ಈಶಾನ್ಯ ದಿಕ್ಕಿನಲ್ಲಿ ವಾಸ್ತು ದೋಷ
ನೀವು ಕಷ್ಟಪಟ್ಟು ದುಡಿಯುತ್ತಿದ್ದರೂ, ಫಲ ಸಿಗುತ್ತಿಲ್ಲ ಅಥವಾ ಉದ್ಯೋಗ-ವ್ಯವಹಾರದಲ್ಲಿ ಯಾವುದೇ ಯಶಸ್ಸು ಸಿಗದಿದ್ದರೆ, ನೀವು ಹಾರುವ ಹಕ್ಕಿಯ (Flying Bird) ಚಿತ್ರ, ಉದಯಿಸುತ್ತಿರುವ ಸೂರ್ಯನ ಚಿತ್ರ ಇತ್ಯಾದಿಗಳನ್ನು ಮನೆಯ ಈಶಾನ್ಯ ಮೂಲೆಯಲ್ಲಿಡಿ. ಈ ಚಿತ್ರವು ಭರವಸೆ ನೀಡುತ್ತದೆ. ಇದು ನಿಮಗೆ ಆರ್ಥಿಕವಾಗಿ ಲಾಭ ಆಗುವಂತೆ ಮಾಡುತ್ತೆ.
ಅಡುಗೆಮನೆಯ(Kitchen) ವಾಸ್ತು ದೋಷ
ಮನೆಯ ಪ್ರತಿಯೊಂದು ಮೂಲೆಯಲ್ಲಿರುವ ವಸ್ತುಗಳು ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೆ ಪರಿಣಾಮ ಬೀರುತ್ತವೆ. ವಾಸ್ತು ಪ್ರಕಾರ ಅಡುಗೆಮನೆ ಮನೆಯ ಮುಖ್ಯ ಭಾಗ. ವಾಸ್ತುವಿನ ಪ್ರಕಾರ, ಅಡುಗೆಮನೆಯಲ್ಲಿರುವ ಫ್ರಿಡ್ಜ್, ಸ್ಟವ್ , ಗ್ಯಾಸ್ ಇತ್ಯಾದಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಡೋದು ಬಹಳ ಮುಖ್ಯ.
ಅಡುಗೆ ಮನೆಯ ವಸ್ತುಗಳನ್ನು ನೀವು ಅವುಗಳನ್ನು ದಿಕ್ಕಿನ ಪ್ರಕಾರ ಇಡಲು ಸಾಧ್ಯವಾಗದಿದ್ದರೆ, ವಾಸ್ತುವಿನ ಪ್ರಕಾರ, ಮನೆಯ ದೋಷ ತೆಗೆದುಹಾಕಲು ಅಡುಗೆಮನೆಯ ಅಗ್ನಿ ಮೂಲೆಯಲ್ಲಿ (ಪೂರ್ವ-ದಕ್ಷಿಣ ಮಧ್ಯ) ಕೆಂಪು ಬಣ್ಣದ ಬಲ್ಬ್(Bulb) ಇರಿಸಿ ಮತ್ತು ಅದನ್ನು ಯಾವಾಗಲೂ ಉರಿಯಲು ಬಿಡಿ. ಇದು ವಾಸ್ತು ದೋಷ ನಿವಾರಿಸುತ್ತೆ.
ಪಶ್ಚಿಮ ದಿಕ್ಕಿನಲ್ಲಿ ವಾಸ್ತು ದೋಷ
ವಾಸ್ತು ಪ್ರಕಾರ, ಮನೆಯ ಪಶ್ಚಿಮ ದಿಕ್ಕಿನಲ್ಲಿ ವಾಸ್ತು ದೋಷವಿದ್ದರೆ, ಈ ದಿಕ್ಕಿನಲ್ಲಿ ಶನಿ ಯಂತ್ರ(Shani yantra) ಸ್ಥಾಪಿಸಿ. ಇದನ್ನು ಮಾಡೋದ್ರಿಂದ, ಈ ದಿಕ್ಕಿನ ವಾಸ್ತು ದೋಷ ನಿವಾರಿಸಿ. ಇದು ಮನೆಗೆ ಒಳಿತನ್ನು ಮಾಡುತ್ತೆ.
ವಾಯುವ್ಯ ದಿಕ್ಕಿನಲ್ಲಿ ವಾಸ್ತು ದೋಷ
ಉತ್ತರ -ಪಶ್ಚಿಮ ದಿಕ್ಕಿನಲ್ಲಿ ಅಂದರೆ ವಾಯುವ್ಯ ದಿಕ್ಕಿನಲ್ಲಿ ವಾಸ್ತು ದೋಷವಿದ್ದರೆ, ಈ ದಿಕ್ಕಿನಲ್ಲಿ ಪವನಪುತ್ರ ಹನುಮಂತನ (Hanuman) ಚಿತ್ರ ಹಾಕಿ. ಇದರೊಂದಿಗೆ, ಹನುಮಾನ್ ಚಾಲೀಸಾ ಪಠಿಸಿ. ಇದರಿಂದ ಲಾಭವಾಗುತ್ತೆ.
ವಾಸ್ತು ಪ್ರಕಾರ, ವಾಯುವ್ಯ ದಿಕ್ಕಿನಲ್ಲಿ ಹನುಮಂತನ ಚಿತ್ರ ಇಲ್ಲದೇ ಇದ್ದರೆ, ನೀವು ತಾಜಾ ಹೂವುಗಳ ಗುಚ್ಛ ಅಥವಾ ಅಕ್ವೇರಿಯಂ(Aquarium) ಇಡಬಹುದು. ಇದು ಜೀವನದ ಮೇಲೆ ಉತ್ತಮ ಪರಿಣಾಮ ಬೀರುತ್ತೆ. ಮನೆಯಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತೆ.