳಗೆ ಪರಿಮಳಯುಕ್ತ ಹೂವುಗಳನ್ನು ಇಡುವುದರಿಂದ ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ.

Latest Videos


ನಾಣ್ಯಗಳು(Coins)
ಮಲಗುವ ಸಮಯದಲ್ಲಿ ದಿಂಬಿನ ಕೆಳಗೆ ಪೂರ್ವ ದಿಕ್ಕಿನಲ್ಲಿ ಒಂದು ನಾಣ್ಯವನ್ನು ಇಟ್ಟುಕೊಳ್ಳುವುದು ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ.

ಚಾಕು(Knife)
ಒತ್ತಡದಿಂದಾಗಿ ನಿದ್ರೆಯಲ್ಲಿ ಭಯಾನಕ ಕನಸುಗಳು ಬರುವುದು ಸಹಜ. ಈ ಸಂದರ್ಭದಲ್ಲಿ, ಚಾಕುವನ್ನು ದಿಂಬಿನ ಕೆಳಗೆ ಇರಿಸಿ ಮತ್ತು ಮಲಗಿಕೊಳ್ಳಿ. ಇದರಿಂದ ದುಃಸ್ವಪ್ನಗಳು ಕಡಿಮೆಯಾಗುತ್ತವೆ.

ಬೆಳ್ಳುಳ್ಳಿ(Garlic)
ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಸಕಾರಾತ್ಮಕ ಮನಸ್ಥಿತಿ ಮತ್ತು ಆಳವಾದ ನಿದ್ರೆ ಬರುತ್ತದೆ.

ಹಸಿರು ಮೆಣಸಿನಕಾಯಿ ಅಥವಾ ಏಲಕ್ಕಿ(Green Cardomom)
ಹಸಿರು ಏಲಕ್ಕಿ ಅಥವಾ ಹಸಿರು ಮೆಣಸಿನಕಾಯಿಯನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ನಿದ್ರೆ ಚೆನ್ನಾಗಿ ಬರುವ ಜೊತೆಗೆ ಒತ್ತಡ ನಿವಾರಣೆಯಾಗುತ್ತದೆ.

ಫೆನ್ನೆಲ್(Fennel)
ಸೋಂಪಿನ ಕಾಳನ್ನು ದಿಂಬಿನ ಕೆಳಗೆ ಇಡುವುದರಿಂದ ರಾಹು ದೋಷವನ್ನು ತೆಗೆದುಹಾಕುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
 

ಭಗವದ್ಗೀತೆ(Bhagavadgita)
ಭಗವದ್ಗೀತೆ ಒಂದು ಪವಿತ್ರ ಗ್ರಂಥ. ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಧನಾತ್ಮಕತೆ ಬರುತ್ತದೆ ಮತ್ತು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ನಕಾರಾತ್ಮಕತೆಯನ್ನು ತೊಡೆದುಹಾಕುವುದು ಉತ್ತಮ ನಿದ್ರೆಯನ್ನು ತರುತ್ತದೆ.
 

ಗಾಜಿನ ನೀರು(A glass of water)
ರಾತ್ರಿ ಮಲಗುವ ಮೊದಲು ನೀರಿನ ಮಡಕೆಯನ್ನು ಮಂಚದ ಪಕ್ಕ ನೆಲದ ಮೇಲೆ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಆರೋಗ್ಯವು ಅಖಂಡವಾಗಿರುತ್ತದೆ.

click me!