ಮನೆಯನ್ನು ಕಟ್ಟುವಾಗ ಯಾವುದೇ ಸಮಸ್ಯೆಗಳು (problems)ಬಾರದಂತೆ ತಡೆಯಲು, ಯಾವ ಭೂಮಿಯನ್ನು ಖರೀದಿಸುವಿರೋ ಅಲ್ಲಿನ ವಾಸ್ತುವನ್ನು ನೀವು ತಿಳಿದಿರಬೇಕು. ಇಲ್ಲಿದೆ ಭೂಮಿಯನ್ನು ಖರೀದಿಸುವಾಗ ನೀವು ತಿಳಿದಿರಬೇಕಾದ ಪ್ರಮುಖ ಅಂಶಗಳು. ಅವುಗಳನ್ನು ತಿಳಿದು ಮನೆ ನಿರ್ಮಿಸಿದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ.
ವಾಸ್ತು ಶಾಸ್ತ್ರದ (vastu)ಪ್ರಕಾರ, ಚೌಕಾಕಾರದ ಭೂಮಿ, ಅಂದರೆ, ನಾಲ್ಕು ಕೋನಗಳು ಮತ್ತು ಭೂಮಿಯ ಉದ್ದ ಮತ್ತು ಅಗಲಗಳು ಒಂದೇ ಆಗಿದ್ದರೆ, ಇದನ್ನು ಚೌಕಾಕಾರದ ಭೂಮಿ ಎಂದು ಕರೆಯಲಾಗುತ್ತದೆ. ಈ ಭೂಮಿಯಲ್ಲಿ ಬಹಳ ಸುಂದರವಾದ ಮನೆಯನ್ನು ನಿರ್ಮಿಸಬಹುದು. ಇಲ್ಲಿ ಮನೆ ನಿರ್ಮಿಸಿದರೆ ಎಲ್ಲವೂ ಒಳಿತಾಗುತ್ತದೆ ಎನ್ನಲಾಗುತ್ತದೆ.
ಚೌಕಾಕಾರದ ಭೂಮಿಯಲ್ಲಿ ಮಹಾಲಕ್ಷ್ಮಿ ಮಾತೆಯ ನಿವಾಸ ಸದಾ ಇರುವುದರಿಂದ ಇಂತಹ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸುವುದು ದುಃಖ ಮತ್ತು ಬಡತನವನ್ನು ನಾಶಪಡಿಸುತ್ತದೆ ಎಂದು ಗುರುತಿಸಲಾಗಿದೆ. ವ್ಯಾಪಾರದ ದೃಷ್ಟಿಯಿಂದಲೂ ಈ ಭೂಮಿಯನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ನೆಲವು ವೃತ್ತಾಕಾರ ಅಥವಾ ದುಂಡನೆಯ ಗಾತ್ರದಲ್ಲಿದ್ದರೆ ಇಂತಹ ಭೂಮಿಯಲ್ಲಿ ಮನೆಗಳ ನಿರ್ಮಾಣದಿಂದ ಜನರಿಗೆ ಸಂಪತ್ತು ಲಾಭವಾಗುತ್ತದೆ. ಇಂತಹ ಭೂಮಿ ಸಂಪತ್ತನ್ನು ಆಕರ್ಷಿಸುತ್ತದೆ. ಇಲ್ಲಿ ಮನೆ ನಿರ್ಮಿಸುವುದರಿಂದ ಶ್ರೀಮಂತಿಕೆ ಹೆಚ್ಚುತ್ತದೆ.
ವೃತ್ತಾಕಾರದ ಜಾಗದಲ್ಲಿ ಮನೆಯನ್ನು ನಿರ್ಮಿಸುವುದರಿಂದ ಇದು ಆದಾಯದ ಅನೇಕ ಮಾರ್ಗಗಳನ್ನು ಸಹ ತೆರೆಯುತ್ತದೆ. ಆದ್ದರಿಂದಲೇ, ಅಂತಹ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ನಿಮ್ಮ ಕನಸುಗಳನ್ನು (dreams) ಎದುರು ನೋಡುವಂತೆ ಮಾಡಲು ನೀವು ಅದನ್ನು ತ್ವರಿತವಾಗಿ ಆಯ್ಕೆ ಮಾಡಬಹುದು.
ತಪ್ಪಾಗಿ ಇಂತಹ ಜಾಗದ ಮೇಲೆ ಮನೆಯನ್ನು ನಿರ್ಮಿಸಬೇಡಿ
ವಾಸ್ತುಶಿಲ್ಪದ ಪ್ರಕಾರ, ಚಕ್ರಾಕಾರದಲ್ಲಿದ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸುವುದನ್ನು ನೀವು ತಪ್ಪಿಸಬೇಕು. ಒಂದು ಚಕ್ರದ ಆಕಾರದ ಭೂಮಿ ಮಾಲೀಕರಿಗೆ ತುಂಬಾ ಅಶುಭ. ಇಂತಹ ಭೂಮಿಯಲ್ಲಿ ಮನೆ ನಿರ್ಮಾಣ ದಿಂದ ಖರ್ಚು ಹೆಚ್ಚುತ್ತದೆ. ಮನೆಯಲ್ಲಿ ವಾಸಿಸುವ ಜನರ ಜೀವನದಲ್ಲಿ ರೋಗಗಳು (health problem)ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಣದ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಮನೆ ಕಟ್ಟಬೇಡಿ.
ಈ ಭೂಮಿಯಲ್ಲೂ ಮನೆಗಳನ್ನು ನಿರ್ಮಿಸಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಹಿಂದಿನ ಭಾಗ ತೆರೆದಿರುವ ಮತ್ತು ಮುಂದಿನ ಭಾಗ ಕಿರಿದಾಗಿರುವ ಭೂಮಿಯ ಬಳಕೆ ಅಮಂಗಳಕರ. ಇಂತಹ ಮನೆಯಲ್ಲಿರುವವರು ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಅಂತಹ ಭೂಮಿಯಲ್ಲಿ ಎಂದಿಗೂ ಮನೆ ನಿರ್ಮಿಸಬೇಡಿ. ಇಂತಹ ಭೂಮಿಯನ್ನು ಅವಾಯ್ಡ್ ಮಾಡುವುದು ಉತ್ತಮ.