Zee Kutumba Awards: ನಿಮ್ಮ ನೆಚ್ಚಿನ ತಾರೆಯರಿಗೆ ಒಲಿಯಿತಾ ಪ್ರಶಸ್ತಿಯ ಗರಿ?

First Published | Nov 11, 2023, 2:48 PM IST

ಝೀ ಕನ್ನಡದಲ್ಲಿ ಝೀ ಕುಟುಂಬ ಅವಾರ್ಡ್ಸ್ (Zee Kutumba Awards) ಸಂಭ್ರಮದಿಂದ ನಡೆಯುತ್ತಿದ್ದು, ಮೊದಲ ದಿನದ ಸಂಭ್ರಮ ಬಹಳ ಅದ್ಧೂರಿಯಾಗಿಯೇ ನಡೆದಿದೆ. ಈ ಸಂಭ್ರಮದಲ್ಲಿ ಮೊದಲ ದಿನ ಯಾರ್ಯಾರಿಗೆ ಯಾವ ಯಾವ ಅವಾರ್ಡ್ಸ್ ಬಂದಿದೆ ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ. 
 

ನೆಚ್ಚಿನ ಅಮ್ಮ 
ಈ ಅವಾರ್ಡ್ ಇಬ್ಬರ ಪಾಲಾಗಿದೆ. ಗಟ್ಟಿ ಮೇಳ (Gattimela) ಸೀರಿಯಲ್ ನಲ್ಲಿ ಅಮ್ಮ ವೈದೇಹಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸ್ವಾತಿ (Swathi) ಅವರಿಗೆ ಪ್ರಶಸ್ತಿ ಲಭಿಸಿದೆ ಹಾಗೂ ಅಮೃತಧಾರೆ ಭೂಮಿ ಅಮ್ಮನಾಗಿ ಅಭಿನಯಿಸುತ್ತಿರುವ ಚಿತ್ರಾ ಶೆಣೈ ಪಾಲಾಗಿದೆ.

ನೆಚ್ಚಿನ ಅಮ್ಮ 
ನೆಚ್ಚಿನ ಅಮ್ಮಈ ಪ್ರಶಸ್ತಿ ಪಡೆದುಕೊಂಡ ಮತ್ತೊಬ್ಬ ನಟಿ ಚಿತ್ರಾ ಶೆಣೈ (Chitra Shenoy). ಇವರು ಅಮೃತಧಾರೆ (Amruthadhare) ಸೀರಿಯಲ್ ನಲ್ಲಿ ಭೂಮಿಕಾ ತಾಯಿಯಾಗಿ ಅಭಿನಯಿಸುತ್ತಿದ್ದಾರೆ. 

Tap to resize

ನೆಚ್ಚಿನ ಮಗಳು 
ಕಳೆದ ಐದು ವರ್ಷಗಳಿಂದ ಪ್ರೇಕ್ಷಕರಿಗೆ ರಸದೌತಣ ಉಣಿಸುತ್ತಿರುವ ಪಾರು ಧಾರಾವಾಹಿಯ (Paaru Serial) ಪಾರು ಪಾತ್ರಧಾರಿ ಮೋಕ್ಷಿತಾ ಪೈ (Mokshitha Pai) ನೆಚ್ಚಿನ ಮಗಳು ಪ್ರಶಸ್ತಿ (best daughter award) ಪಡೆದು ಕೊಂಡಿದ್ದಾರೆ. 

ನೆಚ್ಚಿನ ಮಗ 
ಅದೇ ರೀತಿ ಮನೆಯವರಿಗಾಗಿ ಸದಾ ಕಾಲ ಏನು ಬೇಕಾದರೂ ಮಾಡಲು ತಯಾರಿರುವ ಪಾರು ಸೀರಿಯಲ್ ನ (Serial) ಆದಿತ್ಯ ಪಾತ್ರಧಾರಿ ಶರತ್ ಪದ್ಮನಾಭ್ (Sharath Padmanabhan) ಅವರಿಗೆ ಈ ಪ್ರಶಸ್ತಿ ಬಂದಿದೆ. 

ಪೋಷಕ ನಟಿ 
ಇನ್ನು ಝೀ ಕುಟುಂಬ ಅವಾರ್ಡ್ಸ್ (Zee Kutumba Awards) ಪೋಷಕ ನಟಿ ಪ್ರಶಸ್ತಿ ಕೂಡ ಇಬ್ಬರು ಗೆದ್ದಿದ್ದಾರೆ.  ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವನ ಸೊಸೆ, ಅವಿಯ ಹೆಂಡ್ತಿ ಪೂರ್ಣಿಯಾಗಿ ನಟಿಸುತ್ತಿರುವ ಲಾವಣ್ಯ ಶಶಿ ಹೆಗ್ಡೆ ಪ್ರಶಸ್ತಿ ಗೆದ್ದಿದ್ದಾರೆ. 

ಪೋಷಕ ನಟಿ 
ಸತ್ಯ ಸೀರಿಯಲ್ ನಲ್ಲಿ ಸತ್ಯಾ ಅಕ್ಕ ದಿವ್ಯಾ ಆಗಿ ನಟಿಸುತ್ತಿರುವ ಪ್ರಿಯಾಂಕಾ ಶಿವಣ್ಣ (Priyanka Shivanna) ಸಹ ಝೀ ಕುಟುಂಬ ಅವಾರ್ಡ್‌ನಲ್ಲಿ ನೆಚ್ಚಿನ ಪೋಷಕ ನಟಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.  

