ಈ ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಟ್ರೆ ಸಾಲ ಹೆಚ್ಚಾಗುತ್ತೆ!

First Published Oct 4, 2022, 5:12 PM IST

ನೀವು ವಾಸಿಸುವ ಸ್ಥಳವು ನಿಮ್ಮ ಪ್ರೆಸೆಂಟ್ ಮತ್ತು ಭವಿಷ್ಯವನ್ನು ನಿರ್ಧರಿಸುತ್ತೆ. ಬ್ಯುಸಿಯಾದ ಈ ಜೀವನದಲ್ಲಿ, ಜೀವನಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾದ ಕೆಲವು ವಿಷಯಗಳನ್ನು ನಾವು ನಿರ್ಲಕ್ಷಿಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆ ಅಥವಾ ಮನೆಯ ಹೊರಗಿನ ವಸ್ತುಗಳು ನಿಮ್ಮ ಸಾಮಾಜಿಕ, ಆರ್ಥಿಕ ಮತ್ತು ಕುಟುಂಬ ಜೀವನದ ಮೇಲೆ ಗಾಢವಾದ ಪರಿಣಾಮ ಬೀರುತ್ತೆ ಮತ್ತು ಇದು ನಿಮ್ಮ ಭವಿಷ್ಯದ ಜೀವನ ಹೇಗಿರುತ್ತೆ ಎಂಬುದನ್ನು ನಿರ್ಧರಿಸುತ್ತೆ.

ಮೇನ್ ಗೇಟ್ (Main gate) ಮುಂದೆ ಕೆಲವು ವಸ್ತುಗಳನ್ನು ಹೊಂದಿರೋದು ಕೆಟ್ಟದು ಎಂದು ಪರಿಗಣಿಸಲಾಗುತ್ತೆ, ಇದು ವಾಸ್ತು ದೋಷಗಳನ್ನು ಹೆಚ್ಚಿಸುತ್ತೆ , ಇದು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೆ ಅಶುಭ ಪರಿಣಾಮ ಬೀರುತ್ತೆ. ಇವು ಸಾಲದ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತೆ. ಮೇನ್ ಗೇಟ್ ಮುಂದೆ ಯಾವ ವಸ್ತುಗಳು ಇರಬಾರದು ಎಂದು ತಿಳಿಯೋಣ...

ಹಣಕ್ಕೆ(Money) ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೊರಗೆ ಕಸ ಇರಬಾರದು. ಮುಖ್ಯ ದ್ವಾರದ ಹೊರಗಿನ ಕೊಳೆಯಿಂದಾಗಿ, ಇದು ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ, ಹಾಗೆಯೇ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ವಾಸ್ತು ಪ್ರಕಾರ ಕಸದ ಉಪಸ್ಥಿತಿಯನ್ನು ಶೋಕದ ಅಂಶವೆಂದು ಪರಿಗಣಿಸಲಾಗುತ್ತೆ. ಆದ್ದರಿಂದ ಮೇನ್ ಗೇಟಿನಿಂದ ಈ ವಸ್ತುಗಳನ್ನು ಸ್ವಚ್ಛಗೊಳಿಸಿ.

ಮನೆಯ ಮಕ್ಕಳ ಮೇಲೆ ಅಶುಭ ಪರಿಣಾಮ
ಮೇನ್ ಗೇಟ್  ಬಳಿ ಮರ ಮತ್ತು ಸಸ್ಯಗಳು ಇರಬಾರದು. ವಾಸ್ತು ಪ್ರಕಾರ, ಇದು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತೆ ಮತ್ತು ಮನೆಯ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ. ಆದ್ದರಿಂದ, ಮನೆ ನಿರ್ಮಿಸುವಾಗ ಅಥವಾ ಖರೀದಿಸುವಾಗ, ನಿಮ್ಮ ಮನೆಯ ಬಳಿ ಯಾವುದೇ ಮರಗಳಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ವಾಸ್ತುವಿನ ಪ್ರಕಾರ, ಮನೆಯ ಮುಂದೆ ಮರವನ್ನು(Tree) ಹೊಂದಿರೋದು ಬಾಲದೋಷಕ್ಕೆ ಕಾರಣವಾಗುತ್ತೆ.

