ವಾಸ್ತುವಿಗೆ ಸಂಬಂಧಿಸಿದ ಪುಸ್ತಕಗಳು ಮನೆಯ ಪ್ರತಿಯೊಂದು ಭಾಗದ ನಿಯಮಗಳನ್ನು ಉಲ್ಲೇಖಿಸುತ್ತವೆ. ಮನೆಯ ಛಾವಣಿ ಹಾಗೂ ಬಾಲ್ಕನಿ ಕೂಡಾ ವಾಸ್ತುವಿನಲ್ಲಿ ಪ್ರಾಮುಖ್ಯತೆ ಪಡೆಯುತ್ತವೆ. ಛಾವಣಿಯ ಮೇಲೆ ಏನಿಡುತ್ತೇವೆ, ಏನಿಡುವುದಿಲ್ಲ ಎಂಬುದು ಕೂಡಾ ಇಡೀ ಕುಟುಂಬದ ಆರ್ಥಿಕ ಸ್ಥಿತಿ, ಶಾಂತಿ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ.
ಛಾವಣಿಯ ಮೇಲೆ ಇರಿಸಲಾದ ಜಂಕ್(Junk) ಇಡೀ ಮನೆಯನ್ನು ನಕಾರಾತ್ಮಕತೆಯಿಂದ ತುಂಬುತ್ತದೆ. ಈ ಅವ್ಯವಸ್ಥೆ ಲಕ್ಷ್ಮಿ ಮಾತೆಯನ್ನು ಕೆಣಕುತ್ತದೆ ಮತ್ತು ಅನೇಕ ತೊಂದರೆಗಳನ್ನು ಸೃಷ್ಟಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಛಾವಣಿ ಮತ್ತು ಬಾಲ್ಕನಿಯಲ್ಲಿ ಕೆಲವು ವಸ್ತುಗಳನ್ನು ಯಾವಾಗಲೂ ತಪ್ಪಿಸಬೇಕು. ಇಲ್ಲದಿದ್ದಲ್ಲಿ ಇವು ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಮನೆ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಯಾವಾಗಲೂ ಕಡಿಮೆ ಸಾಮಾನುಗಳನ್ನು ಮನೆಯಲ್ಲಿ ಇರಿಸಿ. ಯಾವಾಗಾದರೂ ಬೇಕಾಗಬಹುದು ಎಂದು ಭಾವಿಸಿ ಮನೆಯಲ್ಲಿ ಜಂಕ್ ಅನ್ನು ಸಂಗ್ರಹಿಸಬೇಡಿ.
37
ಅಟ್ಟ ಎಂದ ಕೂಡಲೇ ಬೇಡದ ವಸ್ತುಗಳನ್ನೆಲ್ಲ ಅಲ್ಲಿ ಗಂಟು ಕಟ್ಟಿ ಎಸೆಯಲಾಗುತ್ತದೆ. ಆ ಕತ್ತಲ ಕೂಪವೊಂದು ಗುಜರಿ ಅಂಗಡಿಯಂತಾಗಿರುತ್ತದೆ. ಅದನ್ನು ಮತ್ತೆ ವರ್ಷದಲ್ಲಿ ಎಂದಿಗೂ ಗಮನಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಆದರೆ, ಇದರಿಂದ ಲಕ್ಷ್ಮೀ ದೇವಿ ಮನೆಯಲ್ಲಿ ನೆಲೆಸಲು ಹಿಂದೇಟು ಹಾಕುತ್ತಾಳೆ. ಇದು ಮನೆಯ ನಕಾರಾತ್ಮಕತೆ ಹೆಚ್ಚಿಸುತ್ತದೆ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ.
47
ಧೂಳು, ಮರದ ಎಲೆ(Leaves)ಗಳು, ಕಲ್ಲು ಛಾವಣಿಯ ಮೇಲೆ ಸಂಗ್ರಹವಾಗಲು ಬಿಡಬೇಡಿ. ಯಾವಾಗಲೂ ಛಾವಣಿಯನ್ನು ಸ್ವಚ್ಛವಾಗಿಡಿ. ಲಕ್ಷ್ಮಿ ದೇವಿ ಅನುಗ್ರಹ ಸದಾ ಮನೆ ಮೇಲೆ ಇರಲು ಮನೆಯನ್ನು ಸದಾ ಕ್ಲೀನ್ ಆಗಿಟ್ಟುಕೊಳ್ಳಿ.
57
ಮನೆಯ ಛಾವಣಿಯ ಮೇಲೆ ಬಿದಿರು, ಪೊರಕೆ, ತುಕ್ಕು ಹಿಡಿದ ಸರಕು, ಮುರಿದ ಮರದ ಅಥವಾ ಉಪಯೋಗಿಸಲಾಗದ ಪೀಠೋಪಕರಣಗಳನ್ನು(Old Furniture) ಇಡಬೇಡಿ. ಇದಲ್ಲದೆ ಹಳೆಯ ಪಾತ್ರೆಗಳು, ಇನ್ನಿತರ ವಸ್ತುಗಳನ್ನು ಇಡಬೇಡಿ. ಈ ವಸ್ತುಗಳನ್ನು ಛಾವಣಿಯ ಮೇಲೆ ಇಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ.
67
ಛಾವಣಿಯ ಮೇಲೆ ಬಟ್ಟೆ(Clothes)ಗಳನ್ನು ಒಣಗಿಸಲು ಹಗ್ಗವನ್ನು ಕಟ್ಟುವುದು ಸರಿ, ಆದರೆ ಹಗ್ಗವನ್ನು ಹಾಗೆ ಇಡುವುದು ಒಳ್ಳೆಯದಲ್ಲ. ನಿಮ್ಮ ಮನೆಯ ಛಾವಣಿಯ ಮೇಲೆ ಹಗ್ಗವನ್ನು ಅಥವಾ ಗಂಟನ್ನು ಸಹ ಇರಿಸಿದರೆ, ಅದನ್ನು ತಕ್ಷಣ ತೆಗೆಯಿರಿ. ಇಲ್ಲವಾದರೆ ಸಂಕಷ್ಟ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
77
ಹಳೆಯ ಪುಸ್ತಕಗಳು(Books), ಪತ್ರಿಕೆಗಳ ರಾಶಿಗಳನ್ನು ಛಾವಣಿಯ ಮೇಲೂ ಹಾಕುವುದು ಸರಿಯಲ್ಲ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಮತ್ತು ಸರಸ್ವತಿ ಮಾತೆಯನ್ನು ನೋಯಿಸಿದಂತೆ, ಆದುದರಿಂದ ಹಳೆಯ ಪುಸ್ತಕಗಳನ್ನು ಸರಿಯಾಗಿ ಜೋಡಿಸಿಡಿ. ಯಾವುದೇ ಕಾರಣಕ್ಕೂ ಅದನ್ನು ಮೂಲೆಯಲ್ಲಿ ರಾಶಿ ಹಾಕಬೇಡಿ