ಹಣ ಹೀಗೆ ಎಣಿಸೋ ಅಭ್ಯಾಸ ನಿಮಗೂ ಇದೆಯೇ? ದರಿದ್ರ ಲಕ್ಷ್ಮೀ ಜೊತೆಯಾಗ್ತಾಳೆ, ಜೋಕೆ!

First Published | May 21, 2022, 11:34 AM IST

ಭಗವಾನ್ ವಿಷ್ಣುವಿನ ಪತ್ನಿಯಾದ ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯುತ್ತೇವೆ, ಅವಳ ಆರಾಧನೆಯು ಸಂಪತ್ತು ಮತ್ತು ವೈಭವವನ್ನು ನೀಡುತ್ತೆ ಎನ್ನಲಾಗುತ್ತೆ . ತಾಯಿ ಲಕ್ಷ್ಮಿ ವಾಸಿಸುವ ಮನೆಯಲ್ಲಿ, ಎಂದಿಗೂ ಬಡತನ ಬರೋದಿಲ್ಲ. ಆದರೆ ತಾಯಿ ಲಕ್ಷ್ಮಿ ಕೋಪಿಸಿಕೊಂಡು ಹೋದರೆ, ಆಗ ಬಡತನವು ಮನೆಯೊಳಗೆ ಬರುವುದನ್ನು ತಡೆಯಲಾಗುವುದಿಲ್ಲ. ಅದು ಸಂಭವಿಸಿದಾಗ, ತಪ್ಪು ಎಲ್ಲಿ ನಡೆಯಿತು ಎಂದು ನಮಗೆ ತಿಳಿಯುವುದಿಲ್ಲ. 

ಕಷ್ಟಪಟ್ಟು ದುಡಿಯುತ್ತಿದ್ದರೂ, ಹಣ ಬರೋದಿಲ್ಲ ಮತ್ತು ಅದು ಬಂದಾಗ,  ಕೈಯಲ್ಲಿ ಉಳಿಯುವುದಿಲ್ಲ, ಅದು ಖರ್ಚಾಗುತ್ತದೆ. ಇದೆಲ್ಲದರ ಹಿಂದೆ ಯಾವುದೇ ದೊಡ್ಡ ಕಾರಣವಿಲ್ಲ, ಒಂದೇ ಒಂದು ವಿಷಯವೆಂದರೆ ನಾವು ಹಗಲಿನಲ್ಲಿ ಹಣದಿಂದ ಏನನ್ನಾದರೂ ಮಾಡುತ್ತಲೇ ಇರುತ್ತೇವೆ, ಅದರ ಬಗ್ಗೆ ನಮಗೇ ತಿಳಿದಿರುವುದಿಲ್ಲ ಮತ್ತು ಹಗಲಿನಲ್ಲಿ ಮಾಡೋ ಸಣ್ಣ ತಪ್ಪುಗಳಿಂದ ಲಕ್ಷ್ಮಿ(Goddess Lakshmi) ಕೋಪಗೊಂಡು ಹೊರಟುಹೋಗುತ್ತಾಳೆ.

ನಿಮ್ಮ ಪರ್ಸ್(Purse) ಅಥವಾ ಬ್ಯಾಗ್ ನಲ್ಲಿ ನೋಟುಗಳು ಮತ್ತು ಹಣ ಇಡುವುದರ ಜೊತೆಗೆ ಆಹಾರ ಪದಾರ್ಥಗಳನ್ನು ಎಂದಿಗೂ ಇಡಬೇಡಿ. ಹಾಗೆ ಮಾಡುವುದು ಹಣಕ್ಕೆ ಮಾಡಿದ ಅಪಮಾನ. ಇದರಿಂದ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ, ಮತ್ತು ನಿಮ್ಮಿಂದ ದೂರ ಹೋಗುತ್ತಾಳೆ. 

Tap to resize

ನೀವು ಬಡವನಿಗೆ  ಹಣವನ್ನು(Money) ನೀಡಿದಾಗಲೆಲ್ಲಾ, ಅದನ್ನು ಎಂದಿಗೂ ಎಸೆಯಬೇಡಿ. ಹಾಗೆ ಮಾಡುವುದು ಲಕ್ಷ್ಮಿಯನ್ನು ಅವಮಾನಿಸಿದಂತೆ, ಆದ್ದರಿಂದ ಯಾವಾಗಲೂ ಕೈಯಲ್ಲಿ ಹಣವನ್ನು ಅಥವಾ ನೋಟುಗಳನ್ನು ಆರಾಮವಾಗಿ ನೀಡಿ. ಇದರಿಂದ ಲಕ್ಷ್ಮೀ ಸಂತಸಗೊಳ್ಳುತ್ತಾರೆ. 

ಹೆಚ್ಚಿನ ಜನರು ತಮ್ಮ ಕೈಗಳಲ್ಲಿ ಎಂಜಲು ತಾಗಿಸುವ ಮೂಲಕ ನೋಟನ್ನು ಪದೇ ಪದೇ ಎಣಿಸುತ್ತಾರೆ, ಅದು ಸರಿಯಲ್ಲ. ಹೀಗೆ ಮಾಡುವುದರಿಂದ, ತಾಯಿ ಲಕ್ಷ್ಮಿಗೆ ಅವಮಾನವಾಗುತ್ತದೆ. ನೀವು ನೋಟುಗಳನ್ನು ಎಣಿಸುವಾಗ ನೀರು ಅಥವಾ ಪೌಡರ್ ಅನ್ನು(Powder) ಬಳಸಬಹುದು.

ನಿಮ್ಮ ಮಲಗುವ ಹಾಸಿಗೆಯ(Bed) ಬದಿಯಲ್ಲಿ ಎಂದಿಗೂ ಹಣವನ್ನು ಇಡಬೇಡಿ. ಹಾಗೆ ಮಾಡುವುದು ಲಕ್ಷ್ಮಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯ ಜಾಗ ಅಥವಾ ಗೋಮತಿ ಚಕ್ರದೊಂದಿಗೆ ಹಣವನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ, ಬೀರುವಿನಲ್ಲಿ ಅಥವಾ ಸುರಕ್ಷಿತವಾಗಿ ಇರಿಸಿ.

ಹಿಂದೂ (Hindu)ಧರ್ಮದ ನಂಬಿಕೆಗಳ ಪ್ರಕಾರ,  ತಾಯಿ ಲಕ್ಷ್ಮಿಯು ಹಣದಲ್ಲಿ ವಾಸಿಸುತ್ತಾಳೆ, ಆದ್ದರಿಂದ ನೆಲದ ಮೇಲೆ ಬಿದ್ದ ಹಣವನ್ನು ಎತ್ತುವ ಮೊದಲು ಹಣೆಯ ಮೇಲೆ ಮುಟ್ಟಿ, ನಮಸ್ಕರಿಸಿ ನಂತರ ಉಪಯೋಗಿಸಬೇಕು. ಇದರಿಂದ ಲಕ್ಷ್ಮೀ ದೇವಿ ಸಂತಸಗೊಳ್ಳುತ್ತಾಳೆ. 

Latest Videos

click me!