ಮನೆಯ ಮಾಲೀಕರಿಗೆ ಇದು ಒಳ್ಳೆಯದಲ್ಲ.
ಮೇನ್ ಗೇಟ್  ಮುಂದೆ ಯಾವುದೇ ನೇರ ಮಾರ್ಗ ಇರಬಾರದು ಎಂಬುದನ್ನು ನೆನಪಿಡಿ. ಅನೇಕ ಮನೆಗಳಲ್ಲಿ ಬೀದಿಯು ಅವರ ಮನೆಯ ಮುಂದೆ ಕೊನೆಗೊಳ್ಳುತ್ತೆ, ಅಂದರೆ, ಅವರ ಮನೆಯ ಮುಂಭಾಗದಿಂದ ನೇರ ದಾರಿ(Road) ಹೋಗುತ್ತೆ. ಇದರಿಂದ ಮನೆಯ ಸದಸ್ಯರ ನಡುವಿನ ಪರಸ್ಪರ ಪ್ರೀತಿ ಕೊನೆಗೊಳ್ಳುತ್ತೆ.

ಆರೋಗ್ಯದ ಮೇಲೆ ಅಶುಭ ಪರಿಣಾಮ
ಮೇನ್ ಗೇಟ್  ಮುಂದೆ ಎಂದಿಗೂ ಒಳಚರಂಡಿ(Drainage) ಇರಬಾರದು, ಹಾಗೆ ಮಾಡೋದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ. ವಾಸ್ತು ಪ್ರಕಾರ, ಈ ವಸ್ತುಗಳನ್ನು ಮನೆಯ ಹೊರಗೆ ಹೊಂದಿರೋದು ಮನೆಯ ಸದಸ್ಯರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತೆ ಮತ್ತು ಸಾಕಷ್ಟು ಹಣದ ನಷ್ಟ ಸಂಭವಿಸುತ್ತೆ. ಆದ್ದರಿಂದ ಅಂತಹ ವಸ್ತುಗಳನ್ನು ಮನೆಯ ಮುಂಭಾಗದಿಂದ ದೂರವಿಡಿ.

ಮನೆಯಲ್ಲಿರುವ ಮಹಿಳೆಯರಿಗೆ(Woman) ಸಮಸ್ಯೆಗಳಾಗುತ್ತೆ 
ಮೇನ್ ಗೇಟ್ ಮುಂದೆ ವಿದ್ಯುತ್ ಕಂಬಗಳು ಇರಬಾರದು. ಇದು ಮನೆಯ ಮಹಿಳೆಯರ ಮೇಲೆ ಅಶುಭ ಪರಿಣಾಮ ಬೀರುತ್ತೆ, ಇದರಿಂದ ವೃತ್ತಿಯಾಗಿರಲಿ ಅಥವಾ ಕುಟುಂಬದಲ್ಲಾಗಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮನೆಯನ್ನು ನಿರ್ಮಿಸುವಾಗ ಅಥವಾ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂದೆ ಯಾವುದೇ ದೇವಾಲಯ (Temple) ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಮನೆಯ ಮುಂದೆ ದೇವಾಲಯ ಅಥವಾ ಧಾರ್ಮಿಕ ಸ್ಥಳ ಹೊಂದಿರೋದರಿಂದ, ಕೆಲವು ಸಮಸ್ಯೆ ಅಥವಾ ಬಿಕ್ಕಟ್ಟು ಸಂಭವಿಸುತ್ತೆ. ಅಲ್ಲದೆ, ಇದು ಮನೆಯ ಸದಸ್ಯರ ಮೇಲೆ ಅಶುಭ ಪರಿಣಾಮ ಬೀರುತ್ತೆ. ಅಲ್ಲದೆ, ಬಾಗಿಲಿನ ಮುಂದೆ ಯಾವುದೇ ಬಾಗಿಲು ಇಲ್ಲ ಎಂಬುದನ್ನು ನೆನಪಿನಲ್ಲಿಡಿ, ಮನೆಯನ್ನು ಚೆನ್ನಾಗಿ ಕಾಣುವಂತೆ ಮಾಡಲು ಅನೇಕ ಜನರು ಇದನ್ನು ಮಾಡುತ್ತಾರೆ, ಆದರೆ ಇದು ಸರಿಯಲ್ಲ.

click me!