ಸ್ಟೈಲ್ ಐಕಾನ್ 
ಝೀ ಕನ್ನಡದ ನೆಚ್ಚಿನ ಸ್ಟೈಲ್ ಐಕಾನ್ (Style Icon) ಪ್ರಶಸ್ತಿಯನ್ನು ಹಿಟ್ಲರ್ ಕಲ್ಯಾಣ ಖ್ಯಾತಿಯ ಎಜೆ ಆಲಿಯಾಸ್ ದಿಲೀಪ್ ರಾಜ್ ಪಡೆದುಕೊಂಡಿದ್ದಾರೆ. ಸೀರಿಯಲ್ ನಲ್ಲಿ ಇವರ ಸ್ಟೈಲ್ ಗೆ ಹೆಚ್ಚಿನ ಜನರು ಅಭಿಮಾನಿಗಳಾಗಿದ್ದಾರೆ. 

ಉದಯೋನ್ಮುಖ ತಾರೆ
ಇನ್ನು ಝೀ ಕನ್ನಡದ ಝೀ ವರ್ಷದ ಉದಯೋನ್ಮುಖ ತಾರೆ ಪ್ರಶಸ್ತಿಯನ್ನು ತಮ್ಮ ಮುದ್ದು ಮುದ್ದಾದ ಅಭಿನಯ ಮಾತುಗಳಿಂದ ಸದ್ಯ ಸಹಸ್ರಾರು ಅಭಿಮಾನಿಗಳನ್ನು ಪಡೆದಿರುವ ಬಾಲಪ್ರತಿಭೆ ಸೀತಾ ರಾಮ ಸೀರಿಯಲ್ ನ ಸಿಹಿ ಆಲಿಯಾಸ್ ರೀತು ಸಿಂಗ್ ಪಡೆದುಕೊಂಡಿದ್ದಾರೆ. 

ನೆಚ್ಚಿನ ಪೋಷಕ ನಟ 
ನೆಚ್ಚಿನ ಪೋಷಕ ನಟ ಪ್ರಶಸ್ತಿಯನ್ನು ಜನರ ಮೆಚ್ಚಿನ ಧಾರಾವಾಹಿಯಾಗಿರುವ ಭೂಮಿಗೆ ಬಂದ ಭಗವಂತ ಸೀರಿಯಲ್ ನಲ್ಲಿ ಭಗವಂತ ಶಿವನ ಪಾತ್ರದಲ್ಲಿ ಮಿಂಚುತ್ತಿರುವ ಕಾರ್ತಿಕ್ ಸಾಮಗ (Karthik Samaga) ಅವರಿಗೆ ನೀಡಲಾಗಿದೆ. 
 

ಖಳ ನಟಿ 
ನೆಚ್ಚಿನ ಖಳನಟಿ ಪ್ರಶಸ್ತಿ ಕೂಡ ಇಬ್ಬರ ಪಾಲಾಗಿದೆ. ಸೀತಾ ರಾಮ ಸೀರಿಯಲ್ ನಲ್ಲಿ ರಾಮನ ಚಿಕ್ಕಮ್ಮನಾಗಿ, ರಾಮನ ಎಲ್ಲಾ ಆಸ್ತಿಯನ್ನು ಹೊಡೆಯಲು ಸಂಚು ಹಾಕುತ್ತಿರುವ ಭಾರ್ಗವಿ ಪಾತ್ರ ನಿರ್ವಹಿಸುತ್ತಿರುವ ಪೂಜಾ ಲೋಕೇಶ್ (Pooja Lokesh) ಅವರಿಗೆ ಲಭಿಸಿದೆ

ಖಳ ನಟಿ
ಶ್ರೀರಸ್ತು ಶುಭಮಸ್ತು ಸೀರಿಯಲ್ (Serial) ನಲ್ಲಿ ಖಳ ನಟಿಯಾಗಿ ಸೇಡು ತೀರಿಸುತ್ತಾ, ಎಲ್ಲರ ಎದುರು ಒಳ್ಳೆಯವರಂತೆ ನಟಿಸುತ್ತಿರುವ ಶಾರ್ವರಿ ಪಾತ್ರಧಾರಿ ನೇತ್ರಾ ಜಾಧವ್  (Netra Jadhav) ಅವರಿಗೆ ನೀಡಲಾಗಿದೆ.

ಖಳ ನಟ
ಇನ್ನು ನೆಚ್ಚಿನ ಖಳ ನಟ ಪ್ರಶಸ್ತಿಯನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಿಲನ್  (Villain) ಆಗಿ ನಟಿಸುತ್ತಿರುವ ಕಾಳಿ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ಕಾಳಿ ಪುಟ್ಟಕ್ಕನ ಗಂಡನ ಎರಡನೇ ಹೆಂಡತಿಯ ತಮ್ಮನಾಗಿ ನಟಿಸುತ್ತಿದ್ದಾರೆ.
 

ನೆಚ್ಚಿನ ಅಪ್ಪ 
ನೆಚ್ಚಿನ ಅಪ್ಪ ಪ್ರಶಸ್ತಿಯನ್ನು ಜನಮನ ಗೆದ್ದ ಶ್ರೀರಸ್ತು ಶುಭಮಸ್ತು (Shrirastu Shubhamastu serial) ಸೀರಿಯಲ್ ನಲ್ಲಿ ತಂದೆಯಾಗಿ ಪಾತ್ರನಿರ್ವಹಿಸುತ್ತಿರುವ ಮಾಧವ್ ಅಂದರೆ ಅಜಿತ್ ಹಂದೆ (Ajith Hande)  ಅವರಿಗೆ ಒಲಿದಿದೆ. 
 

Latest Videos

click me!