ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಯಾವತ್ತೂ ಇಡಲೇಬೇಡಿ

First Published Jun 7, 2022, 6:37 PM IST

ವಾಸ್ತು ಶಾಸ್ತ್ರದಲ್ಲಿ (vastu shashtra) ಪ್ರತಿಯೊಂದು ವಸ್ತುಗಳಿಗೆ ಸಂಬಂಧಿಸಿದಂತೆ ವಾಸ್ತು ನಿಯಮಗಳನ್ನು ಹೊಂದಿದೆ. ಇದರಲ್ಲಿ ಕಸದ ಬುಟ್ಟಿಗಳಿಗೆ ಸಂಬಂಧಿಸಿದಂತೆ ಸಹ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳು ಯಾವ ದಿಕ್ಕಿನಲ್ಲಿ ಕಸದ ಬುಟ್ಟಿಗಳನ್ನು ಇಡಬಾರದು ಎಂದು ಹೇಳುತ್ತವೆ. ಏಕೆಂದರೆ ಈ ದಿಕ್ಕುಗಳಲ್ಲಿ ಕಸದ ಬುಟ್ಟಿಗಳನ್ನು (dustbin) ಇರಿಸುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
 

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಸರಿಯಾದ ದಿಕ್ಕಿನಲ್ಲಿರುವುದು ಬಹಳ ಮುಖ್ಯ. ಏಕೆಂದರೆ ತಪ್ಪು ದಿಕ್ಕಿನಲ್ಲಿ ಇರಿಸುವುದರಿಂದ, ನಕಾರಾತ್ಮಕ ಶಕ್ತಿಯು (negative energy) ಹೆಚ್ಚು ಆವರಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವಸ್ತುಗಳಲ್ಲಿ ಒಂದು ಕಸದ ಬುಟ್ಟಿ. 

 ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಕಸದ ಬುಟ್ಟಿಯು ಸರಿಯಾದ ದಿಕ್ಕಿನಲ್ಲಿರಬೇಕು, ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ. ವಾಸ್ತು ಪ್ರಕಾರ, ಯಾವ ಸ್ಥಳಗಳಲ್ಲಿ ಕಸದ ಬುಟ್ಟಿಗಳನ್ನು ಇಡಬಾರದು ಮತ್ತು ಅದನ್ನು ಯಾವ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಈ ದಿಕ್ಕುಗಳಲ್ಲಿ ಕಸದ ಬುಟ್ಟಿ ಇಡಬೇಡಿ.

ಈಶಾನ್ಯ ದಿಕ್ಕು
ಈಶಾನ್ಯ ದಿಕ್ಕು ಅತ್ಯಂತ ಧನಾತ್ಮಕ ಶಕ್ತಿ (positive energy) ನಿರ್ಮಾಣವಾಗುವ ಸ್ಥಳವಾಗಿದೆ. ಈ ದಿಕ್ಕನ್ನು ಭಗವಾನ್ ಕುಬೇರನು ಆಳುತ್ತಾನೆ ಮತ್ತು ಶಿವನು ಸಹ ವಾಸಿಸುತ್ತಾನೆ. ಆದ್ದರಿಂದ, ಡಸ್ಟ್ ಬಿನ್ ನ್ನು ಎಂದಿಗೂ ಈ ದಿಕ್ಕಿನಲ್ಲಿ ಇಡಬಾರದು. ಇದು ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಂಕಷ್ಟಗಳು, ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
 

 ಆಗ್ನೇಯ ದಿಕ್ಕು

ಆಗ್ನೇಯ ದಿಕ್ಕನ್ನು ಅಂದರೆ ಆಗ್ನೇಯ ಕೋನವನ್ನು ಸಹ ಬಹಳ ಶುಭ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಬೆಂಕಿಗೆ (fire) ಸಂಬಂಧಿಸಿದೆ. ಕಸದ ಬುಟ್ಟಿಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿ ಹಣ ಹೆಚ್ಚಾಗಿ ಖರ್ಚಾಗಲು ಆರಂಭವಾಗುತ್ತೆ. ನಿಮ್ಮ ಬಳಿ ಹಣ ಉಳಿಯೋದೆ ಇಲ್ಲ.

 ಪೂರ್ವ ದಿಕ್ಕು

ವಾಸ್ತುವಿನಲ್ಲಿ ಪೂರ್ವ ದಿಕ್ಕಿಗೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಸೂರ್ಯ ದೇವರು ಈ ದಿಕ್ಕನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ, ಈ ದಿಕ್ಕಿನಲ್ಲಿ ಯಾವುದೇ ಕಸದ ಬುಟ್ಟಿಗಳನ್ನು ಇಡಬೇಡಿ. ಹೀಗೆ ಮಾಡೊದ್ರಿಂದ ನಿಮಗೆ ಹೆಚ್ಚು ಒತ್ತಡ (stress) ಉಂಟಾಗಬಹುದು, ಅಲ್ಲದೇ ಏಕಾಂಗಿಯಾಗಿರಲು ಇಷ್ಟಪಡುತ್ತೀರಿ. ಇದರೊಂದಿಗೆ, ಪ್ರತಿಯೊಂದು ಕೆಲಸಕ್ಕೂ ಅಡ್ಡಿಯಾಗುತ್ತದೆ.

 ದಕ್ಷಿಣ ದಿಕ್ಕು

ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಕಸದ ಬುಟ್ಟಿಯನ್ನು ಈ ದಿಕ್ಕಿನಲ್ಲಿಯೂ ಇಡಬಾರದು, ಇಲ್ಲಿ ಇಟ್ಟರೆ ಬಡತನ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಹೆಚ್ಚು ನಕಾರಾತ್ಮಕ ಆಲೋಚನೆಗಳು ಉದ್ಭವಿಸುತ್ತವೆ. ಇದರೊಂದಿಗೆ, ವೃತ್ತಿಜೀವನದಲ್ಲಿ(career life) ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಉತ್ತರ

ಉತ್ತರ ದಿಕ್ಕನ್ನು ಕುಬೇರ ದೇವರ ದಿಕ್ಕು ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಕಸದ ಬುಟ್ಟಿಗಳನ್ನು ಈ ದಿಕ್ಕಿನಲ್ಲಿಯೂ ಇಡಬಾರದು. ಈ ದಿಕ್ಕಿನಲ್ಲಿ ಕಸದ ಬುಟ್ಟಿಗಳನ್ನು ಇಟ್ರೆ ಮಾನಸಿಕ (mental problem), ಆರ್ಥಿಕ ಮತ್ತು ದೈಹಿಕ ಸಮಸ್ಯೆಗಳು ಹೆಚ್ಚುತ್ತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಒಂದು ರೀತಿಯ ಸಮಸ್ಯೆ ಹೆಚ್ಚುತ್ತೆ.
 

click me!